ಭಾಷೆ ಮಾನವನಿಗೆ ಅವನ ಉಸಿರಿನಷ್ಟೇ ಅನಿವಾರ್ಯ. “ಮಾತೆಂಬ ಜ್ಯೋತಿ ಬೆಳಗದಿದ್ದರೆ ಲೋಕವೆಲ್ಲ ಕತ್ತಲೆಯಿಂದ ತುಂಬಿರುತ್ತಿತ್ತು. ಅಂಧಕಾರದಲ್ಲಿಯೇ ತೊಳಲುತ್ತಿತ್ತು ಎಂದಿದ್ದಾನೆ” ಮಹಾಕವಿ ದಂಡಿ.
ಪ್ರಪಂಚದಾದ್ಯಂತ ಸುಮಾರು 6000 ಭಾಷೆಗಳಿವೆಯೆಂದು ಭಾಷೆ ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಭಾರತದಲ್ಲೇ ಸುಮಾರು 3000 ಭಾಷೆಗಳಿವೆ ಎಂದು ಭಾಷಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡ ಭಾಷೆಯು ಮೂಲತಃ ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ್ದು ದಕ್ಷಿಣ ಭಾರತದ ತಮಿಳು, ತೆಲುಗು, ಮಲೆಯಾಳಂ, ತುಳು ಭಾಷೆಗಳೊಂದಿಗೆ ಸೇರಿ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು ಕಾಲಕ್ರಮೇಣ ಒಂದು ಸ್ವತಂತ್ರ ಭಾಷೆಯಾಗಿ ರೂಪುಗೊಂಡಿದ್ದನ್ನು ಗುರುತಿಸಲಾಗಿದೆ.
ಭಾಷೆ ಸೊಗಸು :
ಕನ್ನಡ ಲಿಪಿಯನ್ನು ವಿನೋಭಾ ಭಾವೆ ಅವರು ‘ಲಿಪಿಗಳ ರಾಣಿ’ ಎಂದು ಕರೆದಿರುವುದು ಕನ್ನಡದ ಹೆಮ್ಮೆಯ ಸಂಗತಿ. ಕನ್ನಡ ಲಿಪಿಯು ಬ್ರಾಹ್ಮಿ ಲಿಪಿಯಿಂದ ರೂಪುಗೊಂಡಿದೆ.
ವಿದೇಶಿಯರೊಬ್ಬರು ಕನ್ನಡದ ಪದಕೋಶ ರಚನೆ ಮಾಡಿರುವುದು (ಸುಮಾರು 70,000 ಪದಗಳಿಗೆ ಅರ್ಥ ನೀಡಿಕೆ) ಇಡೀ ದೇಶದಲ್ಲಿಯೇ ಮೊದಲು. ರೆವರೆಂಡ್ ಫರ್ಡಿನಾಂಡ್ ಕಿಟೆಲ್ ಈ ಕಾರ್ಯ ಸಾಧಕರು.
ಕರ್ನಾಟಕ ಏಕೀಕರಣ :
ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಯಾಗಿದ್ದು 1890 ರಲ್ಲಿ.
ನಾಲ್ವಡಿ ಕೃಷ್ಣರಾಜ ಒಡೆಯರ್‍ರವರ ಪ್ರಯತ್ನದ ಫಲವಾಗಿ 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ.
ಮೈಸೂರು ರಾಜ್ಯ ರಚನೆಯಾಗಿದ್ದು 1956 ರ ನವೆಂಬರ್ 1. ಕರ್ನಾಟಕವೆಂದು ನಾಮಕರಣಗೊಂಡಿದ್ದು 1973 ರ ನವೆಂಬರ್ 1.
ಪುರಾಣ – ಪೂರ್ವ ಇತಿಹಾಸ :
ರಾಮಾಯಣದ ದಂಡಕಾರಣ್ಯ ಪ್ರದೇಶವೇ ಕರ್ನಾಟಕ ಎಂದು ಹೇಳಲಾಗುತ್ತದೆ. ಹಂಪಿಯ ಕೆಲ ಭಾಗ, ದೇವರಾಯನದುರ್ಗ ಸೇರಿ ಕೆಲ ಪ್ರದೇಶಗಳು ರಾಮಾಯಣಕ್ಕೆ ಸಾಕ್ಷಿಯಾಗಿವೆ.
ಮಹಾಭಾರತದಲ್ಲಿ ಕರ್ನಾಟಕ ಎಂಬ ಹೆಸರಿನ ಉಲ್ಲೇಖವಿದೆ. ಅದು ಕರ್ನಾಟಕದ ಮಹತ್ವವನ್ನು ವಿವರಿಸುತ್ತದೆ. ಮಹಾಭಾರತದ ಸಭಾ ಪರ್ವದಲ್ಲಿನ ಕರ್ಣಾಟ ಎಂಬ ಪದ ಬಳಕೆ ಜೊತೆಗೆ ಮತ್ಸ್ಯ ಪುರಾಣ, ಸ್ಕಂದ ಪುರಾಣ, ಮಾರ್ಕಂಡೇಯ ಪುರಾಣ, ನಾಗವರ್ಮನ ಬಾಣ ಕಾದಂಬರಿಯಲ್ಲಿ ಬರುತ್ತದೆ.
