ತುಮಕೂರು : 

      ತುಮಕೂರು ಜಿಲ್ಲಾ ಅಸಂಘಟಿತ ಕಾರ್ಮಿಕರ ಹೋರಟ ಸಮಿತಿ ಸಿ.ಐ.ಟಿಯು ವತಿಯಿಂದ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಎದರು ರಾಷ್ಟ್ರೀಯ ಬೇಡಿಕೆ ದಿನ ಹಾಗೂ ಮುಷ್ಕರದ ನೋಟೀಸ್ ನೀಡುವ ಚಳುವಳಿ ಅಂಗವಾಗಿ ಪ್ರತಿಭಟಿಸಲಾಯಿತು.

      ಚಳುವಳಿಯನ್ನು ಉದ್ದೇಶಿಸಿ ಸಿ.ಐ.ಟಿ.ಯು ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಮಾತಾನಾಡಿ ಹೆಚ್ಚಿನ ಶ್ರೀಮಂತರು ಸರ್ಕಾರಕ್ಕೆ ತೆರಿಗೆ ವಂಚಿಸಲು ತಂತ್ರ ರೂಪಿಸುತ್ತಾರೆ ಆದರೆ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಬಡಪಾಯಿ ಕಾರ್ಮಿಕರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರತಿ ಕ್ಷಣವು ಸರ್ಕಾರಕ್ಕೆ ತೆರಿಗೆಯನ್ನು ತುಂಬುತ್ತಾರೆ. ಆದರೆ ಇಂತಹ ಕಾರ್ಮಿಕರನ್ನು ಗುತ್ತಿಗೆ ಕಾರ್ಮಿಕ ಕಾಯ್ದೆಯಡಿ ದುಡಿಸಿ ಅವರಿಗೆ ನೀಡಬೇಕಾದ ಸವಲತ್ತುಗಳನ್ನು ನೀಡದೆ ವಂಚಿಸಲಾಗುತ್ತಿದೆ. ಆದ್ದರಿಂದ ಕಾರ್ಮಿಕ ವಿರೋಧಿ ಗುತ್ತಿಪದ್ದತಿ ರದ್ದು ಮಾಡಿ ಸಾಮಾಜಿಕ ಭದ್ರತಾ ಯೋಜನೆ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

      ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಹಾಗೂ ಸಿ.ಐ.ಟಿಯುನ ಉಪಾಧ್ಯಕ್ಷ ಬಿ.ಉಮೇಶ್ ಮಾತನಾಡಿ ಕೋವಿಡ್-19ರ ಸೊಂಕಿನ ದಾಳಿಯಿಂದ ಅಸಂಘಟಿತರ ಬದುಕು ಮತ್ತು ಕುಟುಂಬಗಳು ಅತ್ಯಂತ ಕಷ್ಠಕ್ಕೆ ಸಿಲುಕಿ ಹಸಿವು, ಅನಾರೋಗ್ಯ, ನಿರುದ್ಯೋಗದಿಂದ ನರಳುತ್ತಿವೆ. ಆದ್ದರಿಂದ ಸರ್ಕಾರಗಳು ಅಸಂಘಟಿತರಿಗೆ ಘೋಷಿಸಿರು ಕೋವಿಡ್-19ರ ಸ್ವಹಾಯ ಧನವನ್ನು ತಕ್ಷಣ ನೀಡಬೇಕು ಮಾಸಿಕ 21000ರೂಗಳು ಕನಿಷ್ಠ ಕೂಲಿ ಸಿಗುವಂತೆ ಸರ್ಕಾರ ಕ್ರಮವಹಿಸಬೇಕು. ಖಾಯಂ ಕೆಲಸಗಳಲ್ಲಿ ಯಾವುದೇ ಕಾರಣಕ್ಕೂ ಗುತ್ತಿಗೆ ಅಡಿ ದುಡಿಸದೇ ಸುಪ್ರೀಂಕೋರ್ಟ್ ಆದೇಶದಂತೆ ಕೆಲಸ ನಿರ್ವಹಿಸಬೇಕೆಂದರು. ಅಸಂಘಟಿತ ಕಾರ್ಮಿಕರು ಸಂಘ ಕಟ್ಟಿಕೊಂಡಿದ್ದಾರೆಂದು ಬಲಿಪಶುಮಾಡಿ ಕಿರುಕುಳ ನೀಡಿ ಕೆಲಸದಿಂದ ತೆಗೆಯುವುದನ್ನು ನಿಲ್ಲಿಸಬೇಕೆಂದರು. ಕಟ್ಟಡ ಕಾರ್ಮಿಕ ಸಂಘಟನೆಯ ಉಪಾಧ್ಯಕ್ಷ ಶಂಕರಪ್ಪ ಖಜಾಂಜಿ ರಾಮಣ್ಣ ಮಹಾನಗರ ಪಾಲಿಕೆಯ ಕಸ ಸಂಗ್ರಹದ ಆಟೋ ಚಾಲಕ ಕುಮಾರು, ಗಂಗಬೈಲಯ್ಯ ಬೀದಿಬದಿ ವ್ಯಾಪಾರಿಗಳ ಮುಖಂಡ ವಸೀಂಅಕ್ರಮ್ ಮಾತನಾಡಿದರು. ಹೋರಾಟದಲ್ಲಿ ಕಟ್ಟಡ ಕಾರ್ಮಿಕರು, ಆಸ್ಪತ್ರೆ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಪೌರಕಾರ್ಮಿಕರು ಮಹಾನಗರ ಪಾಲಿಕೆಯ ಕಸ ಸಂಗ್ರಹಣಾ ಆಟೋ ಚಾಲಕರು ಮತ್ತು ಸಹಾಯಕರು ಮನೆಗೆಲಸಗಾರರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಹೋರಾಟದ ನೇತೃತ್ವವನ್ನು ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಗಂಗಾಧರ್, ಇಬ್ರಾಹಿಮ್ ಕಲೀಲ್ ಆಸ್ಪತ್ರೆ ಕಾರ್ಮಿಕ ಸಂಘಟನೆಯ ಮುಖಂಡರಾದ ರಂಗಮ್ಮ, ನೇತ್ರಮ್ಮ ಬೀದಿಬದಿ ವ್ಯಾಪಾರಿಗಳ ಸಂಘದ ಮುತ್ತುರಾಜು, ಜಗದೀಶ್, ಡಿ.ವೈ.ಎಫ್.ಐ.ನ ದರ್ಶನ್, ಗುತ್ತಗೆ ನೌಕರ ಸಂಘದ ನಾಗರಾಜು ಸಿದ್ದರಾಜು ನೇತೃತ್ವವಹಿಸಿದ್ದರು.

       ಜಿಲ್ಲಾಧಿಕಾರಿಗಳ ಕಛೇರಿ ಸಹಾಯಕರಾದ ಭಾಗ್ಯಮ್ಮನವರಿಗೆ ಜಿಲ್ಲಾಧಿಕಾರಿಗಳ ಪರವಾಗಿ ಮನವಿ ನೀಡಲಾಯಿತು. ಹೋರಟದಲ್ಲಿ ಕೋವಿಟ್ ಹಿನ್ನೆಲೆಯಲ್ಲಿ 7500 ರೂ ಪರಿಹಾರ, ಕುಟುಂಬದ ತಲಾ ಒಬ್ಬರಿಗೆ ಉಚಿತ 10 ಕೆ.ಜಿ ಅಕ್ಕಿ, ಮಾಸಿಕ ಕನಿಷ್ಠ 21000 ರೂ ಕೂಲಿ, ಗುತ್ತಿಗೆ ಪದ್ದತಿ ರದ್ದತಿಗೆ, ಸಾಮಾಜಿಕ ಭದ್ರತೆ ಕಾನೂನು ಜಾರಿಗೆ ಘೋಷಣೆ ಕೂಗಿ ಒತ್ತಾಹಿಸಲಾಯಿತು. ಸರ್ಕಾರ ಇವುಗಳನ್ನು ಜಾರಿಮಾಡದಿದ್ದಲ್ಲಿ ನವೆಂಬರ್ 26 ರಂದು ಅಖಿಲ ಭಾರತ ಮುಷ್ಕರಕ್ಕೆ ನಡೆಸಲು ತೀರ್ಮಾನಿಸಲಾಯಿತು.

(Visited 25 times, 1 visits today)