ತುಮಕೂರು :

      ಮಧುಗಿರಿ ತಾಲ್ಲೂಕು ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ವಜಾ ಗೊಳಿಸದೇ ವಿಳಂಬ ಧೋರಣೆಯನ್ನು ಖಂಡಿಸಿ ಶ್ರೀ ಪಂಡಿತ್ ಪುಟ್ಟರಾಜು ಗವಾಯಿ ತಾಲ್ಲೂಕು ಅಂಗವಿಕಲರ ಒಕ್ಕೂಟ, ಮಧುಗಿರಿ ಇವರಿಂದ ಜಿಲ್ಲಾ ಪಂಚಾಯತಿ ಕಾರ್ಯಾಲಯದ ಮುಂಭಾಗ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ.

      ಶತ ಶತಮಾನಗಳಿಂದ ಸಕಲ ಸವಲತ್ತು ಸಂಪನ್ಮೂಲ ಮತ್ತು ಅವಕಾಶಗಳಿಂದ ವಂಚಿತಗೊಂಡ ವಿಕಲ ಚೇತನ ಸಮಾಜ 1995 ಅಂಗವಿಕಲರ ಅಧಿನಿಯಮ ಕಾಯ್ದೆಯಿಂದ ವಿಮೋಚನೆಗೊಂಡಿತ್ತು. ಈ ಸದರಿ ಕಾಯ್ದೆ ಮಹತ್ತರ ಬದಲಾವಣೆ ತಂದಿದೆ. ಈ ಕಾಯ್ದೆಯ ಆಶಯದಂತೆ ಶ್ರೀ ಪಂಡಿತ್ ಪುಟ್ಟರಾಜು ಗವಾಯಿ ತಾಲ್ಲೂಕು ಅಂಗವಿಕಲರ ಒಕ್ಕೂಟ ಸುಮಾರು 8 ವರ್ಷಗಳಿಂದಲೂ ಮಧುಗಿರಿ ತಾಲ್ಲೂಕಿನ ಎಲ್ಲಾ ವಿಕಲ ಚೇತನ ವ್ಯಕ್ತಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಸರಿಯಷ್ಟೇ. ಯಾವುದೇ ಪ್ರೋತ್ಸಾಹ ಧನವಿಲ್ಲದೆ ಒಕ್ಕೂಟವು ತನ್ನ ಪದಾಧಿಕಾರಿಗಳಾದ ನಾವುಗಳು ದುಡಿಯುವ ಹಣದಲ್ಲಿಯೇ ಇದಕ್ಕೆ ತಗಲುವ ಖರ್ಚು, ವೆಚ್ಚಗಳನ್ನು ನಾವೇ ಭರಿಸುತ್ತಾ ಬಂದಿದ್ದೇವೆ. ತಿಂಗಳಿಗೊಮ್ಮೆ ಸಭೆಗಳನ್ನು ಸೇರಿ ತಾಲ್ಲೂಕಿನ ವಿಕಲ ಚೇತನ ವ್ಯಕ್ತಿಗಳ ಆರ್ಥಿಕ, ಶೈಕ್ಷಣಿಕ, ವೈದ್ಯಕೀಯ ಸಮುದಾಯದತ್ತ ಕಾರ್ಮಿಕ ಕಾರ್ಯಕ್ರಮಗಳು ಹಾಗೂ ಕೌಟುಂಬಿಕ ಸಮಸ್ಯೆಗಳನ್ನು ಚರ್ಚಿಸುತ್ತಾ ಬಂದಿದ್ದೇವೆ.

      ಸರ್ಕಾರ 2007-08ರಲ್ಲಿ ವಿಕಲ ಚೇತನ ವ್ಯಕ್ತಿಗಳಿಗೆ ಸ್ವ ಇಚ್ಛೆಯಿಂದ ಜೀವನ ಸಾಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿವಿಧ ಇಲಾಖೆಗಳಿಂದ ವಿಕಲ ಚೇತನ ವ್ಯಕ್ತಿಗಳಿಗೆ ಮನೆ ಬಾಗಿಲಿಗೆ ಸವಲತ್ತುಗಳನ್ನು ಒದಗಿಸಲು 1995 ರ ಅಂಗವಿಕಲರ ಅಧಿನಿಯಮ ಕಾಯ್ದೆಯು ಸಂಪೂರ್ಣ ಅನುಷ್ಠಾನಗೊಳಿಸಲು ಸರ್ಕಾರ ತಾತ್ಕಾಲಿಕ ಹುದ್ದೆಯನ್ನಾಗಿ ಗೌರವ ಧನದ ಆಧಾರದ ಮೇಲೆ ಎಂ.ಆರ್.ಡಬ್ಲ್ಯೂ ಹಾಗೂ ವಿ.ಆರ್.ಡಬ್ಲ್ಯು ಹುದ್ದೆಗಳನ್ನು ಸೃಷ್ಟಿಸಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳು, ತಾಲ್ಲೂಕು ಅಂಗವಿಕಲರ ಅನುಷ್ಠಾನ ಸಮಿತಿ ಅಧ್ಯಕ್ಷರು ಕಾರ್ಯನಿರ್ವಾಹಣಾಧಿಕಾರಿ ಹಾಗೂ ತಾಲ್ಲೂಕು ಶಿಶು ಅಭಿವೃದ್ಧಿ ಕಾರ್ಯದರ್ಶಿಯನ್ನಾಗಿ ಸಮಿತಿ ರಚಿಸಿ ಅನುಷ್ಠಾನಗೊಳಿಸಿದ್ದರು.