ಶಾಸನ – ಶಿಲಾಯುಗ :
ಹಲ್ಮಿಡಿಗಿಂತ ಹಳೆಯದಾದ ಶಾಸನ ಶಿಕಾರಿಪುರದ ತಾಳಗುಂದದಲ್ಲಿ ಸಿಕ್ಕಿದೆ.
ಚಿತ್ರದುರ್ಗದ ಬ್ರಹ್ಮಗಿರಿ, ಮಸ್ಕಿ ಹೊಸ ಶಿಲಾಯುಗಕ್ಕೆ, ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗವು ಕಬ್ಬಿಣ ಶಿಲಾಯುಗಕ್ಕೆ ಸಾಕ್ಷಿ.
ನೆಲದ ಸೊಬಗು :
ಕರುನಾಡು ಎಂದು ಕರೆಯಲಾಗುತ್ತದೆ. ಕಪ್ಪು ಮಣ್ಣಿನ ನಾಡು ಎಂದರ್ಥ. ಎತ್ತರದ ಭೂಮಿ ಎಂದು ಸಹ ಕರೆಯಲಾಗುತ್ತದೆ.
ರಾಜ್ಯವು ಕರಾವಳಿ, ಮಲೆನಾಡು, ಬಯಲುಸೀಮೆ ಎಂಬ ಮೂರು ಭೌಗೋಳಿಕ ಪ್ರದೇಶಗಳನ್ನು ಒಳಗೊಂಡಿದೆ.
ನಮ್ಮ ಹಿರಿಮೆ :
ಭಾರತ ರತ್ನ ಪ್ರಶಸ್ತಿ ಪಡೆದ ಕನ್ನಡಿಗರು ಡಾ. ಸರ್. ಎಂ. ವಿಶ್ವೇಶ್ವರಯ್ಯ, ಭೀಮಸೇನ ಜೋಶಿ, ಸಿ.ಎನ್.ಆರ್. ರಾವ್.
ಕರ್ನಾಟಕ ರತ್ನ ಪ್ರಶಸ್ತಿ ಪಡೆದ ರಾಜ್ಯದ ಕನ್ನಡಿಗರು ಕುವೆಂಪು, ರಾಜಕುಮಾರ್, ಎಸ್. ನಿಜಲಿಂಗಪ್ಪ, ಸಿ.ಎನ್.ಆರ್.ರಾವ್, ಭೀಮಸೇನ ಜೋಷಿ, ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿ, ದೇ. ಜವರೇಗೌಡ, ಡಿ. ವೀರೇಂದ್ರ ಹೆಗ್ಗಡೆ, ಪುನೀತ್ ರಾಜ್‍ಕುಮಾರ್.
ಸೇನೆಯಲ್ಲಿ ಪಂಜಾಬಿನ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಕೊಡಗಿನವರು. ಅತ್ಯುನ್ನತ ಹುದ್ದೆಗೆ ಹೋದವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ.
ಸಾಹಿತ್ಯ – ಶಿಕ್ಷಣ :
ಕರ್ನಾಟಕ ಸಂಗೀತ ಉಗಮ ರಾಜ್ಯದಲ್ಲೇ ಆಯಿತು. ಅದಕ್ಕೆ ಕಾರಣ ಪುರಂದರದಾಸರು. ಮುಂಡಿಗೆಗಳು, ತ್ರಿಪದಿಗಳು, ವಚನಗಳು ರಾಜ್ಯದ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿವೆ.
ರಾಜ್ಯದಲ್ಲಿ 26 ವಿಶ್ವವಿದ್ಯಾಲಯಗಳಿವೆ. ಅದರಲ್ಲೂ ಕನ್ನಡ, ಕೃಷಿ, ಮಹಿಳಾ, ಮುಕ್ತವಿಶ್ವವಿದ್ಯಾಲಯ, ಜಾನಪದ, ತೋಟಗಾರಿಕೆ, ಪಶುವೈದ್ಯಕೀಯ ಹೀಗೆ ವಿಶಿಷ್ಠ ವಿಶ್ವವಿದ್ಯಾಲಯಗಳು ಇರುವುದು ವಿಶೇಷ.
ಜ್ಞಾನಪೀಠ ಪ್ರಶಸ್ತಿ ಪಡೆದವರು ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ. ಗೋಕಾಕ್, ಡಾ. ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ.
ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಮೊದಲಿಗರು ಕೆ.ವಿ. ಸುಬ್ಬಣ್ಣ.
ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಪಾತ್ರರಾದವರು ಡಾ. ಎಸ್.ಎಲ್. ಭೈರಪ್ಪ, ಡಾ. ಎಂ. ವೀರಪ್ಪ ಮೊಯ್ಲಿ.
ಮೈಸೂರು ವಿಶ್ವವಿದ್ಯಾಲಯದ ಜಾನಪದ
ವಸ್ತು ಸಂಗ್ರಹಾಲಯ ಏಷ್ಯಾದಲ್ಲಿಯೇ ಅತಿ ದೊಡ್ಡ ವಸ್ತು ಸಂಗ್ರಹಾಲಯ ಎಂಬ ಕೀರ್ತಿಗೆ ಪಾತ್ರವಾಗಿದೆ.

(Visited 1 times, 1 visits today)