BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಹುಳಿಯಾರು: ಬಸ್ ನಿಲ್ದಾಣದ ಬಳಿ ನಿತ್ಯ ಕಸಕ್ಕೆ ಬೆಂಕಿ
  • ಪುರಾತನ ದೇವಸ್ಥಾನಗಳ ಸಂರಕ್ಷಣೆಯಾಗಲಿ: ಸಿದ್ಧಲಿಂಗ ಸ್ವಾಮೀಜಿ
  • ಹತ್ತಿ ಬಿತ್ತನೆಗೆ ಕಾನೂನುಬದ್ಧ ಒಪ್ಪಂದ ಕಡ್ಡಾಯ
  • ವಕ್ಫ್ ತಿದ್ದುಪಡಿ ಹಿಂಪಡೆಯುವ0ತೆ ಪ್ರತಿಭಟನೆ
  • ನಾಲಾ ಕಾಮಗಾರಿಯ ಚಾನಲ್‌ರಕ್ಷಣೆಗೆ ೧೫೦ಕೋಟಿ ರೂ. ಅನುದಾನ ನೀಡುವಂತೆ ಕೇಂದ್ರಸಚಿವರಿಗೆ ಶಾಸಕ ಮನವಿ
  • ಎಸ್‌ಸಿ,ಎಸ್‌ಟಿ ಕುಂದುಕೊರತೆ ಸಭೆ ಕಡ್ಡಾಯ: ಡಿ.ಸಿ
  • ಲಿ0ಕ್ ಕೆನಾಲ್ ಯೋಜನೆ ಅವೈಜ್ಞಾನಿಕವಾಗಿದೆ
  • ಇನ್ನರ್ ವಿಲ್ ಸಂಸ್ಥೆ ಸಮಾಜದಲ್ಲಿ ಪರಸ್ಪರ ಸೇವಾ ಸಹಕಾರ ನೀಡುತ್ತಿದೆ: ಭವಾನಿ ಜಯರಾಮ್
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಹುಳಿಯಾರು: ಬಸ್ ನಿಲ್ದಾಣದ ಬಳಿ ನಿತ್ಯ ಕಸಕ್ಕೆ ಬೆಂಕಿ
ತುಮಕೂರು

