BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಬುದ್ಧ, ಬಸವ, ಅಂಬೇಡ್ಕರ್ ಹಾದಿಯಲ್ಲಿ ಸಂಘಟನೆ ಸಾಗಲಿ
  • ಮಹಿಳೆ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ: ಆರೋಪಿ ಬಂಧನ
  • ಡೆಂಗ್ಯೂ ರೋಗ ನಿಯಂತ್ರಣಕ್ಕೆ ಸಹಕರಿಸಲು ಡಿಹೆಚ್‌ಓ ಮನವಿ
  • ಸಂಪೂರ್ಣ ದುರಸ್ತಿಗೆ ಇನ್ನೂ ಏಕೀ ಉದಾಸೀನತೆ?
  • ಸಿಲ್ಕು, ಮಿಲ್ಕು ಮಾತ್ರವೇ ಜಿಲ್ಲೆಯ ರೈತರ ಕೈಹಿಡಿಯುವ ಬೆಳೆ: ಉಪ ಮುಖ್ಯಮಂತ್ರಿ
  • ಸರ್ವೆ ನೆಪದಲ್ಲಿ ಬಂದು ದಲಿತರ ಜಮೀನಿಗೆ ಅತಿಕ್ರಮ ಪ್ರವೇಶ
  • ನ್ಯಾಯಾಲಯ ಕಲಾಪದಿಂದ ಹೊರಗುಳಿದ ವಕೀಲರು
  • ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಅಕ್ರಮ ಬೀಜ ದಾಸ್ತಾನು ಜಪ್ತಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಪಾರದರ್ಶಕತೆ ಕಾಯ್ದೆಕೊಳ್ಳಲು ನಿಗಮದ ಎಲ್ಲಾ ಕಚೇರಿಗೆ ಸಿಸಿಟಿವಿ ಅಳವಡಿಕೆ
Trending

ಪಾರದರ್ಶಕತೆ ಕಾಯ್ದೆಕೊಳ್ಳಲು ನಿಗಮದ ಎಲ್ಲಾ ಕಚೇರಿಗೆ ಸಿಸಿಟಿವಿ ಅಳವಡಿಕೆ

By News Desk BenkiyabaleUpdated:January 04, 2021 7:02 pm

ತುಮಕೂರು:

     ದೇವರಾಜ ಅರಸು ಅಭಿವೃದ್ದಿ ನಿಗಮದ ಫಲಾನುಭವಿಗಳ ಆಯ್ಕೆ ಸಂಬಂಧ ಮತ್ತಷ್ಟು ಪಾರದರ್ಶಕತೆ ಕಾಯ್ದೆಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಕಚೇರಿಯನ್ನು ಒಳಗೊಂಡಂತೆ ಸಿಸಿಟಿವಿ ಅಳವಡಿಕೆ ಹಾಗೂ ನಿಗಾವಣೆ ಸಮಿತಿಯನ್ನು ನೇಮಿಸುವ ಚಿಂತನೆ ಇದೆ ಎಂದು ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ರಘು ಕೌಟಿಲ್ಯ ತಿಳಿಸಿದ್ದಾರೆ.

     ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಹೋರಾಟ ನಡೆಸಿದ ಪ್ರಮುಖರಲ್ಲಿ ಅರಸು ಒಬ್ಬರು,ಅವರ ಹೆಸರಿನಲ್ಲಿರುವ ನಿಗಮವನ್ನು ಮತ್ತಷ್ಟು ಜನಪರಗೊಳಿಸುವ, ವಿಸ್ತರಿಸುವ,ಶಕ್ತಿ ತುಂಬುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ ಎಂದರು.
ಕೋರೋನಾ ಮಹಾಮಾರಿಯಿಂದಾಗಿ ಕಳೆದ ಸಾಲಿನಲ್ಲಿ ಅಂದರೆ 2019-20ಕ್ಕೆ ಹೊಲಿಕೆ ಮಾಡಿದರೆ 2020-21ರಲ್ಲಿ ನಿಗಮಕ್ಕೆ ನೀಡಿದ್ದ 80 ಕೋಟಿ ರೂ ಅನುದಾನದಲ್ಲಿ 206 ಜಾತಿಗಳಿಗೆ ಸೇರಿದ ಅರ್ಹ ಫಲಾನುಭವಿಗಳಿಗೆ ಅನುಕೂಲ ಮಾಡ ಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಆಗಿರುವ ವೆತ್ಯಾಸವನ್ನು 2021-22ನೇ ಸಾಲಿನ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಮೀಸಲಿರಿಸಿ,ಮತ್ತಷ್ಟು ಜನರನ್ನು ತಲುಪಲು ಪ್ರಯತ್ನಿಸಲಾಗುವುದು ಎಂದು ರಘು ಕೌಟಿಲ್ಯ ಭರವಸೆ ನೀಡಿದರು.

