ತಂದೆ-ಮಗನನ್ನು ಬಲಿ ಪಡೆದ ಅವೈಜ್ಞಾನಿಕ ರಸ್ತೆ ಕಾಮಗಾರಿ

 ಕೊರಟಗೆರೆ:

      ಅವೈಜ್ಞಾನಿಕ ಕೇಶಿಪ್ ರಾಜ್ಯ ಹೆದ್ದಾರಿಯ ತಿರುವಿನಲ್ಲಿ ಖಾಸಗಿ ಮತ್ತು  ದ್ವಿಚಕ್ರ ವಾಹನದ ನಡುವೆ ಅಪಘಾತ ಆಗಿ ತನ್ನ ತಮ್ಮನ ಮದುವೆ ಆಮಂತ್ರಣ ಪತ್ರಿಕೆ ಕೊಟ್ಟು ಹಿಂದಕ್ಕೆ ಬರುತ್ತಿದ್ದ ದ್ವಿಚಕ್ರ ವಾಹನದಲ್ಲಿದ್ದ ತಂದೆ ಮತ್ತು ಮಗ ಇಬ್ಬರು ಮೃತ ಪಟ್ಟಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

     ತಾಲೂಕಿನ ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟ ಗ್ರಾಪಂ ವ್ಯಾಪ್ತಿಯ ಮಲ್ಲೇಕಾವು ಗ್ರಾಮದ ವಾಸಿಯಾದ ಕೃಷ್ಣಪ್ಪನ ಮಗನಾದ ತಿಮ್ಮಯ್ಯ(62) ಮತ್ತು ತಿಮ್ಮಯ್ಯನ ಮಗನಾದ ವೆಂಕಟೇಶ್(38) ಎಂಬ ತಂದೆಮಗ ಮೃತಪಟ್ಟ ದುರ್ದೈವಿ. ತನ್ನ ಚಿಕ್ಕ ಮಗನ ಮದುವೆಯ ಆಮಂತ್ರಣ ಪತ್ರಿಕೆ ಕೊಟ್ಟು ಹಿಂದಕ್ಕೆ ಬರುವ ದಾರಿಯಲ್ಲಿ ಅಪಘಾತ ಆಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

      ಕೊರಟಗೆರೆ ಪಟ್ಟಣದ ಬೈಪಾಸ್‍ಗೆ ಸಂಪರ್ಕ ಕಲ್ಪಿಸುವ ಸಿದ್ದೇಶ್ವರ ಕಲ್ಯಾಣ ಮಂಟಪ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಅಪಘಾತವಾಗಿದೆ. ಮಧುಗಿರಿ ಕಡೆಯಿಂದ ತಿರುವಿನಲ್ಲಿ ಅತಿವೇಗದಿಂದ ಬಂದ ಮಾರುತಿ ಕೃಪ ಖಾಸಗಿ ಬಸ್, ಕೊರಟಗೆರೆ ಕಡೆಯಿಂದ ತನ್ನ ಮಲ್ಲೆಕಾವು ಗ್ರಾಮದ ಮನೆಗೆ ದ್ವೀಚಕ್ರ ವಾಹನದಲ್ಲಿ ತೆರಳುತ್ತೀದ್ದ ಅಪ್ಪಮಗನ ಮೇಲೆ ಹರಿದು ಅಪಘಾತವಾಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

      ತಲೆಗೆ ಪೆಟ್ಟು ಬಿದ್ದ ತಿಮ್ಮಯ್ಯನಿಗೆ ಕೊರಟಗೆರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬೆಂಗಳೂರು ನಿಮ್ಹಾನ್ಸ್ ಗೆ ದಾಖಲು ಮಾಡಲಾಗಿದೆ. ಸೋಮವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿ ಆಗದೇ ಮೃತ ಪಟ್ಟಿದ್ದಾನೆ. ಅಪಘಾತ ಸ್ಥಳಕ್ಕೆ ಸಿಪಿಐ ಮುನಿರಾಜು, ಎಎಸೈ ರಾಮಕೃಷ್ಣಯ್ಯ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 35 times, 1 visits today)

Related posts

Leave a Comment