ಹುಳಿಯಾರು: ಬಸ್ ನಿಲ್ದಾಣದ ಬಳಿ ನಿತ್ಯ ಕಸಕ್ಕೆ ಬೆಂಕಿ

ವಿಷಕಾರಿ ಹೊಗೆಯಿಂದ ಆರೋಗ್ಯ ಸಮಸ್ಯೆ, ಮೂಗು ಮುಚ್ಚಿ ಜನರ ಓಡಾಟ
By News Desk BenkiyabaleUpdated:July 05, 2025 3:34 pm
ಹುಳಿಯಾರು: ಹುಳಿಯಾರು ಬಸ್ ನಿಲ್ದಾಣಕ್ಕೆ ಬರುವವರು ಪ್ರಕೃತಿಯ ಕರೆಗಳನ್ನು ಮನೆಯಲ್ಲೇ ಮುಗಿಸಿಕೊಂಡು ಬನ್ನಿ ಎಂದು ಸುದ್ದಿ ಮಾಡಿದಾಯ್ತು. ಹುಳಿಯಾರು ಬಸ್ ನಿಲ್ದಾಣಕ್ಕೆ ಬರುವವರು ಕುಡಿಯುವ ನೀರನ್ನು ಮನೆಯಿಂದಲೇ ತನ್ನಿ ಎನ್ನುವ ಸುದ್ದಿಯನ್ನೂ ಮಾಡಿದಾಯ್ತು. ಈಗ ಹುಳಿಯಾರು ಬಸ್ ನಿಲ್ದಾಣಕ್ಕೆ ಬರುವವರು ವಿಷಕಾರಿ ಹೊಗೆಯ ರಕ್ಷಣೆಗೆ ಒಳ್ಳೆಯ ಮಾಸ್ಕ್ ಹಾಕ್ಕೊಂಡು ಬನ್ನಿ ಎನ್ನುವ ಸುದ್ದಿ ಮಾಡುವ ಸರದಿ.
           ಹೌದು, ಹುಳಿಯಾರು ಪಟ್ಟಣ ಪಂಚಾಯ್ತಿಯ ನಿರ್ಲಕ್ಷö್ಯದಿಂದಾಗಿ ಕಳೆದ ಎರಡ್ಮೂರು ವರ್ಷಗಳಿಂದಲೂ ಬಸ್ ನಿಲ್ದಾಣದಲ್ಲಿ ಶುದ್ದ ಕುಡಿಯುವ ನೀರಿಲ್ಲ ಹಾಗೂ ಶೌಚಾಲಯ ಇಲ್ಲ. ಈಗ ಬಸ್ ನಿಲ್ದಾಣದ ಹೊಸ ಸಮಸ್ಯೆಯಾಗಿದೆ ವಿಷಕಾರಿ ಹೊಗೆ. ಬಸ್ ನಿಲ್ದಾಣದ ಪಕ್ಕದಲ್ಲೇ ನಿತ್ಯ ಕಸಕ್ಕೆ ಬೆಂಕಿ ಇಡುತ್ತಿದ್ದು ಇದರಿಂದ ಹೊರಸೂಸುವ ಹೊಗೆಯದ್ದು ದೊಡ್ಡ ಸಮಸ್ಯೆಯಾಗಿದೆ. ಬೆಳಗ್ಗೆಯ ವೇಳೆ ಪಂಚಾಯ್ತಿಯವರು ಇಟ್ಟರೆ, ಮಧ್ಯಾಹ್ನ ಅಂಗಡಿ, ಹೋಟಲ್‌ನವರು, ರಾತ್ರಿ ಬಾರ್‌ನವರು ಹೀಗೆ ನಿತ್ಯ ಬೆಳಗ್ಗೆಯಿಂದ ಸಂಜೆವರೆವಗೂ ಯಾರಾದರೊಬ್ಬರು ಬೆಂಕಿ ಹಾಕುತ್ತಲೇ ಇರುತ್ತಾರೆ.
          ಪಂಚಾಯ್ತಿಯವರು ಕಸ ವಿಲೇವಾರಿ ಘಟಕ ನಿರ್ಮಿಸಿಲ್ಲವಾದ್ದರಿಂದ ನಿತ್ಯ ಬೆಳಗ್ಗೆ ಪಟ್ಟಣದ ಬೀದಿ ಕಸ ಗುಡಿಸಿದ ನಂತರ ಸಂಗ್ರಹವಾದ ತ್ಯಾಜ್ಯವನ್ನು ಬಸ್ ನಿಲ್ದಾಣದ ಪಕ್ಕದ ಕೆರೆ ದಡಕ್ಕೆ ತಂದು ಸುರಿದು ಬೆಂಕಿ ಹಾಕಿ ಹೋಗುತ್ತಾರೆ. ಅಂಗಡಿ, ಹೋಟಲ್, ಬಾರ್‌ನವರು ತಮ್ಮಲ್ಲಿನ ತ್ಯಾಜ್ಯವನ್ನು ತಂದು ಕೆರೆ ದಡದಲ್ಲೇ ಸುರಿದು ಬೆಂಕಿ ಇಟ್ಟು ತೊಂದರೆ ಕೊಡುವ ಪ್ರವೃತ್ತಿ ರೂಢಿಸಿಕೊಂಡಿದ್ದಾರೆ. ಪರಿಣಾಮ ಬೆಳಗ್ಗೆಯಿಂದ ಸಂಜೆಯವರೆವಿಗೆ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ವಾಹನ ಸವಾರರು, ವ್ಯಾಪಾರಿಗಳು, ಸಾರ್ವಜನಿಕರು ಬೆಂಕಿಯ ಕೆನ್ನಾಲಿಗೆಯಲ್ಲಿ ಸುಡುವ ಪ್ಲಾಸ್ಟಿಕ್ ಕವರ್, ಪೇಪರ್,  ಹೊರಸೂಸುವ ವಿಷಕಾರಿ ಹೊಗೆಯನ್ನು ಕುಡಿಯುವುದು ಅನಿವಾರ್ಯ ಕರ್ಮವಾಗಿದೆ.
          ಪತ್ರಿ ನಿತ್ಯ ಕೆರೆ ಏರಿಯ ಮೇಲೆ ವಾಯುವಿಹಾರಕ್ಕೆ ಬರುವವರು ಈ ವಿಷಕಾರಿ ಗಾಳಿಗೆ ಹೆದರಿ ವಾಯುವಿಹಾರದ ಮಾರ್ಗವನ್ನೇ ಬದಲಾಯಿಸಿದ್ದಾರೆ. ಕೆರೆ ಏರಿಯ ಮೇಲಿನ ರಸ್ತೆಯ ಮೂಲಕ ಶಾಲಾಕಾಲೇಜಿಗೆ ಓಡಾಡುತ್ತಿದ್ದ ವಿದ್ಯಾರ್ಥಿಗಳು ರಾಷ್ಟಿçÃಯ ಹೆದ್ದಾರಿಯಲ್ಲಿ ಓಡಾಡುತ್ತಿದ್ದಾರೆ. ಇನ್ನು ಬಸ್ ನಿಲ್ದಾಣದಲ್ಲಿ ಬಸ್‌ಗಳಿಗಾಗಿ ಕಾಯುವವರು ಸೀರೆಯ ಸೆರಗೋ, ಕರ್ಚಿಪ್ಪೋ, ವೇಲ್‌ನಲ್ಲೂ ಮೂಗು ಮುಚ್ಚಿಕೊಳ್ಳಬೇಕಿದೆ. ಇದು ಒಂದೆರಡು ದಿನಗಳದಲ್ಲ ನಿತ್ಯದ ಸಮಸ್ಯೆಯಾಗಿದ್ದರೂ ಸಹ ಪಂಚಾಯ್ತಿಯವರು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.
          ಪಂಚಾಯ್ತಿಯವರು ರಾಶಿಗಟ್ಟಲೆ ಸಂಗ್ರಹವಾಗುವ ಕಸಕ್ಕೆ ಒಮ್ಮೆಲೆ ಬೆಂಕಿ ಇಡುವುದರಿಂದ ಬೆಂಕಿಯ ಜ್ವಾಲೆ ಹತ್ತದಿನೈದು ಅಡಿ ಎತ್ತರದವರೆವಿಗೆ ಏರುತ್ತದೆ. ಸಮೀಪದ ಮರಗಳು, ವಿದ್ಯುತ್ ಮಾರ್ಗಕ್ಕೆ ಇದರಿಂದ ಹಾನಿಯಾಗುವ ಸಾಧ್ಯತೆಇದೆ. ಅಲ್ಲದೆ ಸಮೀಪದಲ್ಲಿರುವ ಗೂಡಂಗಡಿಗಳಿಗೆ ಬೆಂಕಿಯ ಕೆನ್ನಾಲಿಗೆ ತಗುಲಿ ಬೆಂಕಿ ಅವಘಡ ಸಂಭವಿಸುವ ಸಾಧ್ಯತೆ ಇದೆ. ಅಲ್ಲದೆ ದಡ್ಡವಾಗಿ ಏಳುವ ಹೊಗೆ ವಾಹನ ಸಾವರರಿಗೆ ತೊಂದರೆಯಾಗಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಅನಾಹುತ ಸಂಭವಿಸುವ ಮುನ್ನ ಕಸ ಹಾಕುವವರು ಹಾಗೂ ಕಸಕ್ಕೆ ಬೆಂಕಿ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ದುರ್ವಾಸನೆಯ ಹೊಗೆ ಕುಡಿದು ಸಾಕಾಗಿದೆ
