Author: News Desk Benkiyabale

ತುಮಕೂರು: ಕ್ರಿಯೇಟಿವ್ ೫ ಇವೆಂಟ್ಸ್ ಕಂಪೆನಿಯ ಹೆಸರನ್ನು ದುರುಪಯೋಗ ಪಡಿಸಿಕೊಂಡು, ಆಡಿಷನ್ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದವರ ಮೇಲೆ ತಿಲಕ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕ್ರಿಯೇಟಿವ್ ೫ ಇವೆಂಟ್ಸ್ ಸಂಸ್ಥೆಯನ್ನು ಪತ್ರಕರ್ತ ಧನಂಜಯ್ ಅವರನ್ನು ನೋಂದಣಿ ಮಾಡಿಸಿದ್ದು, ಲೇಬಲ್ ರಿಜಿಸ್ಟೆçÃಷನ್ ಟ್ರೇಡ್ ಮಾರ್ಕ್ ಹಾಗೂ ಲೋಗೊ ರಿಜಿಸ್ಟೆçÃಷನ್ ಆಗಿದ್ದರು ಸಹ, ಸಂಸ್ಥೆಯ ಲೋಗೋ ಹಾಗೂ ಹೆಸರನ್ನು ದುರುಪಯೋಗಪಡಿಸಿಕೊಂಡು ಬೆಂಗಳೂರು ಮೂಲದ ಅರ್ಪಿತಾ ದೇವ್ ಜೈನ್, ತುಮಕೂರಿನ ದಿವ್ಯಾನಿ ಜೈನ್ ಫಾನೇಶ್ ಮತ್ತು ಇತರರು ಫ್ಯಾಷನ್ ಶೋ ಆಡಿಷನ್ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಬೆAಗಳೂರಿನಲ್ಲಿ ಆಡಿಷನ್ ಮಾಡುವ ಮೂಲಕ ಸಂಸ್ಥೆಯ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದು, ೦೭/೦೪/೨೦೨೪ರಂದು ನಗರದ ಹಟ್ ಹೋಟೇಲ್‌ನಲ್ಲಿ ಫ್ಯಾಷನ್ ಶೋ ಆಡಿಷನ್ ಕರೆದಿದ್ದು, ಇನ್‌ಸ್ಟಾ, ಫೇಸ್‌ಬುಕ್ ಮೂಲಕ ಪ್ರಚಾರ ಮಾಡಿ, ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡಿ ಅದನ್ನು ಸಂಸ್ಥೆಯ ಮೇಲೆ ಹೊರಿಸಲು ಕುತಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅರ್ಪಿತಾ ದೇವ್ ಜೈನ್, ತುಮಕೂರಿನ ದಿವ್ಯಾನಿ ಜೈನ್,…

Read More

ತುಮಕೂರು: ಲೈಂಗಿಕ ಅಲ್ಪಸಂಖ್ಯಾತರು,ಅAಗವಿಕಲರುಗಳನ್ನು ಒಳಗೊಂಡು ತುಮಕೂರು ಮಹಾನಗರಪಾಲಿಕೆ ಕೈಗೊಂಡಿರುವ ಈ ವಿಶೇಷ ಮತದಾನ ಜಾಗೃತಿ ಕಾರ್ಯಕ್ರಮ ಇಡೀ ದೇಶಕ್ಕೆ ಮಾದರಿಯಾಗಿದ್ದು, ಇದನ್ನು ಎಲ್ಲಾ ಮಹಾನಗರಗಳಿಗೆ ವಿಸ್ತರಿಸಲು ಭಾರತ ಚುನಾವಣಾ ಆಯೋಗಕ್ಕೆ ಮನವಿ ಮಾಡುವುದಾಗಿ ಮಹಿಳಾ ಹೋರಾಟಗಾರತಿ ಹಾಗೂ ಭಾರತ ಚುನಾವಣಾ ಆಯೋಗದ ಸಲಹಾ ಸಮಿತಿ ಸದಸ್ಯೆ ಡಾ.ಅಕೈ ಪದ್ಮಶಾಲಿ ತಿಳಿಸಿದ್ದಾರೆ. ನಗರದ ಟೌನಹಾಲ್ ಮುಂಭಾಗದಲ್ಲಿ ಭಾರತ್ ಚುನಾವಣಾ ಆಯೋಗದ ಸಲಹೆಯಂತೆ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಸ್ವೀಪ್ ಕಮಿಟಿ ೧೩೨ನೇ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಇದುವರೆಗೂ ಯಾರು ತಲುಪಲಾಗದ ಅಂಗವಿಕಲರು, ಲೈಂಗಿಕ ಅಲ್ಪಸಂಖ್ಯಾತರು ಸೇರಿದಂತೆ ದ್ವನಿಯಿಲ್ಲದ ಜನರು ಭಾಗವಹಿಸುವಂತೆ ಮಾಡುವ ಮೂಲಕ ಸಂವಿಧಾನದ ಆಶಯ ಮತ್ತು ಸಂಸತ್ತಿನ ಘನತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ ಎಂದರು. ಗ್ರಾಮೀಣ ಭಾಗಕ್ಕಿಂತ ನಗರದಲ್ಲಿ ಅತಿ ಕಡಿಮೆ ಮತದಾನವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.ವಿದ್ಯಾವಂತರು ಮತದಾನದಿಂದ ದೂರವಾಗುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ.ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಒಂದು ಹಬ್ಬ. ಇದರಲ್ಲಿ ನಾವೆಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳಬೇಕಿದೆ.ಆ…

Read More

ಹುಳಿಯಾರು: ಹುಳಿಯಾರು ಹೋಬಳಿಯ ಬೋರನ ಕಣಿವೆ ಜಲಾಶಯದಿಂದ ಹಿರಿ ಯೂರು ತಾಲೂಕಿನ ಗಾಯಿತ್ರಿ ಜಲಾ ಶಯಕ್ಕೆ ನೀರು ಬಿಡುವುದನ್ನು ವಿರೋಧಿಸಿ ಜಲಾಶಯದ ಬಳಿ ಅಚ್ಚು ಕಟ್ಟುದಾರರು ಪ್ರತಿಭಟನೆಗೆ ಮುಂದಾದರು. ಶಾಸಕ ಸಿ.ಬಿ.ಸುರೇಶ್‌ಬಾಬು ಅವರು ದೂರವಾಣಿ ಮೂಲಕ ೧೫ ದಿನ ಹಳ್ಳಕ್ಕೆ, ೧೫ ದಿನ ನಾಲೆಗೆ ಹರಿಸುವ ಸೂತ್ರದೊಂದಿಗೆ ರೈತರ ಮನವೊಲಿಸುವಲ್ಲಿ ಯಶ್ವಿಯಾದರು. @ ಘಟನೆಯ ಹಿನ್ನೆಲೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಜೆಜಿಹಳ್ಳಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ಅಭಾವ ಎದುರಾಗಿದ್ದು ಬೋರನಕಣಿವೆ ಜಲಾಶಯದಿಂದ ಗಾಯಿತ್ರಿ ಜಲಾಶಯಕ್ಕೆ ಹಳ್ಳದ ಮುಖಾಂತರ ೩ ಅಡಿ ನೀರು ಹರಿಸಲು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು ಕೋರಿದ್ದರು. ಅದರಂತೆ ಪ್ರದೇಶಿಕ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ೩ ದಿನಗಳ ಕಾಲ ನಿರಂತರವಾಗಿ ಗಾಯಿತ್ರಿ ಜಲಾಶಯಕ್ಕೆ ನೀರು ಬಿಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದರು. @ ಜಯಚಂದ್ರ ಪತ್ರ ಪ್ರದೇಶಿಕ ಆಯುಕ್ತರು ೩ ದಿನಗಳ ಕಾಲ ನೀರು ಬಿಡಲು ಬರೆದ ಪತ್ರಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರದ ನವದೆಹಲಿ…

