ಚಿರತೆ ಪ್ರತ್ಯಕ್ಷ : ಭೀತಿಯಲ್ಲಿ ರೈತರು

ಕೊಡಿಗೇನಹಳ್ಳಿ:

      ಜಯಮಂಗಲಿ ಕೃಷ್ಣ ಮೃಗ ವನ್ಯಧಾಮದ ವ್ಯಾಪ್ತಿಯಲ್ಲಿ ಕಳೆದ 10 ದಿನಗಳಿಂದ ಸಂಜೆ ಹೊತ್ತಿನಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗುತ್ತಿದ್ದು ಈ ಭಾಗದ ರೈತರಲ್ಲಿ ಆತಂಕ ಸೃಷ್ಟಿಸಿದೆ.

      ಹೋಬಳಿಯ ಮೈದನಹಳ್ಳಿ ವನ್ಯಧಾಮದ ಗಡಿಯಲ್ಲಿರುವ ದೊಡ್ಡೇನಹಳ್ಳಿ ಸರ್ವೆ ನಂ 9, 11, 12 ವ್ಯಾಪ್ತಿಯಲ್ಲಿ ನಾಯಿಗಳು ಹಾಗೂ ಜಿಂಕೆಗಳ ಮೇಲೆ ದಾಳಿ ಮಾಡುತ್ತಿದ್ದು, ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸಂಜೀವರಾಯಪ್ಪ ಎಂಬುವವರ ಹಸು ಮೇಲೆ ದಾಳಿ ಮಾಡಿದ್ದು, ರಮೇಶ ಎಂಬುವವರ ಸುಮಾರು 2 ಕುರಿಗಳನ್ನು ಹೊತ್ತೋಯ್ದದ ಘಟನೆ ನಡೆದಿದೆ.

      ಹೊಲಗಳಲ್ಲಿ ಸಾಕಿದ್ದ ನಾಯಿಗಳನ್ನು ಎಳೆದೊಯ್ಯುತಿದ್ದು, ಜಾನುವಾರುಗಳ ಮೇಲೆ ಎರಗುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳಾದ ರಾಜಣ್ಣ, ಶಾಂತರಾಜು, ಸುರೇಶ್. ಎನ್ ಕೆ. ಗಂಗಯ್ಯ, ವಿಜಿ ಕುಮಾರ್ ಆರೋಪಿಸಿದ್ದಾರೆ.

      ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದು ಮಧುಗಿರಿ ರೇಂಜರ್ ಕಚೇರಿಗೆ ದೂರು ಕೊಡಿ ಎಂದು ಇಲ್ಲಿನ ಸಿಬ್ಬಂದಿ ಹೇಳುತ್ತಿದ್ದಾರೆ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯಬೇಕಂದು ಇಲ್ಲಿನ ರೈತರು ಒತ್ತಾಯಿಸಿದ್ದಾರೆ.

      ಪೊದೆಗಳಲ್ಲಿ ಕಂಡು ಬರುವುದು ಸಹಜ ಅದು ಒಂದೆಕಡೆ ಇರುವುದಿಲ್ಲಾ, ಅದರಿಂದ ಭೀತಿಗೊಳ್ಳವುದು ಬೇಡ ಕೂಡಲೇ ಅಲ್ಲಿನ ರೈತರನ್ನು ಸಂಪರ್ಕಿಸಿ ಬೋನ್ ವ್ಯವಸ್ಥೆ ಕಲ್ಪಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ವಲಯ ಅರಣ್ಯ ಅಧಿಕಾರಿ ವಾಸುದೇವ್ ಮೂರ್ತಿ ತಿಳಿಸಿದ್ದಾರೆ.

(Visited 5 times, 1 visits today)

Related posts