ಜನ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವಲ್ಲಿ ಅಧಿಕಾರಿಗಳು ಮೀನಾಮೇಷ

ಪಾವಗಡ:

      ದಾಖಲೆ ರಹಿತ ಜನ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವಂತೆ ಸರ್ಕಾರ ಕಾನೂನು ಮಾಡಿದ್ದರೂ ಅದನ್ನು ಅನುಷ್ಠಾನ ಗೊಳಿಸುವಲ್ಲಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಶಂಕರಮೂರ್ತಿ ನಾಯಕ ಅರೋಪಿಸಿದ್ದಾರೆ.

      ಅವರು ಪಾವಗಡ ನಿರೀಕ್ಷಣಾ ಮಂದಿರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ, ಇದೊಂದು ಐತಿಹಾಸಿಕ ಕಾಯ್ದೆ. ರಾಜ್ಯದಲ್ಲಿರುವ 68 ಸಾವಿರ ಜನವಸತಿ ಪ್ರದೇಶಗಳನ್ನು ಈ ಕಾಯ್ದೆ ಕೆಳಗೆ ತರುವ ಮೂಲಕ ಅವರ ಪ್ರದೇಶಗಳಿಗೆ ತನ್ನದೇ ಆದ ಅಸ್ತಿತ್ವ ನೀಡುವ ಮೂಲಕ ಅವರ ಅಭಿವೃದ್ಧಿಗೆ ಮೂಲಭೂತ ಸೌಲಭ್ಯಗ¼ನ್ನು ಹೊಂದಲು ಅನುವು ಮಾಡಿಕೊಡಬೇಕು ಎಂಬುದೇ ಈ ಕಾಯ್ದೆಯ ಉದ್ದೇಶವಾಗಿದೆ. ಇದುವರೆಗೂ ಈ ಜನವಸತಿ ಪ್ರದೇಶಗಳ ಹೆಸರಲ್ಲಿ ಯಾವುದೇ ಸರ್ಕಾರಿ ಸೌಲಭ್ಯಗಳು ಮುಂಜೂರಾಗುತ್ತಿಲ್ಲ. ಬೇರೆ ಪ್ರದೇಶಕ್ಕೆ ಮಂಜೂರು ಆಗಿ ಅವರು ಕೊಟ್ಟದನ್ನು ಪಡೆಯಬೇಕಿದೆ. ಕಂದಾಯ ಗ್ರಾಮದ ಮಾನ್ಯತೆ ಸಿಕ್ಕಲ್ಲಿ ಸರ್ಕಾರ ನೇರವಾಗಿ ಇವರದೇ ಪ್ರದೇಶಕ್ಕೆ ಸೌಲಭ್ಯ ನೀಡಬಹುದಾಗಿದೆ ಎಂಬುದಾಗಿದೆ ಜಿಲ್ಲಾಧಿಕಾರಿಗಳು ಈ ಕಾಯ್ದೆಯನ್ನು ಚೆನ್ನಾಗಿ ಅರಿತು ಎಲ್ಲಾ ಅಧಿಕಾರಿಗಳಿಗೆ ಅರಿವು ಮೂಡಿಸುವ ಮೂಲಕ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

      ರಾಜ್ಯದಲ್ಲಿನ 30 ಜಿಲ್ಲೆಗಳಲ್ಲಿ ಇದುವರೆಗೂ 2742 ದಾಖಲೆರಹಿತ ಜನವಸತಿ ಕೇಂದ್ರಗಳನ್ನು ಜಿಲ್ಲಾಧಿಕಾರಿಗಳು ಗುರುತಿಸಿದ್ದು, ಇದುವರೆಗೆ ಕೇವಲ 67 ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲಾಗಿದೆ. ಈ ಕಾಯ್ದೆ ಅನುಷ್ಠಾನದಲ್ಲಿ ಸರ್ಕಾರಕ್ಕೆ ಇರುವ ವೇಗ ಮತ್ತು ಅಸಕ್ತಿಯನ್ನು ಈ ಅಂಕಿ-ಅಂಶಗಳೇ ಸೂಚಿಸುತ್ತಿವೆ. ಎಂದು ತಿಳಿಸಿದ್ದಾರೆ.

 

(Visited 16 times, 1 visits today)

Related posts

Leave a Comment