Read More

ತುಮಕೂರು: ವಿದ್ಯುತ್ ಪ್ರವಹಿಸುತ್ತಿದ್ದ ಕೇಬಲ್ ವೈರ್ ಮೈಮೇಲೆ ಬಿದ್ದ ಪರಿಣಾಮ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ದಾರುಣವಾಗಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಇಪ್ಪಾಡಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀ ಬಾಯಿ ಜಾದವ್ (೩೬) ಮೃತ ದುರ್ದೈವಿಯಾಗಿದ್ದಾರೆ. ಮೃತ ದುರ್ದೈವಿಯಾದ ಲಕ್ಷ್ಮೀ ಬಾಯಿ ಜಾದವ್ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಚಿಂಚಲಕಟ್ಟೆ ಮೂಲದವರಾಗಿದ್ದಾರೆ. ಇತ್ತೀಚೆಗಷ್ಟೇ ಮೃತ ಲಕ್ಷ್ಮೀಬಾಯಿಗೆ ಮದುವೆ ನಿಶ್ಚಯವಾಗಿತ್ತು. ಇವರು ಕುಣಿಗಲ್ ತಾಲ್ಲೂಕಿನ ಇಪ್ಪಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕುಣಿಗಲ್ ಪಟ್ಟಣದಲ್ಲಿ ವಾಸವಿದ್ದ ಲಕ್ಷ್ಮೀಬಾಯಿ, ಕೆಲಸ ಮುಗಿಸಿ ಇಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಲಕ್ಣ್ಮಣ್ ಜೊತೆ ಕುಣಿಗಲ್ ಗೆ ಬೈಕ್ ನಲ್ಲಿ ಲಕ್ಷ್ಮೀ ಬಾಯಿ ಬರುತ್ತಿದ್ದರು. ದಾರಿಯಲ್ಲಿ ಹಾದುಹೋಗಿದ್ದ ಕೇಬಲ್ ವೈರ್ ಗೆ, ವಿದ್ಯುತ್ ತಂತಿ ತಗುಲಿ ಲಕ್ಷ್ಮೀಬಾಯಿ ಮೇಲೆ ಕೇಬಲ್ ವೈರ್ ಬಿದ್ದಿದೆ. ಕೇಬಲ್ ವೈರ್ ಮೇಲೆ ಬಿದ್ದ ಪರಿಣಾಮ ಲಕ್ಷ್ಮೀಬಾಯಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಬೈಕ್…

Read More

ತುಮಕೂರು ಜಿಲ್ಲೆಯ ಕುಚ್ಚಂಗಿ ಕೆರೆಯ ಬಳಿ ಕಾರೊಂದು ಸಂಪೂರ್ಣ ಸುಟ್ಟು ಹೋಗಿ, ಕಾರಿನಲ್ಲಿ ಮೂವರ ಮೃತದೇಹ ಪತ್ತೆಯಾಗಿರುವ ಘಟನೆ ಶುಕ್ರವಾರ ವರದಿಯಾಗಿತ್ತು. ಈ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೂವರು ಸಾವನ್ನಪ್ಪಿರುವುದು ಪತ್ತೆ ಹಚ್ಚಲಾಗಿತ್ತು. ಈ ಘಟನೆಗೆ ಸಂಬAಧಪಟ್ಟAತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಪ್ರಕರಣದ ಪ್ರಮುಖ ಆರೋಪಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲ ಆರೋಪಿಗಳನ್ನು ಮಾ.೨೨ರ ರಾತ್ರಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಪೊಲೀಸರು ಇನ್ನೂ ಕೂಡ ಅಧಿಕೃತ ಮಾಹಿತಿ ನೀಡಿಲ್ಲ. ಹನ್ನೊಂದು ದಿನದ ಹಿಂದೆ ತುಮಕೂರಿಗೆ ವ್ಯವಹಾರ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಮದ್ದಡ್ಕದ ರಫೀಕ್ ಎಂಬುವವರ ಮಾಲೀಕತ್ವದ ಎಸ್‌ಪ್ರೆಸ್ ಕಾರನ್ನು ಬೆಳ್ತಂಗಡಿ ತಾಲೂಕಿನ ಇಸಾಕ್(೫೬), ಶಾಹುಲ್ ಹಮೀದ್ (೪೫), ಇಮ್ತಿಯಾಝ್ ಸಿದ್ದೀಕ್( ೩೪) ಎಂಬವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು…