         ನನ್ನದೊಂದು ಖಾಸಗಿ ಬಸ್ ಇದೆ. ನಿತ್ಯ ಮುಂಜಾನೆ ಶಿರಾ ರೂಟ್ ಬಸ್ ಕಳುಹಿಸಲು ಬಸ್ ನಿಲ್ದಾಣಕ್ಕೆ ಬರುತ್ತೇನೆ. ಇಲ್ಲಿಗೆ ಬಂದಾಗಿನಿAದಲೂ ಮೂಗು ಮುಚ್ಚಿಕೊಂಡು ಓಡಾಡಬೇಕು. ಅಷ್ಟರಮಟ್ಟಿಗೆ ದುರ್ವಾಸನೆಯ ಹೊಗೆ ಬರುತ್ತದೆ. ಬಸ್ ಹತ್ತಲು ಬರುವ ಪ್ರಯಾಣಿಕರು ಇದೇನ್ರಿ ನಿಮ್ಮೂರ ಬಸ್ ಸ್ಟಾಂಡ್‌ನಲ್ಲಿ ೫ ನಿಮಿಷ ನಿಲ್ಲೋದಕ್ಕಾಗದಷ್ಟು ಹೊಗೆ. ಪಂಚಾಯ್ತಿಯವರಿಗೆ ಹೇಳಿ ಇದಕ್ಕೆ ಕಡಿವಾಣ ಹಾಕಿಸಿ ಎನ್ನುತ್ತಾರೆ. ಆದರೆ ಬೇಲಿಯೇ ಎದ್ದು ಹೊಲ ಮೈದಂತೆ ಪಂಚಾಯ್ತಿಯವರೇ ಬೆಂಕಿ ಇಟ್ಟರೆ ಯಾರಿಗೆ ದೂರೋದು ಹೇಳಿ?
         >    ರಾಜಣ್ಣ, ಖಾಸಗಿ ಬಸ್ ಮಾಲೀಕ, ಹುಳಿಯಾರು
            ನಿತ್ಯ ಬೆಳಗ್ಗೆ ಪೂಜೆ ಹೂ ಬಿಡಿಸಿಕೊಂಡು ಹೋಗುವಾಗ ಬಸ್ ನಿಲ್ದಾಣದ ಟೀ ಅಂಗಡಿಯಲ್ಲಿ ಅರ್ದ ಟೀ ಕುಡಿದು ಹೋಗುವುದನ್ನು ಸುಮಾರು ವರ್ಷಗಳಿಂದ ಹವ್ಯಾಸ ಮಾಡಿಕೊಂಡಿದ್ದೇನೆ. ಹೋಟೆಲ್‌ನವರು ಟೀ ಹಾಕಿ ಕೊಡುವವರೆವಿಗೂ, ಕೊಟ್ಟ ಟೀ ಕುಡಿಯುವವರೆವಿಗೂ ಪುಕ್ಕಟ್ಟೆಯಾಗಿ ಈ ಹೊಗೆ ಕುಡಿಯಬೇಕಿದೆ. ಹೊಗೆ ಕುಡಿದು ಆರೋಗ್ಯ ಏಕೆ ಹಾಳುಮಾಡಿಕೊಳ್ಳೋಣವೆಂದು ಟೀ ಕುಡಿಯದೆ ಹೋಗುತ್ತಿದ್ದೇನೆ.
         >    ಪುಟ್ಟರಾಜು, ಸ್ಥಳೀಯ ನಿವಾಸಿ, ಹುಳಿಯಾರು
ಬೆಂಕಿ ಹಾಕದಂತೆ ಎಚ್ಚರಿಕೆ ನೀಡಿದ್ದೇನೆ 
          ಪೌರಕಾರ್ಮಿಕರು ಕಸಕ್ಕೆ ಬೆಂಕಿ ಇಡದಂತೆ ಎಚ್ಚರಿಕೆ ನೀಡಿದ್ದೇನೆ. ಒಂದು ಪಕ್ಷ ಅವರೇ ಇಟ್ಟಿದ್ದರೆ ನೋಟಿಸ್ ಕೊಡುತ್ತೇನೆ. ಬೇರೆಯವರು ಇಟ್ಟಿದ್ದರೆ ದಂಡ ವಿಧಿಸುತ್ತೇವೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಈಗಲೇ ಹೆಲ್ತ್ ಇನ್ಸ್ಪೆಕ್ಟರ್ ಅವರಿಗೆ ಸೂಚನೆ ನೀಡುತ್ತೇನೆ.
         >   ನಾಗಭೂಷಣ್, ಮುಖ್ಯಾಧಿಕಾರಿ, ಪಪಂ, ಹುಳಿಯಾರು
(Visited 1 times, 1 visits today)
tumkur ಹುಳಿಯಾರು
Previous Articleಪುರಾತನ ದೇವಸ್ಥಾನಗಳ ಸಂರಕ್ಷಣೆಯಾಗಲಿ: ಸಿದ್ಧಲಿಂಗ ಸ್ವಾಮೀಜಿ
News Desk Benkiyabale

