ಐಎಲ್‍ಸಿ ಶಿಫಾರಸು ಜಾರಿಗೆ ಅಂಗನವಾಡಿ ನೌಕರರ ಆಗ್ರಹ

 ತುರುವೇಕೆರೆ:

      ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಹಂತಹಂತವಾಗಿ ಕೇಂದ್ರದಿಂದ ನೀಡುವ ಶೇಕಡ 75ರಷ್ಟು ಅನುದಾವನ್ನು ಕಡಿತ ಮಾಡಿರುವುದು ಬಡಜನ ವಿರೋಧಿ ಕ್ರಮವಾಗಿದೆ. ಹಾಗೆಯೇ ಅಪೌಷ್ಠಕತೆಯಿಂದ ಬಳಲುವ ಮಕ್ಕಳು ಮತ್ತು ಮಹಿಳೆಯರಿಗೆ ಖರ್ಚು ಮಾಡಲು ತಯಾರಿಲ್ಲದ ಸರ್ಕಾರ ಲಕ್ಷಗಟ್ಟಲೆ ಕೋಟಿಗಳ ತೆರಿಗೆ ವಿನಾಯಿತಿಯನ್ನು ಶ್ರೀಮಂತ ಉದ್ಯಮಿಗಳಿಗೆ ನೀಡುತ್ತಿದೆ. ಇದು ಸರ್ಕಾರ ಯಾರ ಪರ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ ಸಿಐಟಿಯು ರಾಜ್ಯಧ್ಯಕ್ಷರು ಹಾಗೂ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಆಪಾದಿಸಿದರು.

      ತುರುವೇರೆ ಪಟ್ಟಣದ ಸಿದ್ದರಾಮೇಶ್ವ ಸಮುದಾಯ ಭವನದಲ್ಲಿ ನಡೆಯುತ್ತಿರುವ ರಾಜ್ಯ ಅಂಗನವಾಡಿ ನೌಕರರ ಸಂಘದ ತುಮಕೂರು ಜಿಲ್ಲೆಯ ಆರನೇ ಸಮ್ಮೇನಳನ ಉದ್ಘಾಟಿಸಿ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಅಂಗನವಾಡಿ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ಕೂಲಿ ಪಿಂಚಣಿ ಹಾಗೂ ಸೇವಾಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದೆ. ಅಂಗನವಾಡಿಗಳನ್ನು ಶಾಲಾಪೂರ್ವ ಶಿಕ್ಷಣದ ಭಾಗವಾಗಿ ಕಡ್ಡಾಯ ಗೊಳಿಸುವಂತೆ ಆಗ್ರಹಿಸಿದರು.

      ದೇಶದಲ್ಲಿ 28ಲಕ್ಷ ನೌಕರರು ಸರ್ಕಾರಿ ಯೋಜನೆಗಳನ್ನು ತಳಹಂತದಲ್ಲಿ ಜಾರಿಗೊ ಳಿಸುತ್ತಿದ್ದು ಅವರಿಗೆ ಸೂಕ್ತ ರಕ್ಷಣೆಯಿಲ್ಲದೆ ದಬ್ಬಾಳಿಕೆ, ದೌರ್ಜನ್ಯಗಳು ನಡೆಯುತ್ತಿರುವುದು ಖಂಡನಾರ್ಹ. ಇದರ ಜೊತೆಗೆ ಸಂಘಟನೆ ನಿರಂತರವಾಗಿ ನ್ಯಾಯಬದ್ದ ಬೇಡಿಕೆಗಳಿಗಾಗಿ ಹೋರಾಠುತ್ತಿದೆ ಎಂದರು.

      ಕೇಂದ್ರ ಕಾರ್ಮಿಕ ಸಂಘಟನೆಗಳು ಜನವರಿ 8, 9 ರಂದು ನಡೆಸುತ್ತಿರುವ ದೇಶವ್ಯಾಪಿ ದೇಶಪ್ರೇಮಿ ಹೋರಾಟದಲ್ಲಿ ಅಂಗನವಾಡಿಗಳನ್ನು ಬಂದ್ ಮಾಡುವ ಮೂಲಕ ಮುಷ್ಕರದಲ್ಲಿ ಭಾಗವಹಿಸಲಿದ್ದೇವೆ ಎಂದು ಹೇಳಿದರು.

      ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮಜೀಬ್ ಮಾತನಾಡಿ, ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ದಬ್ಬಳಿಕ ಭ್ರಷ್ಟಾಚಾರಗಳ ವಿರುದ್ದ ಹೋರಾಟದ ಕಿಚ್ಚನ್ನು ಹಚ್ಚುವ ಸಂಘಟನೆಗಳು ಅಗತ್ಯವೆಂದರು. ಅರ್ಧ ಗಂಟೆಗೊಬ್ಬ ಅನ್ನದಾತ ಸಾಯುತ್ತಿದ್ದರೂ ನಾಗರಿಕ ಪ್ರಜ್ಞಾವಂತ ಸಮಾಜ ಸೂಕ್ತವಾಗಿ ಸ್ಪಂದಿಸದೇ ಇರುವುದು ವಿಷಾದನೀಯ. ಬೆಲೆ ಏರಿಕೆ, ಸಾಮಾಜಿಕ ಭದ್ರತೆಗಾಗಿ ಒತ್ತಾಯಿಸಿ ಜನವರಿ 8, 9 ರಂದು ನಡೆಯುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಜಿಲ್ಲೆಯ ರೈತ ಕಾರ್ಮಿಕರು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

      ಕುವೆಂಪು ಜನ್ಮದಿನಾಚರಣೆ ಸಂದರ್ಭದಲ್ಲಿ ಅವರ ವೈಚಾರಿಕ ಮತ್ತು ಸೌಹಾರ್ದತೆ ಸಾರುವ ಆಶಯಗಳು ಸಮಾಜಕ್ಕೆ ಅಗತ್ಯವಿದೆ. ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

      ಸಮಾರಂಭದ ಆರಂಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ಕಮಲ, ಸಂಘಟನೆಯು ನೌಕರರ ಹಕ್ಕುಗಳಿಗೆ ಹೋರಾಡುತ್ತಲೇ ಸಮಾಜದಲ್ಲಿ ಅಪೌಷ್ಠಿಕತೆ ಆರೋಗ್ಯ ಶಿಶುಮರಣ ಇತ್ಯಾದಿ ವಿಚಾರಗಳಲ್ಲಿ ತಳಹಂತದಲ್ಲಿ 40ಕ್ಕೂ ಹೆಚ್ಚು ವರ್ಷಗಳಿಂದ ದುಡಿಯುತ್ತಾ ಬಂದಿದೆ. ಅಂಗನವಾಡಿ ನೌಕರರು ನಿವೃತ್ತಿಯಾದಾಗ ಪಿಂಚಣಿ ಇಲ್ಲದೆ ಬದುಕಬೇಕಾಗಿದೆ. ಹೀಗಾಗಿ ಪಿಂಚಣಿ ನೀಡಬೇಕೆಂದು ಒತತ್ತಾಯಿಸಿದರು.

      ಸಮ್ಮೇಳನದ ಆರಂಭದಲ್ಲಿ ಮಂಜುಳ ಸ್ವಾಗತಿಸಿದರು. ತೀರ್ಥಕುಮಾರಿ ವಂದಿಸಿದರು. ಜ್ಯೋತಿ ನಿರೂಪಿಸಿದರು. ವೇದಿಕೆಯಲ್ಲಿ ಸಿಐಟಿಯು ತುರುವೇಕೆರೆ ತಾಲಕ್ಷ ಅಧ್ಯಕ್ಷ ಡಿ.ಎಚ್.ಸತೀಶ್, ಸಂಘ ತಾಲೂಕು ಅಧ್ಯಕ್ಷೆ ವಸಂತಕುಮಾರಿ, ಪ್ರಧಾನ ಕಾರ್ಯದರ್ಶಿ ಭಾಗ್ಯ, ಕಟಟಡ ಕಾರ್ಮಿಕ ಸಂಘದ ರಮೇಶ್, ಖಜಾಂಚಿ ಅನಸೂಯ, ಹಿರಿಯ ಉಪಾಧ್ಯಕ್ಷರೆ ಪಾರ್ವತ್ಮಮ್ಮ ಅನಸೂಯ, ಅನ್ನಪೂರ್ಣಮ್ಮ ಎಲ್ಲಾ ತಾಲೂಕಿನ ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

(Visited 8 times, 1 visits today)

Related posts

Leave a Comment