ಕೊಳವೆ ಬಾವಿಗಳ ಕೇಬಲ್ ಮೇಲೆ ಕಳ್ಳರ ಕಣ್ಣು

ಕೊರಟಗೆರೆ


ರೈತರಿಗೆ ಸಮಯಕ್ಕೆ ಸರಿಯಾಗಿ ವಿದ್ಯುತ್ ಸೌಲಭ್ಯವು ಮರೀಚಿಕೆ.. ಹಗಲುರಾತ್ರಿ ಎನ್ನದೇ ಬಿತ್ತನೆ ಮಾಡಿದ ಬೆಳೆ ರಕ್ಷಣೆಗೆ ಹರಸಾಹಸ ಪಡುತ್ತಿರೂ ರೈತಾಪಿವರ್ಗ. ಇದರ ನಡುವೆ ರಾತ್ರೋರಾತ್ರಿ ೨೫ಕ್ಕೂ ಅಧಿಕ ಕಡೆ ರೈತರ ಕೊಳವೆ ಬಾವಿಗಳ ಕೇಬಲ್ ಕಳ್ಳತನ. ಕೇಬಲ್ ಕಳ್ಳರ ಕೈಚಳಕಕ್ಕೆ ಕಡಿವಾಣ ಹಾಕದೇ ಮೊಬೈಲ್ ಸ್ವೀಚ್‌ಆಪ್ ಮಾಡಿಕೊಂಡ ಕೋಳಾಲ ಪಿಎಸೈ.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ನೀಲಗೊಂಡನಹಳ್ಳಿ, ಎಲೆರಾಂಪುರ, ವಜ್ಜನಕುರಿಕೆ ಮತ್ತು ಕೋಳಾಲ ಗ್ರಾಪಂ ವ್ಯಾಪ್ತಿಯ ೧೦ಕ್ಕೂ ಅಧಿಕ ಗ್ರಾಮದ ವಾಟರ್‌ಸಪ್ಲೆöÊ ಸೇರಿದಂತೆ ೨೫ಕ್ಕೂ ಅಧಿಕ ಕಡೆ ರೈತರ ಕೊಳವೆ ಬಾವಿಗಳ ಕೇಬಲ್ ಮತ್ತು ಮೇನ್ಸ್ ವೈರ್‌ಗಳು ಸರಣಿಯಾಗಿ ಕಳ್ಳತನ ನಡೆಯುತ್ತೀವೆ. ಕಳ್ಳತನ ನಡೆದ್ರು ಪ್ರಕರಣ ದಾಖಲಿಸದೇ ಪೊಲೀಸರು ಗ್ರಾಪಂಯ ಸದಸ್ಯರ ಜೊತೆಗೂಡಿ ರೈತರನ್ನು ಸಮಾಧಾನ ಪಡಿಸುವುದೇ ಕಾಯಕವಾಗಿದೆ.
೨೫ಕ್ಕೂ ಅಧಿಕ ಕಡೆ ಸರಣಿ ಕಳ್ಳತನ:
ಕೆ.ಜಿ.ಬೇವಿನಹಳ್ಳಿಯ ರೈತ ಕೃಷ್ಣಮೂರ್ತಿ, ವೀರಣ್ಣ, ಗ್ರಾಪಂಗೆ ಸೇರಿದ ೩ಕೊಳವೆಬಾವಿ, ವಜ್ಜನಕುರಿಕೆಯ ರೈತ ರವಿಕುಮಾರ್, ರಾಮಣ್ಣಮೇಷ್ಟುç, ಹನುಮಂತನಪಾಳ್ಯದ ರೈತ ವೀರಣ್ಣ, ದುಡ್ಡನಹಳ್ಳಿ ಗ್ರಾಮದ ಗ್ರಾಪಂಯ ಕೊಳವೆಬಾವಿ, ವಡ್ಡರಹಳ್ಳಿಯ ಕಮಲೇಶ್, ಸಂಕೇನಹಳ್ಳಿ ರೈತ ಶಿವಕುಮಾರ್, ಹೊನ್ನಗಂಗಯ್ಯ, ಗ್ರಾಪಂಯ ೩ಕೊಳವೆಬಾವಿಗಳಲ್ಲಿ ಕಳೆದ ೧೫ದಿನಗಳಿಂದ ೨೫ಕಡೆಗಳಲ್ಲಿ ಸರಣಿ ಕೇಬಲ್ ಕಳ್ಳತನ ನಡೆಯುತ್ತಲೆ ಇದ್ದರೂ ಕೋಳಾಲ ಪೊಲೀಸರ ಮೌನಕ್ಕೆ ಕಾರಣವೇನು ಎಂಬುದೇ ಯಕ್ಷಪ್ರಶ್ನೆ.
