BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಡಿ.ದೇವರಾಜ ಅರಸುರವರ ೧೧೧ನೇ ಜನ್ಮ ದಿನಾಚರಣೆ
  • ರಾಜೀವ್‌ಗಾಂಧಿ ಹಾಗೂ ದೇವರಾಜು ಅರಸು ಅವರ ಜನ್ಮ ದಿನಾಚರಣೆ
  • ಸರ್ವರ್ ಸಮಸ್ಯೆ: ಪಡಿತರಕ್ಕಾಗಿ ೨ ದಿನಗಳಿಂದ ಕಾದು ಕುಳಿತ ಗ್ರಾಹಕರು
  • ಈ ಬಾರಿ ಹಬ್ಬ ಬಲು ದುಬಾರಿ
  • ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಜನ್ಮದಿನಾಚರಣೆ
  • ೩೮ ಕೆರೆಗಳ ಪೈಕಿ ೨೩ ಕೆರೆಗಳು ಸಂಪೂರ್ಣ ಖಾಲಿ
  • ಸಂವಿಧಾನದ ಆಶಯಗಳನ್ನು ಮೂರ್ತ ರೂಪಕ್ಕೆ ತಂದ ಮಹಾನ್ ಚೇತನ ಡಿ.ದೇವರಾಜು ಅರಸು
  • ಮಕ್ಕಳ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ: ಸಂತೋಷ್ ಕುಮಾರ್
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕನ್ನಡಿಗರೆಲ್ಲರೂ ಒಟ್ಟಾದರೆ ಮಾತ್ರ ಇಡೀ ಕರ್ನಾಟಕ ಉಳಿಯುತ್ತದೆ
ತುಮಕೂರು ಜಿಲ್ಲಾ ಸುದ್ಧಿಗಳು

ಕನ್ನಡಿಗರೆಲ್ಲರೂ ಒಟ್ಟಾದರೆ ಮಾತ್ರ ಇಡೀ ಕರ್ನಾಟಕ ಉಳಿಯುತ್ತದೆ

By News Desk BenkiyabaleUpdated:November 01, 2018 4:38 pm

ಚಿಕ್ಕನಾಯಕನಹಳ್ಳಿ:

      ಕರ್ನಾಟಕ ಒಂದು ಮಾಡಿದ ಭಾಗದಿಂದಲೇ ಇಂದು ವಿಭಜನೆ ಮಾತು ಕೇಳಿ ಬರುತ್ತಿದೆ. ಕನ್ನಡಿಗರೆಲ್ಲರೂ ಒಟ್ಟಾದರೆ ಮಾತ್ರ ಇಡೀ ಕರ್ನಾಟಕ ಉಳಿಯುತ್ತದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.

      ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಭಿವೃದ್ದಿ ಹಾಗೂ ತಾರತಮ್ಯ ಹೆಸರಿನಲ್ಲಿ ಕರ್ನಾಟಕ ಒಡೆಯುವ ಮಾತುಗಳು ಸರಿಯಲ್ಲ, ಇಡೀ ಕರ್ನಾಟಕ-ಕನ್ನಡಿಗರು ಒಂದಾಗಿದ್ದರೆ ಮಾತ್ರ ಬೆಳವಣಿಗೆ ಕಾಣುತ್ತದೆ, 1956ರ ನವಂಬರ್ 1ರಂದು ಅನೇಕ ಕವಿಗಳು, ಹೋರಾಟಗಾರರ ಫಲವಾಗಿ ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸಲಾಯಿತು, ಹೋರಾಟದ ಆಶಯದಂತೆ 1973ರ ನವಂಬರ್ 1ರಂದೇ ಕರ್ನಾಟಕ ರಾಜ್ಯ ಎಂದು ನಾಮಕರಣಗೊಂಡಿತು, ಇದರ ಸವಿ ನೆನಪಿಗಾಗಿಯೇ ಪ್ರತಿ ವರ್ಷ ನವಂಬರ್ ತಿಂಗಳು ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದರು.

