ತುಮಕೂರು: ನಾಟಕ, ಸಾಂಸ್ಕೃತಿಕ ಉತ್ಸವಗಳು ಗ್ರಾಮದಲ್ಲಿ ಒಗ್ಗಟ್ಟು ತರಲು ಸಹಕಾರಿಯಾಗಲಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ ತುಮಕೂರು ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದ್ದಾರೆ.
ತುಮಕೂರು ತಾಲೂಕು ಸ್ವಾಂದೇನಹಳ್ಳಿ ಗ್ರಾಮದ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ರಂಗ ಸೊಗಡು ಕಲಾ ಟ್ರಸ್ಟ್(ರಿ), ಸ್ವಾಂದೇನಹಳ್ಳಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಗ್ರಾಮದ ಗಣೇಶ ಉತ್ಸವ ಹಾಗೂ ಕನ್ನಡ ರಾಜೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕರಿಭಂಟನ ಕಾಳಗ? ಮೂಡಲಪಾಯ ಬಯಲಾಟ ಪ್ರದರ್ಶನಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡುತಿದ್ದ ಅವರು,ನಮ್ಮ ಸಂಸ್ಕೃತಿ, ಪರಂಪರೆಯ ಬೇರುಗಳಾಗಿರುವ ಸಾಂಸ್ಕೃತಿಕ ಉತ್ಸವಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವೂ ಆಗಬೇಕು ಎಂದರು.
ತುಮಕೂರು ನಗರಕ್ಕೆ ಸಮೀಪವಿರುವ ಸ್ವಾಂದೇನಹಳ್ಳಿ ಒಂದು ಸಾಂಸ್ಕೃತಿಕ ಕಲಾ ಗ್ರಾಮ. ಪ್ರತಿವರ್ಷ ಗಣೇಶ ಪ್ರತಿಷ್ಠಾಪನೆ, ಶ್ರೀರಂಗನಾಥಸ್ವಾಮಿ ಉತ್ಸವದ ಸಂದರ್ಭಗಳಲ್ಲಿ ವಾರಗಟ್ಟಲೇ ನಾಟಕ,ಸಂಗೀತ,ನೃತ್ಯ,ಜಾನಪದ ಉತ್ಸವಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬರಲಾಗುತ್ತಿದೆ.ರಂಗಸೊಗಡು ಕಲಾಟ್ರಸ್ಟ್ನ ಸಿದ್ದರಾಜು ಪ್ರತಿವರ್ಷ ಇಂತಹ ಕಾರ್ಯಕ್ರಮಗಳ ಮಂಚೂಣಿಯಲ್ಲಿ ನಿಂತು,ವಿವಿಧ ಕಲಾ ತಂಡಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿ,ಕಲಾ ಪ್ರಕಾರಗಳ ಮತ್ತು ಕಲಾವಿದರನ್ನು ಪೆÇ್ರೀತ್ಸಾಹಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ.ಮೊಬೈಲ್, ಟಿ.ವಿಯಿಂದ ಜನರು ಹೊರಬಂದು ಇಂತಹ ಕಾರ್ಯಕ್ರಮಗಳನ್ನು ವೀಕ್ಷಿಸುವ ಮೂಲಕ ಕಲಾವಿದರ ಬೆನ್ನುತಟ್ಟುವ ಕೆಲಸ ಮಾಡಬೇಕೆಂದು ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು
ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕೃತರು, ಚರಕ ಆಸ್ಪತ್ರೆಯ ಮುಖ್ಯಸ್ಥರು ಆದ ಡಾ.ಬಸವರಾಜು ಮಾತನಾಡಿ, ಮನುಷ್ಯನ ಒತ್ತಡ ನಿವಾರಣೆ, ಮನೋವಿಕಾಸಕ್ಕೆ, ನಾಟಕ, ಸಿನಿಮಾ, ಸಾಹಿತ್ಯ, ಕ್ರೀಡೆಗಳು ಸಹಕಾರಿಯಾಗಲಿವೆ. ಕಳೆದ 20 ವರ್ಷಗಳ ಹಿಂದೆ ನಾನು ಜಿಲ್ಲಾಸ್ಪತ್ರೆಯ ಸರ್ಜನ್ ಆಗಿದ್ದಾಗ ಪರಿಚಯವಾದ ಆಟೋ ಸಿದ್ದರಾಜು, ಇಂದು ಸಮಾಜ ಸೇವೆ, ರಂಗಸೇವೆ ಎರಡರಲ್ಲಿಯೂ ತಮ್ಮನ್ನು ತೊಡಗಿಕೊಂಡಿದ್ದಾರೆ.ಜನರು ಟಿ.ವಿ.ಮೊಬೈಲ್ ಬಿಟ್ಟು ಹೊರಬರದ ಇಂದಿನ ದಿನಗಳಲ್ಲಿ ನಮ್ಮದೇ ನೆಲದ ಅಳುವಿನ ಅಂಚಿನಲ್ಲಿರುವ ಬಯಲಾಟ, ದೊಡ್ಡಾಟ ಎಂದು ಕರೆಯುವ ಪ್ರಕಾರವೊಂದರ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಮೂಲಕ ಪೆÇ್ರೀತ್ಸಾಹ ನೀಡಿದ್ದಾರೆ ಎಂದರು.
ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ಡಾ.ರವಿಕುಮಾರ್.ನೀ.ಹ. ಮಾತನಾಡಿ, ತುಮಕೂರು ನಗರಕ್ಕೆ ಹತ್ತಿರದಲ್ಲಿದ್ದರೂ ಸ್ವಾಂದೇನಹಳ್ಳಿ ನಗರ ಸಂಸ್ಕೃತಿಗೆ ಮಾರು ಹೋಗದೆ, ತನ್ನ ಗ್ರಾಮೀಣ ಪರಿಸರವನ್ನು ಇಂದಿಗೂ ಉಳಿಸಿಕೊಂಡಿದೆ.ಕನ್ನಡ ಒಂದು ಭಾಷೆಯಷ್ಟೆ ಅಲ್ಲ, ಅದು ನಮ್ಮ ಸಂಸ್ಕೃತಿ. ಸಿಂಧೂ ಕಣಿವೆಯ ನಾಗರಿಕತೆಯ ಸಮಯದಲ್ಲಿಯೇ ಕನ್ನಡದ ಲಿಪಿಗಳ ಕುರಿತು ಇತಿಹಾಸಕಾರರ ಉಲ್ಲೇಖಿಸಿದ್ದಾರೆ. ಕನ್ನಡವನ್ನು ಹೆಚ್ಚು ಹೆಚ್ಚಾಗಿ ಬಳಸುವ ಮೂಲಕ ಅವರನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಆಗಬೇಕೆಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೇಲ್ವಿಚಾರಕರಾದ ಸುರೇಶ್, ರಾಜ್ಯ ಸಂಗೀತ ಮತ್ತು ಬಯಲಾಟ ಕಲಾವಿದರ ಸಂಘದ ರಾಜ್ಯಾಧ್ಯಕ್ಷರಾದ ಡಾ.ಕೆ.ಸಣ್ಣಹೊನ್ನಯ್ಯ ಕಂಟಲಗೆರೆ ಮಾತನಾಡಿದರು.
ಜನಪದ ಕಲಾವಿದ ಹಾಗೂ ಗಾಯಕ ಮೋಹನಕುಮಾರ್ ಹಲವು ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.ವೇದಿಕೆಯಲ್ಲಿ ಜಲಧಿ ರಾಜು,ಪಣಗಾರ್ ಎಸ್.ಡಿ.ರಮೇಶ್, ಗುತ್ತಿಗೆದಾರರಾದ ಕೋದಂಡರಾಮಯ್ಯ, ಸ್ವಾಂದೇನಹಳ್ಳಿ ಸಿದ್ದಿವಿನಾಯಕ ಗೆಳೆಯರ ಬಳಗದ ಅಧ್ಯಕ್ಷರಾದ ದಯಾನಂದ, ಕÀಲಾವಿದ ಕಾಂತರಾಜು ಕೌತಮಾರನಹಳ್ಳಿ, ರಂಗಸೊಗುಡ ಕಲಾಟ್ರಸ್ಟ್ನ ಸಿದ್ದರಾಜು ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಜಿಲ್ಲಾ ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಬಸವರಾಜು, ಶಿವಕುಮಾರ್ ಕೆ.ಎಂ.(ಆಟೋ ಯಡಿಯೂರಪ್ಪ), ನಾಗಭೂಷಣ್, ಮರಿಸ್ವಾಮಿ, ಸುಬ್ಬೇದಾರ್ ಬಿ.ರಾಜಶೇಖರಯ್ಯ, ವೆಂಕಟೇಶ್, ಶ್ರೀಮತಿ ಆರ್.ಎಸ್.ಗೀತಾ, ಡಾ.ಹೆಚ್.ಡಿ.ನರಸೇಗೌಡ, ಟಿ.ಆರ್.ಮೋಹನಕುಮಾರ್ ಅವರುಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ನಂತರ ಡಿ.ನಾಗರಾಜು ವೀರ್ಲ ಗೊಂದಿ ಮತ್ತು ತಂಡದಿಂದ, ಹೊಟ್ಟೆ ಬೊಮ್ಮನಹಳ್ಳಿ ಹನುಮಂತರಾಯಪ್ಪ ಅವರ ಭಾಗವತಿಕೆಯಲ್ಲಿ ಕರಿಭಂಟನ ಕಾಳಗ ಮೂಡಲಪಾಯ ಬಯಲಾಟ ಪ್ರದರ್ಶನಗೊಂಡಿತ್ತು.
(Visited 1 times, 1 visits today)





