ಜೂಜು ಅಡ್ಡೆ ಮೇಲೆ ದಾಳಿ : 11 ಸಾವಿರ ವಶ!

ಕೊಡಿಗೇನಹಳ್ಳಿ:

 

      ಹಬ್ಬದ ಆಸುಪಾಸಿನಲ್ಲಿ ವಿವಿಧೆಡೆ ಜೂಜಾಡುತಿದ್ದ ಖಚಿತ ಮಾಹಿತಿ ಮೇರೆಗೆ ಪಿಎಸೈ ಮೋಹನ್ ಕುಮಾರ್ ನೇತೃತ್ವದ ತಂಡ ದಾಳಿ ಪಣಕ್ಕಿಟ್ಟಿದ್ದ 11,230 ರೂಗಳನ್ನು ವಶಪಡಿಸಿಕೊಂಡಿದ್ದಾರೆ.

      ಹೋಬಳಿಯ ಮೈದನಹಳ್ಳಿ ಗ್ರಾಮದಲ್ಲಿ ಜೂಜಾಡುತಿದ್ದ ಮಲ್ಲೇಗೌಡ, ಚಿಕ್ಕಣ್ಣ, ಲಕ್ಷ್ಮಿಪತಿ ಇವರಿಂದ 1390 ರೂ ಹಾಗೂ ಪುರವರ ಹೊಬಳಿಯ ದೊಡ್ಡಹೊಸಹಳ್ಳಿ ಗ್ರಾಮದಲ್ಲಿ ಲಕ್ಷ್ಮಿನಾರಯಣ, ನಾಗರಾಜು, ಹನುಮಂತರಾಯ ಎಂಬುವವರಿಂದ 1860 ರೂ ವಶಕ್ಕೆ ಪಡೆದಿದ್ದಾರೆ.

      ಕೋಡ್ಗದಾಲ ಗ್ರಾಮದಲ್ಲಿ ರಾಮಂಜಿನೇಯ, ಚಿನ್ನಪ್ಪ, ನಾಗೇಂದ್ರ ಇವರಿಂದ 3640 ರೂ ಸೇರಿದಂತೆ ಗಿರೇಗೌಡನಹಳ್ಳಿಯಲ್ಲಿ 5 ಮಂದಿ ಜೂಜು ಕೋರರಿಂದ 1120 ಹಾಗೂ ವೀರನಾಗೇನಹಳ್ಳಿ 3220 ರೂಗಳನ್ನು ವಶಕ್ಕೆ ಪಡೆದಿದ್ದು ಸುಮಾಶರು 20 ಜನ ವಿರುದ್ಧ ಕೊಡಿಗೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

(Visited 43 times, 2 visits today)

Related posts

Leave a Comment