ಕರೆ ಸ್ವೀಕರಿಸದ ಕೋಳಾಲ ಪಿಎಸೈ :
ಕೋಳಾಲ ವ್ಯಾಪ್ತಿಯ ರೈತಾಪಿವರ್ಗ ಅಥ ವಾ ಬಡಜನತೆ ತುರ್ತುವೇಳೆ ದೂರವಾಣಿ ಕರೆ ಮಾಡಿದ್ರು ಕೋಳಾಲ ಪಿಎಸೈ ಕರೆ ಸ್ವೀಕರಿಸುತ್ತಿಲ್ಲ. ಮತ್ತೇ ಭಾನುವಾರ ಮತ್ತು ರಜೆ ದಿನಗಳಲ್ಲಿ ಸರಕಾರಿ ಮೊಬೈಲ್ ಸ್ವೀಚ್‌ಆಪ್ ಆಗಿರುತ್ತೇ. ಬೀಟ್ ಪೊಲೀಸರು ಬರ್ತಾರೇ ಪತ್ತೇ ಹಚ್ಚುತ್ತೀವಿ ಅಂತಾ ಹೇಳಿ ಹೋಗ್ತಾರೇ. ಕೇಬಲ್ ಕಳ್ಳತನದ ಮಾಹಿತಿ ಎಸ್‌ಪಿ ಮತ್ತು ಡಿವೈಎಸ್ಪಿಗೆ ತಿಳಿದರೇ ತನಿಖೆಯ ಒತ್ತಡ ಮತ್ತು ಭದ್ರತೆಯ ಮಾಹಿತಿ ಕೇಳ್ತಾರೇ ಎಂಬ ಭಯದಿಂದ ಪ್ರಕರಣವನ್ನೇ ಮುಚ್ಚಿಹಾಕುವ ಪ್ರಯತ್ನ ಸೋಗಸಾಗಿಯೇ ನಡೆಯುತ್ತಿದೆ ಎಂದು ರೈತರು ಆರೋಪ ಮಾಡಿದ್ದಾರೆ.
ತಡರಾತ್ರಿ ಬರ್ತಾರೆ ರೈತರೇ ಹುಷಾರ್..
ದಾಬಸ್‌ಪೇಟೆ – ಕೊರಟಗೆರೆ ರಾಜ್ಯ ಹೆದ್ದಾರಿಯ ಸಮೀಪದ ಗ್ರಾಮಗಳಿಗೆ ಕತರ್ನಾಕ್ ಕೇಬಲ್ ಕಳ್ಳರ ತಂಡ ಹಗಲುವೇಳೆ ಆಗಮಿಸಿ ವಾಟರ್‌ಸಪೈ ಮತ್ತು ರೈತರ ಕೊಳವೆಬಾವಿ ಗುರುತಿಸುತ್ತಾರೇ. ತಡರಾತ್ರಿ ಅವುಗಳನ್ನೇ ಟಾರ್ಗೇಟ್ ಮಾಡಿ ಲಕ್ಷಾಂತರ ರೂ ಮೌಲ್ಯದ ಕೇಬಲ್ ಮತ್ತು ವೈರ್‌ಗಳನ್ನು ಕಳ್ಳತನ ಮಾಡ್ತಾರೇ. ತುಮಕೂರು ಜಿಲ್ಲೆಯ ನೂತನ ಎಸ್ಪಿ ಮತ್ತು ಮಧುಗಿರಿ ಡಿವೈಎಸ್ಪಿ ವೆಂಕಟೇಶನಾಯ್ಡು ಕಳ್ಳತನವಾದ ಗ್ರಾಮಗಳಿಗೆ ಬೇಟಿನೀಡಿ ಕಳ್ಳರನ್ನ ಪತ್ತೇ ಹಚ್ಚಬೇಕಾಗಿದೆ.

(Visited 1 times, 1 visits today)