ತುಮಕೂರು:

     ಸ್ಲಂ ನಿವಾಸಿಗಳ ಕುಂದು ಕೊರತೆ ಸಭೆಯನ್ನು ಅಪರ ಜಿಲ್ಲಾಧಿಕಾರಿಗಳಾದ ಚೆನ್ನಬಸಪ್ಪನವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆಸಲಾಯಿತು ಕಳೆದ ಕೆಲ ದಿನಗಳ ಹಿಂದೆ ನೂತನ ಜಿಲ್ಲಾಧಿಕಾರಿಗಳಿಗೆ ಸ್ಲಂ ನಿವಾಸಿಗಳ ಕುಂದುಕೊರತೆ ಸಭೆ ಕರೆಯಲು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಮನವಿ ನೀಡಲಾಗಿತ್ತು ಅದರಂತೆ 5-03-2021ರ ಸಭೆ ಕರೆಯಲಾಗಿತ್ತು.

       ಸಭೆಯ ಅಧ್ಯಕ್ಷತೆ ವಹಿಸಿದ ಅಪರ ಜಿಲ್ಲಾಧಿಕಾರಿಗಳು ಇಂದು ತುಮಕೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಪಾಲ್ಗೊಂಡಿದ್ದು ಪೂರ್ವ ನಿಗಧಿತವಾಗಿರುವ ಈ ಸಭೆಯನ್ನು ನಡೆಸಲು ಜಿಲ್ಲಾಡಳಿತ ತ್ರಿಪಕ್ಷೀಯ ಸಭೆ ಕರೆದಿದ್ದು ವ್ಯಕ್ತಿಗತ ಸಮಸ್ಯೆಗಳಿಗಿಂತ ಸಮುದಾಯ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸ್ಲಂ ನಿವಾಸಿಗಳ ಕುಂದುಕೊರತೆ ಸಭೆ ಕರೆಯಲಾಗಿದೆ.

      ಅದರಂತೆ ಈಗಾಗಲೇ ತುಮಕೂರು ಕೊಳಗೇರಿ ಸಮಿತಿಯಿಂದ 15 ಅಂಶಗಳ ಸಮಸ್ಯೆಗಳನ್ನು ನೀಡಿದ್ದು ಈ ಸಭೆಯಲ್ಲಿ ಚರ್ಚಿಸಿ ಸಂಬಂಧಪಟ್ಟ ಇಲಾಖೆಗಳು ಸಮನ್ವಯತೆಯಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಕಾಲಮಿತಿಯನ್ನು ನಿಗಧಿಗೊಳಿಸಿ ಅನುಪಾಲನ ಸಭೆಗಳನ್ನು ಹಂತಹಂತವಾಗಿ ಮಾಡುವ ಮೂಲಕ ಸಮಸ್ಯೆಗಳನ್ನು ಪರಿಹರಿಸಲಾಗುವುದು ಅದರಂತೆ ಈಗಾಗಲೇ ತುಮಕೂರು ಉಪವಿಭಾಗಾಧಿಕಾರಿಗಳು ವಸತಿ ರಹಿತರಿಗೆ ವಸತಿ ಕಲ್ಪಿಸಲು 6-26 ಎಕರೆ ಭೂಮಿಯನ್ನು ತುಮಕೂರು ಮಹಾನಗರ ಪಾಲಿಕೆ ಹಸ್ತಾಂತರಿಸಿದ್ದು ವಿವಿಧ ಕೊಳಚೆ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ 389 ಸ್ಲಂ ನಿವಾಸಿಗಳಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ನಿವೇಶನ ಗುರುತಿಸಲು ಅಗತ್ಯವಿರುವ ಪ್ರಸ್ತಾವನೆ ಸಲ್ಲಿಸಲು ಸ್ಲಂ ಬೋರ್ಡ್ ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ನಿವೇಶನ ರಹಿತರಿಗೆ ಕಂದಾಯ ಕಾಯಿದೆ 71ರಡಿಯಲ್ಲಿ ಸರ್ಕಾರಿ ಭೂಮಿ ಗುರುತಿಸಿಕೊಡಲು ಉಪವಿಭಾಗಾಧಿಕಾರಿಗಳಿಗೆ ಸೂಚಿಸಲಾಗುವುದು 
ಹಂಚಿಕೆ ಮಧುಗಿರಿ ಮಂಡರ ಕಾಲೋನಿಯ 41 ಕುಟುಂಬಗಳಿಗೆ ವಸತಿ ನಿರ್ಮಿಸಲು ಸರ್ಕಾರಿ ಭೂಮಿ ನೀಡಲು ತಹಶೀಲ್ದಾರ್‍ಗೆ ಸೂಚಿಸಲಾಯಿತು. ಮಂಗಳಮುಖಿ ಸಮುದಾಯಕ್ಕೆ ನಿವೇಶನ, ಇಸ್ಮಾಯಿಲ್ ನಗರ ಹಂದಿ ಜೋಗಿಗಳಿಗೆ ಅಣ್ಣೇನಹಳ್ಳಿಯಲ್ಲಿ ಮಂಜೂರಾಗಿರುವ ಭೂಮಿ ಒಂಟಿ ಮನೆಗಳ ನಿರ್ಮಾಣ ಮತ್ತು ಸಿ,ಎ ಜಾಗದಲ್ಲಿ ಪುನರ್‍ವಸತಿ ಅಮಲಾಪುರದಲ್ಲಿರುವ ಹಕ್ಕಿಪಿಕ್ಕಿಗಳಿಗೆ ಒಂಟಿ ಮನೆಗಳ ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು. ಮುಂದಿನ ದಿನಗಳಲ್ಲಿ ಕೊಳಚೆ ಪ್ರದೇಶ ನಿವಾಸಿಗಳ ಸಮಸ್ಯೆಗಳಿಗೆ ಜಿಲ್ಲಾಡಳಿತದಿಂದ ಪರಿಹಾರ ನೀಡಲು ಜನಸಂಪರ್ಕ ಸಭೆಗಳನ್ನು ಸ್ಲಂ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದೆಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.

