BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಎಸ್‌ಐಆರ್ ಪ್ರಕ್ರಿಯೆಗೆ ಸಹಕರಿಸುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ
  • ಮದ್ಯ ವ್ಯಸನಿಗಳ ಬದುಕಿನಲ್ಲಿ ಹೊಸ ಬೆಳಕು
  • ಶೈಕ್ಷಣಿಕ ಮೂಲಸೌಕರ್ಯಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕ
  • ಅನಿಲಗಳ ಅಕ್ರಮ ದಾಸ್ತಾನು: ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ
  • ೧೫ ಲಕ್ಷ ರೂ. ವಿಮೆ ಕ್ಲೆ0ಮ್ ಚೆಕ್ ವಿತರಣೆ
  • ರಸ್ತೆ ಒತ್ತುವರಿ ವಿವಾದ ಬಗೆಹರಿಸಿದ ಅಧಿಕಾರಿಗಳು
  • ಯುವ ಮನಸ್ಸುಗಳನ್ನು ಸಂಗೀತದತ್ತ ಸೆಳೆಯುವ ನಿಟ್ಟಿನಲ್ಲಿ ತಾಯಂದಿರು ಮಾರ್ಗದರ್ಶನ ಅಗತ್ಯ: ಹಾಲಪ್ಪ
  • ಕಾ0ಗ್ರೆಸ್ ಮತದಾರರ ಪಟ್ಟಿಗೆ ಅಕ್ರಮವಾಗಿ ಸೇರಿಸುವ ಕೆಲಸ ಮಾಡಿಲ್ಲ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಗುತ್ತಿಗೆ ಪದ್ದತಿ ರದ್ದಾಗಲಿ : ಅಸಂಘಟಿತರಿಗೆ ಸಾಮಾಜಿಕ ಭದ್ರತೆ ಕಾನೂನು ಜಾರಿಯಾಗಲಿ
Trending

ಗುತ್ತಿಗೆ ಪದ್ದತಿ ರದ್ದಾಗಲಿ : ಅಸಂಘಟಿತರಿಗೆ ಸಾಮಾಜಿಕ ಭದ್ರತೆ ಕಾನೂನು ಜಾರಿಯಾಗಲಿ

By News Desk BenkiyabaleUpdated:November 11, 2020 6:28 pm

ತುಮಕೂರು : 

      ತುಮಕೂರು ಜಿಲ್ಲಾ ಅಸಂಘಟಿತ ಕಾರ್ಮಿಕರ ಹೋರಟ ಸಮಿತಿ ಸಿ.ಐ.ಟಿಯು ವತಿಯಿಂದ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಎದರು ರಾಷ್ಟ್ರೀಯ ಬೇಡಿಕೆ ದಿನ ಹಾಗೂ ಮುಷ್ಕರದ ನೋಟೀಸ್ ನೀಡುವ ಚಳುವಳಿ ಅಂಗವಾಗಿ ಪ್ರತಿಭಟಿಸಲಾಯಿತು.

      ಚಳುವಳಿಯನ್ನು ಉದ್ದೇಶಿಸಿ ಸಿ.ಐ.ಟಿ.ಯು ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಮಾತಾನಾಡಿ ಹೆಚ್ಚಿನ ಶ್ರೀಮಂತರು ಸರ್ಕಾರಕ್ಕೆ ತೆರಿಗೆ ವಂಚಿಸಲು ತಂತ್ರ ರೂಪಿಸುತ್ತಾರೆ ಆದರೆ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಬಡಪಾಯಿ ಕಾರ್ಮಿಕರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರತಿ ಕ್ಷಣವು ಸರ್ಕಾರಕ್ಕೆ ತೆರಿಗೆಯನ್ನು ತುಂಬುತ್ತಾರೆ. ಆದರೆ ಇಂತಹ ಕಾರ್ಮಿಕರನ್ನು ಗುತ್ತಿಗೆ ಕಾರ್ಮಿಕ ಕಾಯ್ದೆಯಡಿ ದುಡಿಸಿ ಅವರಿಗೆ ನೀಡಬೇಕಾದ ಸವಲತ್ತುಗಳನ್ನು ನೀಡದೆ ವಂಚಿಸಲಾಗುತ್ತಿದೆ. ಆದ್ದರಿಂದ ಕಾರ್ಮಿಕ ವಿರೋಧಿ ಗುತ್ತಿಪದ್ದತಿ ರದ್ದು ಮಾಡಿ ಸಾಮಾಜಿಕ ಭದ್ರತಾ ಯೋಜನೆ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

      ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಹಾಗೂ ಸಿ.ಐ.ಟಿಯುನ ಉಪಾಧ್ಯಕ್ಷ ಬಿ.ಉಮೇಶ್ ಮಾತನಾಡಿ ಕೋವಿಡ್-19ರ ಸೊಂಕಿನ ದಾಳಿಯಿಂದ ಅಸಂಘಟಿತರ ಬದುಕು ಮತ್ತು ಕುಟುಂಬಗಳು ಅತ್ಯಂತ ಕಷ್ಠಕ್ಕೆ ಸಿಲುಕಿ ಹಸಿವು, ಅನಾರೋಗ್ಯ, ನಿರುದ್ಯೋಗದಿಂದ ನರಳುತ್ತಿವೆ. ಆದ್ದರಿಂದ ಸರ್ಕಾರಗಳು ಅಸಂಘಟಿತರಿಗೆ ಘೋಷಿಸಿರು ಕೋವಿಡ್-19ರ ಸ್ವಹಾಯ ಧನವನ್ನು ತಕ್ಷಣ ನೀಡಬೇಕು ಮಾಸಿಕ 21000ರೂಗಳು ಕನಿಷ್ಠ ಕೂಲಿ ಸಿಗುವಂತೆ ಸರ್ಕಾರ ಕ್ರಮವಹಿಸಬೇಕು. ಖಾಯಂ ಕೆಲಸಗಳಲ್ಲಿ ಯಾವುದೇ ಕಾರಣಕ್ಕೂ ಗುತ್ತಿಗೆ ಅಡಿ ದುಡಿಸದೇ ಸುಪ್ರೀಂಕೋರ್ಟ್ ಆದೇಶದಂತೆ ಕೆಲಸ ನಿರ್ವಹಿಸಬೇಕೆಂದರು. ಅಸಂಘಟಿತ ಕಾರ್ಮಿಕರು ಸಂಘ ಕಟ್ಟಿಕೊಂಡಿದ್ದಾರೆಂದು ಬಲಿಪಶುಮಾಡಿ ಕಿರುಕುಳ ನೀಡಿ ಕೆಲಸದಿಂದ ತೆಗೆಯುವುದನ್ನು ನಿಲ್ಲಿಸಬೇಕೆಂದರು. ಕಟ್ಟಡ ಕಾರ್ಮಿಕ ಸಂಘಟನೆಯ ಉಪಾಧ್ಯಕ್ಷ ಶಂಕರಪ್ಪ ಖಜಾಂಜಿ ರಾಮಣ್ಣ ಮಹಾನಗರ ಪಾಲಿಕೆಯ ಕಸ ಸಂಗ್ರಹದ ಆಟೋ ಚಾಲಕ ಕುಮಾರು, ಗಂಗಬೈಲಯ್ಯ ಬೀದಿಬದಿ ವ್ಯಾಪಾರಿಗಳ ಮುಖಂಡ ವಸೀಂಅಕ್ರಮ್ ಮಾತನಾಡಿದರು. ಹೋರಾಟದಲ್ಲಿ ಕಟ್ಟಡ ಕಾರ್ಮಿಕರು, ಆಸ್ಪತ್ರೆ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಪೌರಕಾರ್ಮಿಕರು ಮಹಾನಗರ ಪಾಲಿಕೆಯ ಕಸ ಸಂಗ್ರಹಣಾ ಆಟೋ ಚಾಲಕರು ಮತ್ತು ಸಹಾಯಕರು ಮನೆಗೆಲಸಗಾರರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಹೋರಾಟದ ನೇತೃತ್ವವನ್ನು ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಗಂಗಾಧರ್, ಇಬ್ರಾಹಿಮ್ ಕಲೀಲ್ ಆಸ್ಪತ್ರೆ ಕಾರ್ಮಿಕ ಸಂಘಟನೆಯ ಮುಖಂಡರಾದ ರಂಗಮ್ಮ, ನೇತ್ರಮ್ಮ ಬೀದಿಬದಿ ವ್ಯಾಪಾರಿಗಳ ಸಂಘದ ಮುತ್ತುರಾಜು, ಜಗದೀಶ್, ಡಿ.ವೈ.ಎಫ್.ಐ.ನ ದರ್ಶನ್, ಗುತ್ತಗೆ ನೌಕರ ಸಂಘದ ನಾಗರಾಜು ಸಿದ್ದರಾಜು ನೇತೃತ್ವವಹಿಸಿದ್ದರು.

