ತುಮಕೂರು :

      ಕಾನೂನು ಉಲ್ಲಂಘಿಸದೇ ಕಾರ್ಯನಿರ್ವಹಿಸುವ ಮೂಲಕ ಸಾವಿರಾರು ಜನರಿಗೆ ಸಹಾಯ ಮಾಡಿರುವ ತಹಶೀಲ್ದಾರ್ ಎಂ.ಮಮತಾ ಅವರನ್ನು ಗುಬ್ಬಿ ತಾಲ್ಲೂಕಿಗೆ ಮರು ನಿಯೋಜನೆಗೊಳಿಸದಿದ್ದರೆ ತುಮಕೂರು ಬಂದ್ ಮಾಡಲಾಗುವುದು ಎಂದು ದಲಿತ ಮುಖಂಡ ಕೊಡಿಯಾಲ ಮಹದೇವ್ ಆಗ್ರಹಿಸಿದರು.

      ಗುಬ್ಬಿ ತಹಶೀಲ್ದಾರ್ ಮಮತಾ ಅವರನ್ನು ಮರು ನಿಯೋಜನೆಗೊಳಿಸುವಂತೆ ಒತ್ತಾಯಿಸಿ ದಲಿತರ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಿಪ್ಪೂರಿನ ಜಮೀನು ಒತ್ತುವರಿಯಾಗಿದ್ದು, ರಾಜಕಾರಣಿಗಳು ಆರ್ ಐ, ವಿಎ ಅವರನ್ನು ಬಳಸಿಕೊಂಡು ಕುತಂತ್ರ ರೂಪಿಸಿ ಅವರನ್ನು ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.

      ಹೊದಲೂರು ಕೆರೆಯನ್ನು ಒತ್ತುವರಿ ಮಾಡಿಕೊಂಡಿರುವ ಸಂಸದರ ಜಮೀನನ್ನು ತೆರವುಗೊಳಿಸಲು ಮುಂದಾಗಿದ್ದ ಮಮತಾ ಅವರನ್ನು, ಅಲ್ಲಿನ ಗ್ರಾಮ ಲೆಕ್ಕಿಗ ಮುರುಳಿ, ರಾಜಸ್ವ ನಿರೀಕ್ಷಕ ರಮೇಶ್ ಅವರನ್ನು ಬಳಸಿಕೊಂಡು, ಕುಮ್ಮಕ್ಕು ನೀಡಿ ತಹಶೀಲ್ದಾರ್ ಅವರನ್ನು ಕುತಂತ್ರದಿಂದ ವರ್ಗಾವಣೆ ಆಗುವಂತೆ ಮಾಡಿದ್ದಾರೆ ಎಂದು ದೂರಿದ ಅವರು, ಆರ್ ಐ ಅವರನ್ನು ಅಮಾನತುಗೊಳಿಸಿ ವಿಚಾರಣೆ ನಡೆಸಬೇಕೆಂದು ತಾಕೀತು ಮಾಡಿದರು.

      ಅಹಿಂದ ಮುಖಂಡ ವಿರುಪಾಕ್ಷ ಡ್ಯಾಗೇರಹಳ್ಳಿ ಮಾತನಾಡಿ, ದೇಶದಲ್ಲಿ ಕೋಮುವಾದಿಗಳು ಹೆಚ್ಚಾದಂತೆ ದಲಿತ ಅಧಿಕಾರಿಗಳ ಮೇಲೆ ಪಿತೂರಿ ನಡೆಸುತ್ತಿದ್ದಾರೆ, ಮೊದಲಿನಿಂದಲೂ ಇದ್ದ ಈ ವ್ಯವಸ್ಥೆ ಇತ್ತಿಚೆಗೆ ಹೆಚ್ಚಾಗಿದ್ದು ದಲಿತ ಹಾಗೂ ಮುಸ್ಲಿಂರು ಒಗ್ಗಟ್ಟಾಗಿ ಈ ಕೋಮುಶಕ್ತಿಯನ್ನು ಎದುರಿಸಬೇಕಿದೆ ಎಂದು ತಿಳಿಸಿದರು.

