ಒಂದೇ ದಿನ 7 ಆನೆಗಳ ದುರ್ಮರಣ

ಧೆಂಕನಲ್:

      ಒಡಿಶಾದ ಧೆಂಕನಲ್ ಜಿಲ್ಲೆಯ ಕಮಲಾಂಗ ಎಂಬ ಹಳ್ಳಿಯಲ್ಲಿ ಶನಿವಾರ ಬೆಳಿಗ್ಗೆ ಏಳು ಆನೆಗಳು ದುರ್ಮರಣಕ್ಕೀಡಾಗಿವೆ.

      ವಿದ್ಯುತ್ ಸ್ಪರ್ಶದಿಂದಾಗಿ ಆನೆಗಳು ಅಸುನೀಗಿರಬಹುದು ಎಂದು ಅಂದಾಜಿಸಲಾಗಿದೆ. ವಿದ್ಯುತ್ ಹರಿಯುತ್ತಿದ್ದ ತಂತಿಯನ್ನು ಆನೆಗಳ ಗುಂಪು ಹಾದುಹೋಗುವುದಕ್ಕೆ ಪ್ರಯತ್ನಿಸಿದಾಗ ಈ ಘಟನೆ ನಡೆದಿರಬಹುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಘಟನೆ ಕುರಿತಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.

      ಮಾನವನಿರ್ಮಿತ ಕಾರಣಗಳಿಂದ ವನ್ಯಮೃಗಗಳು ಅಸುನೀಗುತ್ತಿರುವ ಘಟನೆ ನಿರಂತರವಾಗಿ ನಡೆಯುತ್ತಿದೆ. ಇಂಥ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಮತ್ತು ಅಕಸ್ಮಾತ್ ಇಂಥ ಘಟನೆಗಳು ನಡೆದರೆ ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪರಿಸರವಾದಿಗಳು, ವನ್ಯಜೀವಿ ಪ್ರೇಮಿಗಳು ಆಗ್ರಹಿಸಿದ್ದಾರೆ.

 

 

(Visited 9 times, 1 visits today)

Related posts

Leave a Comment