ತುಮಕೂರು : 

      ತುಮಕೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ವೈ.ಎಸ್. ಸಿದ್ದೇಗೌಡ ರವರು 2020-21ನೇ ಶೈಕ್ಷಣಿಕ ಸಾಲಿನಿಂದ ವಿಶ್ವವಿದ್ಯಾನಿಲಯದಲ್ಲಿ, ತಿಪಟೂರಿನ ಸ್ನಾತಕೋತ್ತರ ಕೇಂದ್ರದಲ್ಲಿ ಹಾಗೂ ಶಿರಾ ಸ್ನಾತಕೋತ್ತರ ಕೇಂದ್ರದಲ್ಲಿ ಈ ಕೆಳಕಂಡ ಸ್ನಾತಕೋತ್ತರ ಕೋರ್ಸ್‍ಗಳನ್ನು ಹಾಗೂ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‍ಗಳನ್ನು ಪ್ರಾರಂಭಿಸಲು ಕ್ರಮ ಕೈಗೊಂಡಿದ್ದಾರೆ.

      ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭಿಸಿರುವ ಕೋರ್ಸ್ ಗಳು:

    1) ಎಂ.ಎ. ಹಿಂದಿ:

      ಸ್ನಾತಕೋತ್ತರ ಹಿಂದಿ ಪದವಿಯನ್ನು ಪಡೆಯುವುದರಿಂದ ಬೋಧಕರಾಗಬಹುದು. ಭಾಷಾಂತರಕಾರರಾಗಿ ಹಾಗೂ ಪ್ರವಾಸಿ ಕೇಂದ್ರಗಳಲ್ಲಿ ಹಿಂದಿ ಭಾಷಾ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುವ ಅವಕಾಶವಿದೆ. 2) ಎಂ.ಎ. ಸಂಸ್ಕøತ: ಸಂಸ್ಕøತ ಅಧ್ಯಯನದಿಂದ ಭಾಷಾಂತರಕಾರರಾಗಬಹುದು ಹಾಗೂ ಶಾಲಾ ಕಾಲೇಜುಗಳಲ್ಲಿ ಬೋಧಕರಾಗಿ, ಭಾಷಾ ಪ್ರಚಾರಕರಾಗಿ ಕಾರ್ಯನಿರ್ವಹಿಸಬಹುದು.

ತಿಪಟೂರು ಸ್ನಾತಕೋತ್ತರ ಕೇಂದ್ರ:

       1) ಎಂ.ಎಸ್ಸಿ. ಮೈಕ್ರೋಬಯಾಲಜಿ: ಈ ಕೋರ್ಸ್‍ನ್ನು ಅಧ್ಯಯನ ಮಾಡಿದ ಪದವೀಧರರು ಬಯೋಮೆಡಿಕಲ್ ವಿಜ್ಞಾನಿಗಳು, ಕ್ಲಿನಿಕಲ್ ರಿಸರ್ಚ್ ಅಸೋಸಿಯೇಟ್ಸ್, ಫಾರ್ಮಕಾಲಜಿಸ್ಟ್ಸ್ (ಔಷಧಶಾಸ್ತ್ರ), ಫುಡ್ ಟೆಕ್ನಾಲಜಿಸ್ಟ್ಸ್ (ಆಹಾರ ತಂತ್ರಜ್ಞಾನ), ಲ್ಯಾಬ್ ಟೆಕ್ನಿಶಿಯನ್ಸ್ ಆಗಿ ನೇಮಕ ಹೊಂದಬಹುದು. 2) ಪಿ.ಜಿ. ಡಿಪ್ಲೊಮಾ ಇನ್ ಕೋಕೋನಟ್ ಪ್ಲಾಂಟೇಶನ್ ಮ್ಯಾನೇಜ್‍ಮೆಂಟ್ ಅಂಡ್ ಪ್ರೊಸೆಸಿಂಗ್: ಈ ಕೋರ್ಸ್‍ನ್ನು ಪಡೆದವರು ಸರ್ಕಾರದ ನಿಗಮ ಹಾಗೂ ಮಂಡಳಿಗಳಲ್ಲಿ, ತೆಂಗಿನ ತೋಟಗಾರಿಕೆ ಮೇಲ್ವಿಚಾರಣೆ ಹಾಗೂ ಸಂಸ್ಕರಣೆ ಕ್ಷೇತ್ರಗಳಲ್ಲಿ ಬೇಡಿಕೆ ಇದೆ ಹಾಗೂ ಅವರುಗಳು ವೈಜ್ಞಾನಿಕ ಬೇಸಾಯ ಕ್ರಮವನ್ನು ಅನುಸರಿಸುವ ಮೂಲಕ ಪ್ರಗತಿಪರ ಕೃಷಿಕರಾಗಬಹುದು.

ಶಿರಾ ಸ್ನಾತಕೋತ್ತರ ಕೇಂದ್ರ:

      1) ಎಂ.ಎ. ಶಿಕ್ಷಣ: ಎಂ.ಎ. ಶಿಕ್ಷಣ ಪದವಿಯು ಎಂ.ಇಡಿ. ಪದವಿಗೆ ಸಮಾನವಾಗಿರುತ್ತದೆ. ಪದವಿ ಕಾಲೇಜುಗಳಲ್ಲಿ ಶಿಕ್ಷಣಶಾಸ್ತ್ರ ಬೋಧಿಸಲು ಅರ್ಹರಾಗಿರುತ್ತಾರೆ. ಹಾಗಾಗಿ ಪದವಿ, ಪದವಿ ಪೂರ್ವ, ಬಿ.ಇಡಿ. ಕಾಲೇಜುಗಳಲ್ಲಿ ಬೋಧಕರಾಗುವ ಅವಕಾಶವಿದೆ. 2) ಎಂ.ಎ. ಅರ್ಥಶಾಸ್ತ್ರ: ಎಂ.ಎ. ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಸಚಿವಾಲಯದಲ್ಲಿ ಸಾಂಖ್ಯಿಕ ಅಧಿಕಾರಿಗಳಾಗಿ, ಬೋಧಕರಾಗಿ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಆರ್ಥಿಕ ಸಂಶೋಧನಾ ಸಂಸ್ಥೆಗಳಲ್ಲಿ ಸಂಶೋಧಕರಾಗಿ ನೇಮಕಗೊಳ್ಳುವ ಅವಕಾಶವಿದೆ.

      ಆದುದರಿಂದ ಸ್ನಾತಕ ಪದವಿ ಪಡೆದ ವಿದ್ಯಾರ್ಥಿಗಳು ಮೇಲ್ಕಾಣಿಸಿದ ಕೋರ್ಸ್‍ಗಳಿಗೆ ದಾಖಲಾಗುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕೆಂದು ವಿಶ್ವವಿದ್ಯಾನಿಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಯನ್ನು ವಿಶ್ವವಿದ್ಯಾನಿಲಯದ ವೆಬ್‍ಸೈಟ್  www.tumkuruniversity.ac.in ನಿಂದ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 20.10.2020ರವರೆಗೆ ವಿಸ್ತರಿಸಲಾಗಿದೆ.

(Visited 23 times, 1 visits today)