       ಜಿಲ್ಲಾಧಿಕಾರಿಗಳ ಕಛೇರಿ ಸಹಾಯಕರಾದ ಭಾಗ್ಯಮ್ಮನವರಿಗೆ ಜಿಲ್ಲಾಧಿಕಾರಿಗಳ ಪರವಾಗಿ ಮನವಿ ನೀಡಲಾಯಿತು. ಹೋರಟದಲ್ಲಿ ಕೋವಿಟ್ ಹಿನ್ನೆಲೆಯಲ್ಲಿ 7500 ರೂ ಪರಿಹಾರ, ಕುಟುಂಬದ ತಲಾ ಒಬ್ಬರಿಗೆ ಉಚಿತ 10 ಕೆ.ಜಿ ಅಕ್ಕಿ, ಮಾಸಿಕ ಕನಿಷ್ಠ 21000 ರೂ ಕೂಲಿ, ಗುತ್ತಿಗೆ ಪದ್ದತಿ ರದ್ದತಿಗೆ, ಸಾಮಾಜಿಕ ಭದ್ರತೆ ಕಾನೂನು ಜಾರಿಗೆ ಘೋಷಣೆ ಕೂಗಿ ಒತ್ತಾಹಿಸಲಾಯಿತು. ಸರ್ಕಾರ ಇವುಗಳನ್ನು ಜಾರಿಮಾಡದಿದ್ದಲ್ಲಿ ನವೆಂಬರ್ 26 ರಂದು ಅಖಿಲ ಭಾರತ ಮುಷ್ಕರಕ್ಕೆ ನಡೆಸಲು ತೀರ್ಮಾನಿಸಲಾಯಿತು.

(Visited 25 times, 1 visits today)
Previous Articleಮಧುಗಿರಿ: ರಾಟೆ ಆಡಿಸುವವರ ಬದುಕು ನುಂಗಿದ ಕೊರೊನಾ
Next Article ಸಿಡಿಲ ಮುನ್ಸೂಚನೆಗೆ ಧಾಮಿನಿ ಆ್ಯಪ್
News Desk Benkiyabale

Related Posts

ಎಸ್‌ಐಆರ್ ಪ್ರಕ್ರಿಯೆಗೆ ಸಹಕರಿಸುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ

July 14, 2026 5:01 pm news

ಮದ್ಯ ವ್ಯಸನಿಗಳ ಬದುಕಿನಲ್ಲಿ ಹೊಸ ಬೆಳಕು

July 14, 2026 4:07 pm news

ಶೈಕ್ಷಣಿಕ ಮೂಲಸೌಕರ್ಯಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕ

July 14, 2026 4:02 pm news
ತಾಜಾ ಸುದ್ಧಿಗಳು

ಎಸ್‌ಐಆರ್ ಪ್ರಕ್ರಿಯೆಗೆ ಸಹಕರಿಸುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ

July 14, 2026 5:01 pm

ಮದ್ಯ ವ್ಯಸನಿಗಳ ಬದುಕಿನಲ್ಲಿ ಹೊಸ ಬೆಳಕು

July 14, 2026 4:07 pm

ಶೈಕ್ಷಣಿಕ ಮೂಲಸೌಕರ್ಯಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕ

July 14, 2026 4:02 pm

ಅನಿಲಗಳ ಅಕ್ರಮ ದಾಸ್ತಾನು: ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

July 14, 2026 4:00 pm

೧೫ ಲಕ್ಷ ರೂ. ವಿಮೆ ಕ್ಲೆ0ಮ್ ಚೆಕ್ ವಿತರಣೆ

July 14, 2026 4:03 pm

ರಸ್ತೆ ಒತ್ತುವರಿ ವಿವಾದ ಬಗೆಹರಿಸಿದ ಅಧಿಕಾರಿಗಳು

July 14, 2026 3:56 pm
Our Youtube Channel
Our Picks

ಎಸ್‌ಐಆರ್ ಪ್ರಕ್ರಿಯೆಗೆ ಸಹಕರಿಸುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ

July 14, 2026 5:01 pm

ಮದ್ಯ ವ್ಯಸನಿಗಳ ಬದುಕಿನಲ್ಲಿ ಹೊಸ ಬೆಳಕು

July 14, 2026 4:07 pm

ಶೈಕ್ಷಣಿಕ ಮೂಲಸೌಕರ್ಯಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕ

July 14, 2026 4:02 pm

ಅನಿಲಗಳ ಅಕ್ರಮ ದಾಸ್ತಾನು: ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

July 14, 2026 4:00 pm

೧೫ ಲಕ್ಷ ರೂ. ವಿಮೆ ಕ್ಲೆ0ಮ್ ಚೆಕ್ ವಿತರಣೆ

July 14, 2026 4:03 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಎಸ್‌ಐಆರ್ ಪ್ರಕ್ರಿಯೆಗೆ ಸಹಕರಿಸುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ

By News Desk BenkiyabaleJuly 14, 2026 5:01 pm

ತುಮಕೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ಅವರ ಅಧ್ಯಕ್ಷತೆಯಲ್ಲಿ…

ಮದ್ಯ ವ್ಯಸನಿಗಳ ಬದುಕಿನಲ್ಲಿ ಹೊಸ ಬೆಳಕು

July 14, 2026 4:07 pm

ಶೈಕ್ಷಣಿಕ ಮೂಲಸೌಕರ್ಯಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕ

July 14, 2026 4:02 pm

ಅನಿಲಗಳ ಅಕ್ರಮ ದಾಸ್ತಾನು: ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

July 14, 2026 4:00 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.