Read More

ತುಮಕೂರು ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು ವಾಣಿಜ್ಯ ತೆರಿಗೆ ಇಲಾಖೆ ಜಾಗೃತಿ ದಳ ಹಾಗೂ ಕೃಷಿ ಇಲಾಖೆಯ ಜಾಗೃತಿ ದಳದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸಿರಾ ತಾಲ್ಲೂಕಿನ ತಾವರೆಕೆರೆ ಬಳಿ ವಾಣಿಜ್ಯ ತೆರಿಗೆ ಇಲಾಖೆ (ಜಾಗೃತಿ)ಯ ಜಂಟಿ ಆಯುಕ್ತ ಟಿ.ಆರ್. ಕೃಷ್ಣಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ರಾಯಚೂರಿ ಜಿಲ್ಲೆಯಿಂದ ಬೇವು ಲೇಪಿತ ಯೂರಿಯಾ ರಸಗೊಬ್ಬರ ತುಂಬಿಕೊAಡು ಬೆಂಗಳೂರು ಮೂಲಕ ಕೇರಳ ರಾಜ್ಯಕ್ಕೆ ಸಾಗಿಸುತ್ತಿದ್ದ ಲಾರಿಯನ್ನು ಅಡ್ಡಗಟ್ಟಿ ಪರಿಶೀಲನೆ ನಡೆಸಿದಾಗ ಲಾರಿಯಲ್ಲಿ ದಾಸ್ತಾನಿದ್ದ ಬೇವು ಲೇಪಿತ ಯೂರಿಯಾ ರಸಗೊಬ್ಬರಕ್ಕೂ ಬಿಲ್‌ನಲ್ಲಿ ನಮೂದಿಸಿದ್ದ ಸಾಮಗ್ರಿಗೂ ತುಂಬಾ ವ್ಯತ್ಯಾಸ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಲಾರಿಯಲ್ಲಿ ೭೦೦ ಚೀಲ ಬೇವು ಲೇಪಿತ ಯೂರಿಯಾ ಸಾಗಿಸಲಾಗುತ್ತಿದ್ದು, ಇದರ ಮೌಲ್ಯ ೧೩.೫೫ ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು ಕಾನೂನು ಪ್ರಕಾರ ಕೃಷಿ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಕೃಷಿ…

Read More

ತುಮಕೂರು ಕುಡಿಯುವ ಉದ್ದೇಶಕ್ಕಾಗಿ ಕೆರೆಗಳನ್ನು ತುಂಬಿಸಲು ಹೇಮಾವತಿ ನಾಲೆ ನೀರನ್ನು ಜಿಲ್ಲೆಗೆ ಹರಿಸಿದ್ದು, ನಾಲೆ ನೀರನ್ನು ದುರ್ಬಳಕೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಮಂಗಳವಾರ ರಾತ್ರಿ ಜಿಲ್ಲೆಯಲ್ಲಿ ಬರ ನಿರ್ವಹಣೆ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಸಂಬAಧಿಸಿದAತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ತುರ್ತು ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, ಹೇಮಾವತಿ ನಾಲೆ ನೀರನ್ನು ಅಕ್ರಮವಾಗಿ ಡಿಸೇಲ್ ಪಂಪ್‌ನಿAದ ಬಳಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅಕ್ರಮವಾಗಿ ಬಳಸಿಕೊಳ್ಳುವವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ತಹಶೀಲ್ದಾರರಿಗೆ ನಿರ್ದೇಶನ ನೀಡಿದರು. ಕುಡಿಯುವ ನೀರಿಗಾಗಿ ಮಾತ್ರ ನಾಲೆ ನೀರನ್ನು ಬಳಸಿಕೊಳ್ಳಬೇಕು. ಕೃಷಿ ಮತ್ತಿತರ ಚಟುವಟಿಕೆಗಳಿಗೆ ಅಕ್ರಮವಾಗಿ ಬಳಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರಲ್ಲದೆ ನಾಲೆ ನೀರನ್ನು ಶುದ್ಧೀಕರಿಸಿದ ನಂತರ ಜನರಿಗೆ ಪೂರೈಕೆ ಮಾಡುವ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿ ಕುಡಿಯಲು ಯೋಗ್ಯವಿದ್ದರೆ ಮಾತ್ರ ಪೂರೈಕೆ ಮಾಡಬೇಕೆಂದು ನಿರ್ದೇಶನ ನೀಡಿದರು.…