      ಪ್ರತಿಯೊಬ್ಬ ಕನ್ನಡಿಗನು ಈ ನೆಲ, ಜಲದ ಅಭಿಮಾನ ಇಮ್ಮಡಿಸಿಕೊಳ್ಳಬೇಕು, ಸುದೀರ್ಘ ಇತಿಹಾಸವುಳ್ಳ ಕನ್ನಡ ಭಾಷೆ, ಕರ್ನಾಟಕದ ವೈಭವ ಮತ್ತೆ ಮರುಕಳಿಸಬೇಕು ಎಂದ ಅವರು, ದೇಶದಲ್ಲಿ ಶೇ.33%ರಷ್ಠಿರಬೇಕಾಗಿದ್ದ ಅರಣ್ಯ ಪ್ರದೇಶ ಇಂದು ಶೇ.17% ಇದೆ, ಅರಣ್ಯವಿಲ್ಲದೆ ಮಳೆ ಇಲ್ಲ-ಬೆಳೆ ಇಲ್ಲದಂತಾಗಿದೆ, ನಾವೆಲ್ಲರೂ ಸೇರಿ ಅರಣ್ಯ ಮತ್ತು ನೀರಿನ ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು.

      ತಹಶೀಲ್ದಾರ್ ಸೋಮಪ್ಪ ಕಡಕೋಳ ಮಾತನಾಡಿ, ಕನ್ನಡ ನಾಡು ಸಾಹಿತ್ಯ, ಕಲೆ, ಸಂಸ್ಕøತಿಗಳ ನೆಲವೀಡು ಸುಮಾರು 2ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಕರುನಾಡಿನ ಗತ ವೈಭವವು ಇತಿಹಾಸದ ಪುಟಗಳಲ್ಲಿ ಸೇರಿದೆ, ಕಪ್ಪು ಮಣ್ಣಿನ ನಾಡು ಎಂದು ಕರೆಯುವ ಈ ನೆಲ ಅನೇಕ ಕವಿ ಚಿಂತಕರು ಬರಹಗಾರರ ತ್ಯಾಗದ ಹೋರಾಟದ ಫಲವಾಗಿದೆ, ಕರ್ನಾಟಕ ಅನೇಕ ಜೀವ ನದಿಗಳ ತಾಣವಾಗಿ, ವಿಶ್ವಪರಂಪರೆಯ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ನಮ್ಮ ಐತಿಹಾಸಿಕ ವೈಭವಕ್ಕೆ ಸಾಟಿಯಾಗಿದೆ ಎಂದರು.

