ಹಾವೇರಿ:
ಗೋವಾ ಪ್ರವಾಸ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಕಾರು ಪಲ್ಟಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟು, ಐವರು ಗಾಯಗೊಂಡ ಘಟನೆ ಹೊರವಲಯದ ಆರ್ಟಿಒ ಕಚೇರಿ ಹಿಂಭಾಗದ ಬೈಪಾಸ್ನಲ್ಲಿ ನಡೆದಿದೆ.
ಮೃತರನ್ನು ನಿತಿನ್ (22), ಅರ್ಜುನ್ (22) ಎಂದು ಗುರುತಿಸಲಾಗಿದೆ. ನಿತಿನ್ ಹರಿಹರ ಮೂಲದವರು ಹಾಗೂ ಅರ್ಜುನ್ ಬೆಂಗಳೂರಿನವರು. ಇವರಿಬ್ಬರು ಸೇರಿ ಒಟ್ಟು 7 ಇಂಜಿನಿಯರ್ ವಿದ್ಯಾರ್ಥಿಗಳು ಮಹೀಂದ್ರಾ ಕ್ವಾಂಟೋ ಕಾರಿನಲ್ಲಿ ಗೋವಾ ಪ್ರವಾಸಕ್ಕೆ ಹೋಗಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು. ಹಾವೇರಿ ಬಳಿ ಬರುತ್ತಿದ್ದಂತೆ ಕಾರು ಸಿನಿಮೀಯ ರೀತಿಯಲ್ಲಿ ಪಲ್ಟಿಯಾಗಿ 50 ಮೀಟರ್ಗಳಷ್ಟು ದೂರ ಹೋಗಿ ಬಿದ್ದಿದೆ. ಗಾಯಗೊಂಡ ಐವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
(Visited 9 times, 1 visits today)