ತುಮಕೂರು:

      ಕಾಂಗ್ರೆಸ್ ನಾಯಕರಾದ ಜಮೀರ್, ಇಬ್ರಾಹಿಂ ಮತ್ತು ಹ್ಯಾರೀಸ್‍ರಂತವರು ದೇಶ ವಿಭಜನೆಗೆ ಕೆಲಸ ಮಾಡುತ್ತಿದ್ದಾರೆ ಇವರನು ನಾಗರೀಕರ ರೂಪದಲ್ಲಿರುವ ಇವರನ್ನು ಕೂಡಲೇ ಬಂಧಿಸಬೇಕು ಎಂದು ಆರೋಪಿಸಿದರು.

      ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕೆಂದು ಪತ್ರ ಬರೆದಿರುವ ಕಾಂಗ್ರೆಸ್ ಮುಖಂಡರಾದ ಸಿ.ಎಂ.ಇಬ್ರಾಹಿಂ, ಜಮೀರ್ ಅಹಮದ್ ಮತ್ತು ಹ್ಯಾರೀಸ್ ಅವರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಬಂಧಿಸಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ.

      ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೊಗಡು ಶಿವಣ್ಣರವರು “ಜಮೀರ್, ಇಬ್ರಾಹಿಂ ಮತ್ತು ಹ್ಯಾರೀಸ್ ದೇಶ ವಿಭಜನೆಯ ಕೆಲಸಕ್ಕೆ ಮುಂದಾಗಿದ್ದಾರೆ. ಇಂತವರು ದೇಶಕ್ಕೆ ಅಪಾಯಕಾರಿಗಳಾಗಿದ್ದಾರೆ. ಇವರು ನಾಗರೀಕತೆಯ ರೂಪದಲ್ಲಿರುವ ಟೆರರಿಸ್ಟ್‍ಗಳು, ದೇಶದ್ರೋಹಿಗಳು. 70 ವರ್ಷಗಳಿಂದ ನಮ್ಮ ಸರ್ಕಾರಗಳು ನೀಡಿದ ಸವಲತ್ತುಗಳನ್ನು ದುರ್ಬಳಕೆ ಮಾಡಿಕೊಂಡು ದೇಶಕ್ಕೆ ಕಂಟಕವಾಗಿದ್ದಾರೆ’’ ಎಂದರು.

      ಈ ತಬ್ಲಿಘಿಗಳು ಕೆಟ್ಟ ಸಂತಾನ. ಇವರನ್ನು ದೇಶದಿಂದ ಹೊರಹಾಕಬೇಕು. ಕೊರೊನ ಸಂದರ್ಭದಲ್ಲಿ ದೇವರ ಪ್ರಾರ್ಥನೆ ಸಲ್ಲಿಸುವುದಕ್ಕಲ್ಲ. ರೋಗ ಹರಡುವುದಕ್ಕೂ ಇವರು ಯೋಜಿಸಿದ್ದಾರೆ ಎಂದು ಶಿವಣ್ಣ ವಾಗ್ದಾಳಿ ನಡೆಸಿದರು.

      ದೇಶ ವಿಭಜನೆಯ ಸಂದರ್ಭದಲ್ಲಿ ಕೇವಲ 3 ಕೋಟಿ ಮುಸ್ಲೀಮರು ಇದ್ದರು. ಇಷ್ಟು ವರ್ಷಗಳಿಂದ ಅವರನ್ನು ಸೌಹಾರ್ದಯುತವಾಗಿ ನಡೆಸಿಕೊಂಡು ಬಂದಿದ್ದೇವೆ. ಆದರೆ ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ತೆರಳಿದ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಅವರನ್ನು ಮತಾಂತರ ಮಾಡಲಾಗುತ್ತಿದೆ. ಹಿಂಸೆ ನೀಡಲಾಗುತ್ತಿದೆ. ಹಿಂದೂಗಳೇ ಇಲ್ಲದಂತೆ ಮಾಡಲಾಗುತ್ತಿದೆ ಎಂದು ದೂರಿದರು.

       ರಂಜಾನ್ ಹಬ್ಬ ಆಚರಣೆಯ ಹೆಸರಿನಲ್ಲಿ ಕೊರೊನ ಹರಡುವ ಹುನ್ನಾರ ನಡೆಯುತ್ತಿದೆ. ಈ ಮೂವರು ಮುಖಂಡರು ತಬ್ಲಿಘಿಗಳು. ಕೇಂದ್ರವಾಗಲಿ, ರಾಜ್ಯ ಸರ್ಕಾರವಾಗಲೀ ಇವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

       ಮಾಧ್ಯಮಗೋಷ್ಠಿಯ ನಡುವೆ ಅವಾಚ್ಯ ಶಬ್ದಗಳು ಶಿವಣ್ಣ ಅವರಿಂದ ಹೊರಬಂದವು. ನನಗೆ ಇಷ್ಟು ವಯಸ್ಸಾಗಿದೆ ನನ್ನ ಮೈ ಉರಿಯುತ್ತಿದೆ. ದೇಶ ರಕ್ಷಣೆ ನಮ್ಮ ಜವಾಬ್ದಾರಿ. ಹಾಗಾಗಿ ಕೆಟ್ಟಭಾಷೆಯಲ್ಲಿ ಮಾತನಾಡಿದ್ದೇನೆ. ಅವುಗಳನ್ನು ಹೊಡೆದು ಹಾಕಿ. ಬದಲಿಗೆ ಕೆಟ್ಟ ಸಂತಾನ ಎಂತ ಬೇಕಾದರೆ ಬರೆಯಿರಿ ಎಂದು ಉಚಿತ ಸಲಹೆಯನ್ನು ನೀಡಿದರು.

      ನಾಲ್ಕು ಬಾರಿ ಶಾಸಕರಾಗಿರುವ ಮತ್ತು ಎರಡು ಬಾರಿ ಸಚಿವರಾಗಿ ಕೆಲಸ ಮಾಡಿರುವ ಸೊಗಡು ಶಿವಣ್ಣ ಮಾಗಿಲ್ಲ ಎಂಬುದು ಅವರು ನಡೆಸುವ ಪ್ರತಿಯೊಂದು ಪತ್ರಿಕಾಗೋಷ್ಠಿಗಳಿಂದ ತಿಳಿದುಬರುತ್ತದೆ. ಕೊರೊನ ನಿಯಂತ್ರಣಕ್ಕೆ ಬೇಕಾದ ಸಲಹೆ ಕೊಡುವುದು ಬಿಟ್ಟು ಒಂದು ಸಮುದಾಯವನ್ನು ದೂರುವುದು ಸರಿಯಲ್ಲ ಎಂಬುದು ಅವರಿಗೆ ಹೊಳೆಯಲಿಲ್ಲವೇ ಎಂಬ ಮಾತುಗಳು ಪತ್ರಕರ್ತರ ನಡುವೆ ಕೇಳಿ ಬಂದಿವೆ.

(Visited 20 times, 1 visits today)