Read More

ತುಮಕೂರು ಜಿಲ್ಲೆ ಗುಬ್ಬಿ ಪೋಲಿಸ್ ಠಾಣೆಯಲ್ಲಿ ಪೋಲೀಸರ ವಶದಲ್ಲಿದ್ದ ಡಕಾಯಿತಿ ಕೇಸಿನ ಆರೋಪಿ ತಡರಾತ್ರಿ ಪರಾರಿಯಾಗಿರುವ ಘಟನೆ ನೆಡೆದಿದೆ. ನ್ಯಾಯಾಲಯದ ಅನುಮತಿ ಮೇರೆಗೆ ಗದಗ ಮೂಲದ ಡಕಾಯತಿ ಕೇಸಿನ ಆರೋಪಿ ಸೈಯದ್ ಆಲಿ ಬಾಳಾ ಸಾಹೇಬ್ ನದಾಫ್ ಎನ್ನುವವರನ್ನು ತನಿಖೆಗಾಗಿ ಗುಬ್ಬಿ ಪೋಲಿಸ್ ಠಾಣೆಯ ಸಬ್ಬ್ ಇನ್ಸ್ಪೆಕ್ಟರ್ ದೇವಿಕಾ ದೇವಿ ರವರು ಇಲಾಖೆಯ ವಶಕ್ಕೆ ಪಡೆದಿದ್ದರು ಅಲ್ಲಿಂದ ಕರೆತಂದು ಗುಬ್ಬಿ ಪೋಲಿಸ್ ಠಾಣೆಯ ಲಾಕಪ್ ನಲ್ಲಿ ತನಿಖೆಗಾಗಿ ಇಟ್ಟುಕೊಂಡಿದ್ದರು ಆದರೆ ಫೆಬ್ರವರಿ ೧ ರ ತಡರಾತ್ರಿ ಲಾಕಪ್ ನಿಂದ ಆರೋಪಿಯು ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ ಎನ್ನುವ ಮಾಹಿತಿ ಹೊರಬಿದ್ದಿದೆ ತಪ್ಪಿಸಿಕೊಂಡ ಆರೋಪಿ ಪತ್ತೆಗಾಗಿ ಪೋಲೀಸರು ಹರಸಾಹಸ ಪಡುತ್ತಿದ್ದಾರೆ , ತಪ್ಪಿಸಿಕೊಂಡು ಓಡಿ ಹೋದ ಆರೋಪಿಯು ವೃತ್ತಿನಿರತ ಆರೋಪಿಯಾಗಿದ್ದು ಕಳ್ಳತನವನ್ನೇ(ಕಸಬು) ಇತ ನಿರಂತರವಾಗಿ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಮೂಲತಃ ಗದಗ ಜಿಲ್ಲೆಯ ಲಕ್ಷ್ಮೀಶ್ವರ ಹೋಬಳಿ ಹುಲ್ಲೂರು ಗ್ರಾಮದ ವಾಸಿಯಾದ ಸೈಯದ್ ಆಲಿ ಬಾಳಾ ಸಾಹೇಬ್ ನದಾಫ್ @ ಹರ್ಷವರ್ಧನ ೨೫ ವರ್ಷ…

Read More

ತುಮಕೂರು ಕರ್ನಾಟಕ ರತ್ನ ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ.ಶ್ರೀ..ಶಿವಕುಮಾರ ಮಹಾಸ್ವಾಮೀಜಿ ಅವರ ೫ನೇ ವರ್ಷದ ಪುಣ್ಯಸ್ಮರಣೆ ಸಂಸ್ಮರಣೋತ್ಸವವನ್ನು ನಾಳೆ ಅಂದರೆ ಜ.೨೧ರಂದು ಬೆಳಿಗ್ಗೆ ೧೧ಕ್ಕೆ ಸಿದ್ಧಗಂಗಾ ಮಠದಲ್ಲಿ ಆಯೋಜಿಸಲಾಗಿದ್ದು, ಸಿಎಂ, ಮಾಜಿ ಸಿಎಂ, ಸಚಿವರು ಸೇರಿ ಹಲವು ಗಣ್ಯರು, ಶ್ರೀಗಳು ಪಾಲ್ಗೊಂಡು ನುಡಿನಮನ ಸಲ್ಲಿಸುವರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಿದ್ದಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಟಿ.ಕೆ.ನಂಜುAಡಪ್ಪ ಅವರು, ಪೂಜ್ಯ ಡಾ.ಶ್ರೀ.ಶಿವಕುಮಾರಸ್ವಾಮೀಜಿ ಅವರು ಲಿಂಗೈಕ್ಯರಾದ ಜ.೨೧ರ ದಿನವನ್ನು ದಾಸೋಹ ದಿನವನ್ನಾಗಿ ರಾಜ್ಯ ಸರ್ಕಾರ ಆಚರಣೆ ಮಾಡುತ್ತಿದೆ. ಮಠದಿಂದ ಪುಣ್ಯ ಸ್ಮರಣೆ ಕಾರ್ಯಕ್ರಮ ಆಯೋಜಿಸಿದ್ದು, ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆಯಿದೆ . ಮುಂಜಾನೆಯಿAದಲೇ ಮಠದಲ್ಲಿ ಪೂಜಾ ಕೈಂಕರ್ಯಗಳು, ಧಾರ್ಮಿಕ ಕಾರ್ಯಗಳು ನೆರವೇರಲಿದ್ದು, ಶಿವಕುಮಾರ ಸ್ವಾಮೀಜಿ ಪುತ್ಥಳಿಯ ಮೆರವಣಿಗೆ ಮಾಡಲಾಗುತ್ತದೆ. ನಂತರ ವೇದಿಕೆ ಕಾರ್ಯಕ್ರಮ ಇರುತ್ತದೆ ಎಂದರು. ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಕಾರ್ಯಕ್ರಮದ ದಿವ್ಯ ನೇತೃತ್ವ ವಹಿಸಲಿದ್ದು, ಗದಗ ಡಂಬಳ ಮಠದ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಅಧ್ಯಕ್ಷರಾದ ಡಾ.ಶ್ರೀ.ತೋಂಟದಸಿದ್ಧರಾಮಮಹಾಸ್ವಾಮೀಜಿ…