      ಈ ಸಮಿತಿಯಿಂದ ಆರ್‍ಎಂಡಬ್ಯ್ಲು ನೇಮಕಗೊಂಡ ಮಧುಗಿರಿ ತಾಲ್ಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತನಾದ ನಾಗೇಶ್ ಹತ್ತು ವರ್ಷಗಳಲ್ಲಿ ಎರಡು ವರ್ಷಗಳ ಕಾಲ ಮಾತ್ರ ಕಾನೂನಿನಂತೆ ದೊರೆಯುವ ಸೌಲಭ್ಯಗಳನ್ನು ನಿಜವಾದ ವಿಕಲಚೇತನರಿಗೆ ದೊರಕಿಸಿಕೊಡುತ್ತಿದ್ದರು. ಆದರೆ 2011 ರಿಂದ ಅಮಾಯಕ ವಿಕಲಚೇತನ ವ್ಯಕ್ತಿಗಳಲ್ಲಿ ಸರ್ಕಾರದಲ್ಲಿ ದೊರೆಯುವ ಸಾಧನ ಸಲಕರಣೆಗಳಲ್ಲಿ ಒಂದಾದ ತ್ರಿಚಕ್ರ ವಾಹನಗಳು, ತ್ರಿಚಕ್ರ ಸೈಕಲ್‍ಗಳು, ಅಂಗವಿಕಲರ ಗುರುತಿನ ಚೀಟಿ ಪುಸ್ತಕ ನೀಡಲು, ವಿದ್ಯಾರ್ಥಿ ವೇತನ ಕೊಡಿಸಲು ಅರ್ಹತೆ ಇಲ್ಲದೆ ಇರುವ ಅಂಧರಿಗೆ ಲ್ಯಾಪ್‍ಟ್ಯಾಪ್ ಸರ್ಕಾರದ ವತಿಯಿಂದ ಉಚಿತವಾಗಿ ಕೊಡಿಸುತ್ತಿದ್ದರು ಎಂದು ಸುಳ್ಳು ಮಾಹಿತಿ ನೀಡಿ ನಗದು ರೂಪದಲ್ಲಿ ವಸೂಲಿ ಮಾಡುತ್ತಿದ್ದರು.

      ದಲಿತರ ಕುಂದುಕೊರತೆ ಸಭೆಯಲ್ಲಿ ಶಾಸಕರು, ತಹಸೀಲ್ದಾರರು, ಡಿವೈಎಸ್ಪಿ, ಇ.ಓ., ಜಿ.ಪಂ. ಸದಸ್ಯರು, ತಾ.ಪಂ.ಸದಸ್ಯರು ತಾಲ್ಲೂಕಿನ ಎಲ್ಲಾ ದಲಿತ ಮುಖಂಡರ ಸಭೆಯಲ್ಲಿ ಅನೇಕ ದಲಿತ ಮುಖಂಡರುಗಳು ಸಾಕ್ಷಿ ಸಮೇತ ಈ ಸಭೆಗೆ ನಾಗೇಶ್‍ರ ಲಂಚಗುಳಿತನ ಮೋಸದ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಆಗ ಶಾಸಕರಾದ ಎಂ.ವಿ.ವೀರಭದ್ರಯ್ಯ ಅವರು ಇ.ಓ. ಅವರಿಗೆ ವಜಾಗೊಳಿಸಿ ಎಂದು ತಾಕೀತು ಮಾಡಿದ್ದರು. ಇವರ ಲಂಚಗುಳಿತನದಿಂದ ತಾಲ್ಲೂಕಿನ ಸಾವಿರಾರು ವಿಕಲಚೇತನರಿಗೆ ಜೀವನ ನರಕಮಯವಾಗಿ ಸವಲತ್ತುಗಳು ಸಿಗದೆ ಅನ್ಯಾಯವಾಗಿದೆ. ಕೂಡಲೇ ಇವರನ್ನು ವಜಾಗೊಳಿಸಿ ನ್ಯಾಯ ಒದಗಿಸುವಂತೆ ಜಿಲ್ಲಾ ಪಂಚಾಯತ್ ಸಿಇಓಅವರನ್ನು ಒತ್ತಾಯಿಸಿದರು.

      ಈ ಸಂದರ್ಭದಲ್ಲಿ ರಂಗನಾಥಯ್ಯ, ಜೆ.ಸಿ. ಅಂಜನ್, ಹನುಮಂತರಾಯ, ತಾಲ್ಲೂಕು ಅಧ್ಯಕ್ಷರು, ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

(Visited 59 times, 1 visits today)