Related Posts

ಪುರಾತನ ದೇವಸ್ಥಾನಗಳ ಸಂರಕ್ಷಣೆಯಾಗಲಿ: ಸಿದ್ಧಲಿಂಗ ಸ್ವಾಮೀಜಿ

July 05, 2025 3:31 pm ತುಮಕೂರು

ಹತ್ತಿ ಬಿತ್ತನೆಗೆ ಕಾನೂನುಬದ್ಧ ಒಪ್ಪಂದ ಕಡ್ಡಾಯ

July 05, 2025 3:30 pm ತುಮಕೂರು

ವಕ್ಫ್ ತಿದ್ದುಪಡಿ ಹಿಂಪಡೆಯುವ0ತೆ ಪ್ರತಿಭಟನೆ

July 05, 2025 3:28 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ಹುಳಿಯಾರು: ಬಸ್ ನಿಲ್ದಾಣದ ಬಳಿ ನಿತ್ಯ ಕಸಕ್ಕೆ ಬೆಂಕಿ

July 05, 2025 3:34 pm
ತುಮಕೂರು

ಪುರಾತನ ದೇವಸ್ಥಾನಗಳ ಸಂರಕ್ಷಣೆಯಾಗಲಿ: ಸಿದ್ಧಲಿಂಗ ಸ್ವಾಮೀಜಿ

July 05, 2025 3:31 pm
ತುಮಕೂರು

ಹತ್ತಿ ಬಿತ್ತನೆಗೆ ಕಾನೂನುಬದ್ಧ ಒಪ್ಪಂದ ಕಡ್ಡಾಯ

July 05, 2025 3:30 pm
ತುಮಕೂರು

ವಕ್ಫ್ ತಿದ್ದುಪಡಿ ಹಿಂಪಡೆಯುವ0ತೆ ಪ್ರತಿಭಟನೆ

July 05, 2025 3:28 pm
ತುಮಕೂರು

ನಾಲಾ ಕಾಮಗಾರಿಯ ಚಾನಲ್‌ರಕ್ಷಣೆಗೆ ೧೫೦ಕೋಟಿ ರೂ. ಅನುದಾನ ನೀಡುವಂತೆ ಕೇಂದ್ರಸಚಿವರಿಗೆ ಶಾಸಕ ಮನವಿ

July 05, 2025 3:27 pm
ತುಮಕೂರು

ಎಸ್‌ಸಿ,ಎಸ್‌ಟಿ ಕುಂದುಕೊರತೆ ಸಭೆ ಕಡ್ಡಾಯ: ಡಿ.ಸಿ

July 05, 2025 3:26 pm
Our Youtube Channel
Our Picks

ಪತ್ರಿಕೋದ್ಯಮ ವಿದ್ಯರ‍್ಥಿಗಳು ಪತ್ರಿಕೋದ್ಯಮದ ಆಸ್ತಿಗಳಾಗಲಿ

July 01, 2025 3:52 pm

೧೭ ಮಹಿಳೆಯರು ಸೇರಿ ೩೨ ಮಂದಿಗೆ ಗಾಯ

June 30, 2025 3:48 pm

ಒಕ್ಕಲಿಗರ ಸಂಘಟನೆಗೆ ಹೊಸ ಚೇತನ ಕೆಂಪೇಗೌಡರು

June 28, 2025 3:39 pm

ಹೆಣ್ಣು ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲಿ

June 28, 2025 3:38 pm

ಡಾ. ಶ್ರೀ ಶ್ರೀ ಶ್ರೀಶಿವಕುಮಾರ ಶ್ರೀಗಳ ಗ್ರಂಥ ಲೋಕಾರ್ಪಣೆ

June 28, 2025 3:37 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು

ಹುಳಿಯಾರು: ಬಸ್ ನಿಲ್ದಾಣದ ಬಳಿ ನಿತ್ಯ ಕಸಕ್ಕೆ ಬೆಂಕಿ

By News Desk BenkiyabaleJuly 05, 2025 3:34 pm

ಹುಳಿಯಾರು: ಹುಳಿಯಾರು ಬಸ್ ನಿಲ್ದಾಣಕ್ಕೆ ಬರುವವರು ಪ್ರಕೃತಿಯ ಕರೆಗಳನ್ನು ಮನೆಯಲ್ಲೇ ಮುಗಿಸಿಕೊಂಡು ಬನ್ನಿ ಎಂದು ಸುದ್ದಿ ಮಾಡಿದಾಯ್ತು. ಹುಳಿಯಾರು ಬಸ್…

ಪುರಾತನ ದೇವಸ್ಥಾನಗಳ ಸಂರಕ್ಷಣೆಯಾಗಲಿ: ಸಿದ್ಧಲಿಂಗ ಸ್ವಾಮೀಜಿ

July 05, 2025 3:31 pm

ಹತ್ತಿ ಬಿತ್ತನೆಗೆ ಕಾನೂನುಬದ್ಧ ಒಪ್ಪಂದ ಕಡ್ಡಾಯ

July 05, 2025 3:30 pm

ವಕ್ಫ್ ತಿದ್ದುಪಡಿ ಹಿಂಪಡೆಯುವ0ತೆ ಪ್ರತಿಭಟನೆ

July 05, 2025 3:28 pm
News by Date
July 2025
M T W T F S S
 123456
78910111213
14151617181920
21222324252627
28293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.