ಚಿರತೆ ದಾಳಿಗೆ ಮೇಕೆ ಬಲಿ

ಕೊರಟಗೆರೆ:

     ಚಿರತೆ ದಾಳಿಗೆ ಒಂದು ಮೇಕೆ ಬಲಿಯಾಗಿದ್ದು, ಸುತ್ತಮುತ್ತಲಿನ ರೈತರಲ್ಲಿ ಆತಂಕ ವ್ಯಕ್ತವಾಗಿರುವ ಘಟನೆ ಶನಿವಾರ ಸಂಜೆ ಕೊರಟಗೆರೆ ಪಟ್ಟಣ ಹೊರವಲಯದಲ್ಲಿ ನಡೆದಿದೆ.

      ಪಟ್ಟಣದ ಹೊರವಲಯದ ಬಸವನ ಬೆಟ್ಟದಲ್ಲಿ ಎರಡು ಚಿರತೆಗಳು ದಾಳಿ ಮಾಡಿ ಒಂದು ಮೇಕೆಯನ್ನು ಕೊಂದು ತಿಂದಿದ್ದು, ಇದನ್ನು ಕಂಡ ಸುತ್ತಮುತ್ತಲಿನ ರೈತರು ತಮ್ಮ ಜಮೀನಿನ ಕಡೆ ಹೋಗಲು ಭಯಬೀತರಾಗಿರುವ ರೈತರು ತಿಳಿದರು.

       ಈ ಘಟನೆಯ ಬಗ್ಗೆ ಸ್ಥಳಿಯರು ಕರೆ ಮಾಡಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಮತ್ತು ಪಶು ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದ್ದು, ಮೇಕೆ ಕಳೆದಕೊಂಡ ಬಡರೈತನಿಗೆ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

(Visited 11 times, 1 visits today)

Related posts

Leave a Comment