Read More

ಕೊರಟಗೆರೆ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ರಾಸುಗಳ ಜಾತ್ರೆಗೆ ರಾಜ್ಯದ ಮೂಲೆಮೂಲೆಯಿಂದ ಆಗಮಿಸಿದ ರೈತರು, ೮ ವರ್ಷಗಳ ನಂತರ ಮತ್ತೆ ರಾಸುಗಳ ಜಾತ್ರೆಗೆ ಅದ್ದೂರಿಯಾಗಿ ಪ್ರಾರಂಭವಾಗಿ ಭರ್ಜರಿಯಾಗಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ದಕ್ಷಿಣ ಭಾರತದ ಐತಿಹಾಸಿಕ ಕಮನೀಕ್ಷೇತ್ರ ಎಂದೇ ಪ್ರಸಿದ್ದಿ ಪಡೆದಿರುವ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದ ಅವರಣದಲ್ಲಿ ಪ್ರತಿವರ್ಷದಂತೆ ಸಂಕ್ರಾAತಿ ಹಬ್ಬದ ಮಾರನೇ ದಿನದಿಂದ ರಾಸುಗಳ ಜಾತ್ರೆ ಪ್ರಾರಂಭವಾಗಿದ್ದು ರಾಸುಗಳನ್ನ ಕೊಳ್ಳಲು ಮಾರಲು ರಾಜ್ಯದ ಮೂಲೆ ಮೂಲೆಯಿಂದ ರೈತರು ಆಗಮಿಸಿ ಭರ್ಜರಿ ವಹಿವಾಟು ನಡೆಸುತ್ತಿದ್ದಾರೆ. ಕಳೆದ ಎರಡು ಮೂರು ವರ್ಷಗಳಿಂದ ಕರೋನಾ ಹಾಗೂ ಕಾಳು ಬಾಯಿ ರೋಗದಿಂದ ಜಾತ್ರೆ ರಾಸುಗಳು ಬಾರದೆ ನೀರಸ ಪ್ರತಿಕ್ರಯೆ ವ್ಯಕ್ತವಾಗುತ್ತಿತ್ತು. ಅದರೆ ಈ ಬಾರಿ ಯಾವುದೆ ಅಂತಹ ತೊಂದರೆ ಇಲ್ಲದೆ ಇರುವ ಕಾರಣ ಜಾತ್ರೆ ಸುಗಮವಾಗಿ ನಡೆಯುತ್ತಿದೆ. ರಾಸುಗಳ ಜಾತ್ರೆಗೆ ೫೦ ಸಾವಿರದಿಂದ ೫ ಲಕ್ಷದವರೆಗೂ ವಿವಿಧ ತಳಿಯ ರಾಸುಗಳು ಆಗಮಿಸಿದ್ದು ವಿಶೇಷವಾಗಿದೆ. ರಾಸುಗಳ ಜಾತ್ರೆಗೆ ವಿವಿಧ ತಳಿ ಆಗಮನ; ಸಂಕ್ರಾAತಿ ಹಬ್ಬದಿಂದ ೮ ದಿನಗಳ ಕಾಲ ನಡೆಯುವ…

Read More