      ಸಭೆಯಲ್ಲಿ ಸ್ಲಂ ಜನರ ಕುಂದು ಕೊರತೆ ಬಗ್ಗೆ ತುಮಕೂರು ಕೊಳಗೇರಿ ಸಮಿತಿಯ ಅಧ್ಯಕ್ಷರಾದ ಎ,ನರಸಿಂಹಮೂರ್ತಿ ಜಿಲ್ಲಾಡಳಿತದ ಗಮನ ಸೆಳೆದರು, ನಗರಾಭಿವೃದ್ಧಿ ಕೋಶದ ನಿರ್ಧೇಶಕರಾದ ಶುಭ ಸ್ವಾಗತಿಸಿದರು ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ರೇಣುಕಾ, ಸಮಾಜ ಕಲ್ಯಾಣ ಇಲಾಖೆ ಜಂಟೀ ನಿರ್ಧೇಶಕರಾದ ಟಿ,ಎಲ್,ಎಸ್ ಪ್ರೇಮ. ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಯೋಗಾನಂದ್, ಕರ್ನಾಟಕ ಕೊಳಗೇರಿ ಮಂಡಳಿ ಅಭಿಯಂತರರಾದ ಹನುಮಂತರೆಡ್ಡಿ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಭಿಯಂತರರಾದ ಚಂದ್ರಶೇಖರ್, ಬೆಸ್ಕಾಂ ಕಾರ್ಯಪಾಲಕ ಅಭಿಯಂತರರಾದ ಜಗದೀಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ,ಶಿಕ್ಷಣ ಇಲಾಖೆ, ಪೋಲಿಸ್ ಇಲಾಖೆ ಅಧಿಕಾರಿಗಳು ಹಾಗೂ ತುಮಕೂರು ಕೊಳಗೇರಿ ಸಮಿತಿಯ ಪದಾಧಿಕಾರಿಗಳಾದ ದೀಪಿಕಾ,ಅರುಣ್,ತಿರುಮಲಯ್ಯ, ಜಾಬೀರ್,ಚಕ್ರಪಾಣಿ.ಶಂಕರಯ್ಯ, ಗಂಗಮ್ಮ, ಮಂಗಳಮ್ಮ,ಶಾಬುದ್ದೀನ್, ಧನಂಜಯ್ಯ, ಮಾದವನ್,ಕೇಶವ, ಮುನ್ನಾ, ಕಾಶಿರಾಜು ಸಭೆಯಲ್ಲಿ ಪಾಲ್ಗೊಂಡಿದ್ದರು. ಮತ್ತು ಸರ್ಕಾರಿ ಆದೇಶ ಸಂಖ್ಯೆ :ನಅಇ 73ಜಿಎಲ್2020 ದಿನಾಂಕ:23-02-2021ರ ಸುತ್ತೋಲೆ ಅನ್ವಯ ಇನ್ನು 2 ತಿಂಗಳೊಳಗಾಗಿ ಸ್ಥಳೀಯ ಸಂಸ್ಥೆಗಳ ಅಧೀನದಲ್ಲಿರುವ ಜಿಲ್ಲೆಯ ಎಲ್ಲಾ ಕೊಳಚೆಪ್ರದೇಶ ನಿವಾಸಿಗಳಿಗೆ ಟೊಟೆಲ್ ಸೆಷನ್ಸ್ ಸರ್ವೇ ನಡೆಸಿ ಹಕ್ಕುಪತ್ರ ನೀಡಲು ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಇದರ ಸಮನ್ವಯತೆಯನ್ನು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ಧೇಶಕರು ಕೈಗೊಳ್ಳುತ್ತಾರೆ. ದಿಬ್ಬೂರು 1200 ವಸತಿ ಸಮುಚ್ಛಯಗಳಿಗೆ ಹಂಚಿಕೆ ಪತ್ರ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಮಹಾನಗರ ಪಾಲಿಕೆ, ಸ್ಲಂ ಬೋರ್ಡ್, ನೀರು ಸರಬರಾಜು ಒಳಚರಂಡಿ ಮಂಡಳಿ, ಬೆಸ್ಕಾಂ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ ಒಳಗೊಂಡಂತೆ ಮಹಾನಗರ ಪಾಲಿಕೆ ಆಯುಕ್ತರ ಸಮ್ಮುಖದಲ್ಲಿ ಜನಸಂಪರ್ಕ ಸಭೆ ಆಯೋಜಿಸಲು ಸೂಚಿಸಿದರು. ಹಾಗೂ ಭಾರತಿ ನಗರ ಭಾಗ-2, ಕ್ಯಾತ್ಸಂದ್ರ ಎಳ್ಳರಬಂಡೆ ಕೊಳಚೆಪ್ರದೇಶಗಳ ಘೋಷಣೆಗೆ ಪ್ರಸ್ತಾವನೆ ಸೇರಿದಂತೆ ಶಿರಾ ಶಿಳ್ಳೇಕ್ಯಾತ ಸಮುದಾಯಕ್ಕೆ ಮನೆ

(Visited 16 times, 1 visits today)