ಜಿ.ಪಂ.ಅಧ್ಯಕ್ಷರ ವಿರುದ್ಧ ಅವಿಶ್ವಾಸ ಸೂಚನಾ ಸಭೆ : ಅ.15ಕ್ಕೆ ಮುಂದೂಡಿಕೆ

ತುಮಕೂರು:

      ಭಾರತ ಚುನಾವಣಾ ಆಯೋಗವು ಬೆಂಗಳೂರು ಶಿಕ್ಷಕರ ಹಾಗೂ ಆಗ್ನೇಯ ಪದವೀಧರರ ಕ್ಷೇತ್ರಗಳಿಗೆ ಚುನಾವಣೆ ನಡೆಸಲು ಹೊರಡಿಸಿರುವ ವೇಳಾಪಟ್ಟಿಯನ್ವಯ ಚುನಾವಣಾ ನಾಮನಿರ್ದೇಶನ ಪ್ರಕ್ರಿಯೆಗಳ ಹಿನ್ನಲೆಯಲ್ಲಿ ಅಕ್ಟೋಬರ್ 7ರಂದು ನಿಗಧಿಯಾಗಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ಎಂ. ರವಿಕುಮಾರ್ ಅವರ ವಿರುದ್ಧ ಅವಿಶ್ವಾಸ ಸೂಚನಾ ಸಭೆಯನ್ನು ಅಕ್ಟೋಬರ್ 15ರ ಬೆಳಿಗ್ಗೆ 11.30 ಗಂಟೆಗೆ ಮುಂದೂಡಲಾಗಿದೆ.

     ಸಭೆಯು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಾದೇಶಿಕ ಆಯುಕ್ತರ ಕಛೇರಿ ಪ್ರಕಟಣೆ ತಿಳಿಸಿದೆ.

(Visited 7 times, 1 visits today)

Related posts