      ಕನ್ನಡದ ಈ ನೆಲ ಕವಿ ಸಂತ, ಋಷಿ ಮುನಿಗಳ ತವರೂರು ಮಾನವ ಜಾತಿ ತಾನೊಂದೆ ವಲಂ, ಎನ್ನುವ ಮನುಷ್ಯ ಪ್ರೇಮವನ್ನು ಬಿತ್ತಿದ ಕನ್ನಡದ ಆದಿಕವಿ ಪಂಪ, ಚಂಪೂ ಸಾಹಿತ್ಯ ನೀಡಿದ ರನ್ನ, ಪೊನ್ನ, ಜನ್ನರಂತಹ ಕವಿಗಳ ಕಾವ್ಯ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದೆ, ವಚನಕಾರರಾದ ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ನೀಲಾಂಬಿಕೆ, ಗಂಗಾಬಿಕೆ, ಸಂಚಿಹೊನ್ನಮ್ಮ, ಹೆಳವನಕಟ್ಟೆ ಗಿರಿಯಮ್ಮರಂತಹ ಕವಿಗಳ ಕಾವ್ಯ ಜಗತ್ತು ಕನ್ನಡ ನಾಡನ್ನು ಶತಮಾನಗಳಿಂದ ಬೆಳಗುತ್ತಲೇ ಬಂದಿದೆ ಹಾಗೂ ಸಾಹಿತ್ಯದ ಬೆಳವಣಿಗೆಯ ಜೊತೆಯಲ್ಲಿ ಸಮಾಜದ ಮೂಡನಂಬಿಕೆ ಕಂದಾಚಾರ, ನಿಯಮಗಳನ್ನು ಸರಿಪಡಿಸಿ ಸಮಸಮಾಜದ ಕನಸು ಕಂಡ ಕನಕದಾಸರ ಸಾಹಿತ್ಯ, ಜಾತಿ, ಮತ, ವರ್ಗ, ವರ್ಣಗಳಿಂದ ಮುಕ್ತವಾದ ನಿರ್ಮಾಣಕ್ಕೆ ಅವರ ಕೀರ್ತನ ಸಾಹಿತ್ಯ ಒತ್ತು ನೀಡಿತು ಎಂದ ಅವರು, ವಿಶ್ವಮಾನವ ಸಂದೇಶ ನೀಡಿದ ಕುವೆಂಪು ಕನ್ನಡ ಭಾಷೆಯನ್ನು ವಿಶ್ವಮಾನ್ಯಗೊಳಿಸಿ ಹಲವಾರು ಪ್ರಶಸ್ತಿಗಳನ್ನು ಕನ್ನಡದ ತಾಯಿಗೆ ಮುಡಿಸಿದ್ದಾರೆ, ಶಿವರಾಮಕಾರಂತರು, ದ.ರಾ.ಬೇಂದ್ರೆ, ಪಿ.ಲಂಕೇಶ್, ಪೂರ್ಣಚಂದ್ರ, ತೇಜಸ್ವಿ, ಬರಗೂರು ರಾಮಚಂದ್ರಪ್ಪ, ದೇವನೂರು ಮಹಾದೇವ, ಸಿದ್ದಲಿಂಗಯ್ಯ, ಸಾ.ರಾ.ಅಬೂಬಕರ್, ಬಿ.ಎಂ.ಶ್ರೀಕಂಠಯ್ಯ, ತೀ.ನಂ.ಶ್ರೀಕಂಠಯ್ಯನಂತಹ ದಿಗ್ಗಜರು ಕನ್ನಡ ಸಾಹಿತ್ಯದ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು.

 ಕಾರ್ಯಕ್ರಮದಲ್ಲಿ ಬಿಇಓ ಕಾತ್ಯಾಯಿನಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಎನ್.ಇಂದಿರಮ್ಮ, ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ ಉಪಸ್ಥಿತರಿದ್ದರು.

(Visited 29 times, 1 visits today)
Previous Articleಡೇಲಿಹಂಟ್ ಸಮೀಕ್ಷೆ : ನಿರ್ಣಾಯಕ ನಾಯಕರಾದ ಪ್ರಧಾನಿ ಮೋದಿ
Next Article ಬಯಲು ಬಹಿರ್ದೆಸೆ ಮುಕ್ತ ರಾಜ್ಯ: 62ಲಕ್ಷ ಶೌಚಾಲಯ ನಿರ್ಮಾಣದ ಗುರಿ
News Desk Benkiyabale

