ದೆಹಲಿಯ ಗಣರಾಜ್ಯೋತ್ಸವ : ಎನ್.ಸಿ.ಸಿ.ಕೆಡೆಟ್ ಆಗಿ ತುಮಕೂರಿನ ಕು.ಕವನ

 ತುಮಕೂರು :

      ದೆಹಲಿಯಲ್ಲಿ ಕಳೆದ ಜನವರಿ 26ರಂದು ನಡೆದ ಗಣರಾಜ್ಯೋತ್ಸವ ದಿನದಂದು ಎನ್‍ಸಿಸಿ ಶಿಬಿರವನ್ನು ಪ್ರತಿನಿಧಿಸಿ ಭಾಗವಹಿಸುವ ಮೂಲಕ ಕು.ಕವನ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.      

       ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ|| ಕೇಶವ್ ರಾಜ್ ಹಾಗೂ ಡಾ|| ಆಶಾ ದಂಪತಿಗಳ ಪುತ್ರಿಯಾಗಿರುವ ಕವನ ಅವರು ನಗರದ ಬಿಷಪ್ ಸಾರ್ಜೆಂಟ್ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಎನ್‍ಸಿಸಿ ಕೆಡೆಟ್‍ಗೆ ಆಯ್ಕೆಯಾದ ಜಿಲ್ಲೆಯ ಏಕೈಕ ಬಾಲಕಿಯಾಗಿರುವ ಇವರು ಎನ್‍ಸಿಸಿ ಕೆಡೆಟ್‍ನಲ್ಲಿ ಭಾಗವಹಿಸುವ ಕನಸನ್ನು ಕಂಡಿದ್ದರು. ರಾಷ್ಟ್ರ ಮಟ್ಟದ ಈ ಎನ್‍ಸಿಸಿ ಶಿಬಿರಕ್ಕೆ ಕರ್ನಾಟಕ-ಗೋವಾ ವಿಭಾಗದಿಂದ ಒಟ್ಟು 106 ಎನ್‍ಸಿಸಿ ಕೆಡೆಟ್‍ಗಳು ಪ್ರತಿಧಿಸಲು ಆಯ್ಕೆಯಾಗಿ ಪ್ರಧಾನಮಂತ್ರಿ ಬ್ಯಾನರ್ ಹಾಗೂ ಟ್ರೋಫಿ ಪ್ರಶಸ್ತಿ ಪಡೆದಿರುತ್ತಾರೆ. ಕರ್ನಾಟಕವು 15 ವರ್ಷಗಳ ನಂತರ ಈ ಪ್ರಶಸ್ತಿಯನ್ನು ಪಡೆದಿರುವುದು ಸಂತಸದ ವಿಚಾರವಾಗಿದೆ.

(Visited 27 times, 1 visits today)

Related posts

Leave a Comment