      ದೇಶದಲ್ಲಿ ಜಾತಿ ಮತ್ತು ಧರ್ಮದ ಆಧಾರದ ಮೇಲೆ ನ್ಯಾಯ ನೀಡುವ ವ್ಯವಸ್ಥೆ ಇದೆ, ದಕ್ಷ ಅಧಿಕಾರಿ ಮಮತಾ ಅವರನ್ನು ದಲಿತ ಮಹಿಳೆ ಎನ್ನುವ ಕಾರಣಕ್ಕೆ ಹೀನಾಯವಾಗಿ ಮಾತನಾಡಿದ ಸುದ್ದಿನಿರೂಪಕನಿಗೆ ಬುದ್ಧಿ ಇರಬೇಕಿತ್ತು ಆದರೆ ಜಾತಿ ಕಾರಣದಿಂದ ಈ ರೀತಿಯ ಅವಹೇಳನವನ್ನು ದಲಿತ ಮಹಿಳೆ ಎದುರಿಸುವಂತಾಯಿತು ಎಂದು ಹೇಳಿದರು.

      ದಲಿತ ಮುಖಂಡ ಜಿ.ವಿ.ಮಂಜುನಾಥ್ ಮಾತನಾಡಿದ ಇಡೀ ತಾಲ್ಲೂಕು ಕಚೇರಿಯನ್ನು ಮನ ಮನೆಗೆ ಕರೆದು ಹೋಗಿದ್ದ ತಹಶೀಲ್ದಾರ್ ಮಮತಾ ಅವರಿಂದ ಭ್ರಷ್ಟಾಚಾರ ನಿಯಂತ್ರಣವಾಗಿದೆ, ತಹಶೀಲ್ದಾರ್ ಮಮತಾ ಅವರನ್ನು ಮರು ನಿಯೋಜನೆ ಮಾಡುವಂತೆ ತಾಲ್ಲೂಕಿನ ಜನ ಪಕ್ಷಬೇಧ ಮರೆತು ಬಂದಿರುವುದೇ ಅವರ ದಕ್ಷತೆಗೆ ಸಾಕ್ಷಿಯಾಗಿದೆ ಎಂದರು.

      ತಿಪ್ಪೂರು ಘಟನೆಯನ್ನು ಮಾಧ್ಯಮಗಳು ಮರು ಸೃಷ್ಟಿಸಿದ್ದು ತಾಲ್ಲೂಕಿನ ಜಾತಿ ರಾಜಕಾರಣ ಹಾಗೂ ಪಟ್ಟಭದ್ರ ಹಿತಾಸಕ್ತಿಯಿಂದ ಮಮತಾ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಹೊದಲೂರು ಕೆರೆ ಒತ್ತುವರಿಯಲ್ಲಿ ಸಂಸದರ ಪಾತ್ರವಿದ್ದು, ಸಂಸದರ ಹಿಂಬಾಲಕರಿಗೆ ತಹಶೀಲ್ದಾರ್ ಕುಮ್ಮಕ್ಕು ನೀಡದಿದ್ದರಿಂದ ಅವರನ್ನು ವರ್ಗಾವಣೆ ಮಾಡಿಸಲಾಗಿದೆ ಎಂದು ದೂರಿದರು.

      ರೈತ ಮುಖಂಡ ಯೋಗೀಶ್ ಮೆಳೇಕಲ್ಲಹಳ್ಳಿ ಮಾತನಾಡಿ ತಿಪ್ಪೂರಿನಲ್ಲಿ ತಹಶೀಲ್ದಾರ್ ಹೇಳಿದ ಜಾಗ ಬಿಟ್ಟು ಬೇರೆ ಜಾಗವನ್ನು ತೆರವುಗೊಳಿಸಿದ್ದು, ಗ್ರಾಮ ಲೆಕ್ಕಿಗ ಹಾಗೂ ತಹಶೀಲ್ದಾರ್ ಅವರ

(Visited 128 times, 1 visits today)