Related Posts

ಡಿ.ದೇವರಾಜ ಅರಸುರವರ ೧೧೧ನೇ ಜನ್ಮ ದಿನಾಚರಣೆ

August 20, 2026 5:51 pm news

ರಾಜೀವ್‌ಗಾಂಧಿ ಹಾಗೂ ದೇವರಾಜು ಅರಸು ಅವರ ಜನ್ಮ ದಿನಾಚರಣೆ

August 20, 2026 4:59 pm news

ಸರ್ವರ್ ಸಮಸ್ಯೆ: ಪಡಿತರಕ್ಕಾಗಿ ೨ ದಿನಗಳಿಂದ ಕಾದು ಕುಳಿತ ಗ್ರಾಹಕರು

August 20, 2026 4:57 pm news
ತಾಜಾ ಸುದ್ಧಿಗಳು
news

ಡಿ.ದೇವರಾಜ ಅರಸುರವರ ೧೧೧ನೇ ಜನ್ಮ ದಿನಾಚರಣೆ

August 20, 2026 5:51 pm
news

ರಾಜೀವ್‌ಗಾಂಧಿ ಹಾಗೂ ದೇವರಾಜು ಅರಸು ಅವರ ಜನ್ಮ ದಿನಾಚರಣೆ

August 20, 2026 4:59 pm
news

ಸರ್ವರ್ ಸಮಸ್ಯೆ: ಪಡಿತರಕ್ಕಾಗಿ ೨ ದಿನಗಳಿಂದ ಕಾದು ಕುಳಿತ ಗ್ರಾಹಕರು

August 20, 2026 4:57 pm
news

ಈ ಬಾರಿ ಹಬ್ಬ ಬಲು ದುಬಾರಿ

August 20, 2026 4:53 pm
news

ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಜನ್ಮದಿನಾಚರಣೆ

August 20, 2026 4:51 pm
news

೩೮ ಕೆರೆಗಳ ಪೈಕಿ ೨೩ ಕೆರೆಗಳು ಸಂಪೂರ್ಣ ಖಾಲಿ

August 20, 2026 4:50 pm
Our Youtube Channel
Our Picks

ಡಿ.ದೇವರಾಜ ಅರಸುರವರ ೧೧೧ನೇ ಜನ್ಮ ದಿನಾಚರಣೆ

August 20, 2026 5:51 pm

ರಾಜೀವ್‌ಗಾಂಧಿ ಹಾಗೂ ದೇವರಾಜು ಅರಸು ಅವರ ಜನ್ಮ ದಿನಾಚರಣೆ

August 20, 2026 4:59 pm

ಸರ್ವರ್ ಸಮಸ್ಯೆ: ಪಡಿತರಕ್ಕಾಗಿ ೨ ದಿನಗಳಿಂದ ಕಾದು ಕುಳಿತ ಗ್ರಾಹಕರು

August 20, 2026 4:57 pm

ಈ ಬಾರಿ ಹಬ್ಬ ಬಲು ದುಬಾರಿ

August 20, 2026 4:53 pm

ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಜನ್ಮದಿನಾಚರಣೆ

August 20, 2026 4:51 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಡಿ.ದೇವರಾಜ ಅರಸುರವರ ೧೧೧ನೇ ಜನ್ಮ ದಿನಾಚರಣೆ

By News Desk BenkiyabaleAugust 20, 2026 5:51 pm

ತುಮಕೂರು: ಮಾಜಿ ಮುಖ್ಯಮಂತ್ರಿ ಹಾಗೂ ಸಾಮಾಜಿಕ ನ್ಯಾಯದ ಹರಿಕಾರರೆಂದು ಹೆಸರಾಗಿರುವ ಶ್ರೀ ಡಿ. ದೇವರಾಜ ಅರಸು ಅವರ ೧೧೧ನೇ ಜನ್ಮ…

ರಾಜೀವ್‌ಗಾಂಧಿ ಹಾಗೂ ದೇವರಾಜು ಅರಸು ಅವರ ಜನ್ಮ ದಿನಾಚರಣೆ

August 20, 2026 4:59 pm

ಸರ್ವರ್ ಸಮಸ್ಯೆ: ಪಡಿತರಕ್ಕಾಗಿ ೨ ದಿನಗಳಿಂದ ಕಾದು ಕುಳಿತ ಗ್ರಾಹಕರು

August 20, 2026 4:57 pm

ಈ ಬಾರಿ ಹಬ್ಬ ಬಲು ದುಬಾರಿ

August 20, 2026 4:53 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.