ಹುಳಿಯಾರು:

      ಹಂದನಕೆರೆ ಹೋಬಳಿ ಡಗ್ಗೇನಹಳ್ಳಿ ಗ್ರಾಮದ ಕೃಷಿ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 12.7 ಕೆಜಿ ಗಾಂಜಾವನ್ನು ಹಂದನಕೆರೆ ಪೊಲೀಸರು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

      ಮಂಜುನಾಥ್ ಬಂಧಿತ ಆರೋಪಿ. ದಗ್ಗೇನಹಳ್ಳಿ ಗ್ರಾಮದ ಸರ್ವೆ ನಂ. 28ರ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದಾರೆ ಎಂದು ಹಂದನಕೆರೆ ಪೊಲೀಸ್ ಮೋಹನ್ ಹಾಗೂ ಕಿರಣ್ ಗಸ್ತು ತಿರುಗುತ್ತಿದ್ದಾಗ ಖಚಿತ ಪಡಿಸಿಕೊಂಡು ಸಿಪಿಐ ಎ.ಸುರೇಶ್ ಅವರಿಗೆ ಮಾಹಿತಿ ನೀಡಿದ ಬಳಿಕ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

(Visited 50 times, 1 visits today)