     ದೇವರಾಜ ಅರಸು ಅಭಿವೃದ್ದಿ ನಿಗಮದ ಫಲಾನುಭವಿಗಳ ಆಯ್ಕೆ ಸಂಬಂಧ ಕೇಂದ್ರ ಮತ್ತು ರಾಜ್ಯ ಸರಕಾರದ ಕೌಶಲ್ಯ ಕೇಂದ್ರಗಳಲ್ಲಿ ತರಬೇತಿ ಪಡೆದವರಿಗೆ ಅದ್ಯತೆ ನೀಡುವ ಚಿಂತನೆ ಇದೆ. ಇದಕ್ಕಾಗಿ ಪ್ರತಿ ತಾಲೂಕಿನಲ್ಲಿ 50 ಜನ ಹಿಂದುಳಿದ ವರ್ಗದ ಯುವಜನರಿಗೆ ಸೇರಿದಂತೆ ವರ್ಷದಲ್ಲಿ 1.25 ಲಕ್ಷ ಜನರಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ.ಇಲ್ಲಿ ತರಬೇತಿ ಪಡೆದಂತಂತಹ ಯುವಜನರಿಗೆ ಸರಕಾರಿ ಸಾಲ ಸೌಲಭ್ಯಗಳಿಗೆ ಫಲಾನುಭವಿಗಳ ಆಯ್ಕೆಗೆ ಅದ್ಯತೆ ನೀಡಲಾಗುವುದು ಎಂದರು.

      ಪ್ರಸ್ತುತ ಕೋವಿಡ್-19 ನಿಂದಾಗಿ ಹಳ್ಳಿಗಾಡಿನಿಂದ ಬೆಂಗಳೂರಿಗೆ ವಲಸೆ ಹೋಗಿದ್ದ ಸಾವಿರಾರು ಯುವಜನರು ಹಳ್ಳಿಗಾಡಿಗೆ ಮರಳಿದ್ದಾರೆ. ಅವರಿಗೆ ನಮ್ಮ ಕೌಶಲ್ಯ ತರಬೇತಿ ಕೇಂದ್ರಗಳ ಮೂಲಕ ತರಬೇತಿ ನೀಡಿ, ಸ್ಥಳೀಯ ಕೃಷಿ ಉತ್ಪನ್ನಗಳನ್ನು ಬಳಸಿಕೊಂಡು ಕೃಷಿ ಆಧಾರಿತ ಕೈಗಾರಿಕೆಗಳನ್ನು ನಡೆಸಲು,ಅದರಲ್ಲಿಯೂ ಕುಲಕಸುಬಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಒತ್ತು ನೀಡಲು ತೀರ್ಮಾನಿಸಲಾಗಿದೆ, ಕಮ್ಮಾರ, ಚಮ್ಮಾರ, ಕುಂಬಾರ,ಬಡಗಿ,ಕ್ಷೌರಿಕರ ಕುಲ ಕಸುಬುಗಳಿಗೆ ಅಧುನಿಕ ಸ್ಪರ್ಷ ನೀಡಿ, ಅವುಗಳನ್ನು ಉತ್ತೇಜಿಸಲು ತೀರ್ಮಾನಿಸಲಾಗಿದೆ ಎಂದು ರಘು ಕೌಟಿಲ್ಯ ನುಡಿದರು.
ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ಶಾಸಕರಾದ ಜೋತಿಗಣೇಶ್,ತೆಂಗು ನಾರು ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಬಿ.ಕೆ.ಮಂಜುನಾಥ್,ದೇವರಾಜು ಅರಸು ಅಭಿವೃದ್ದಿ ನಿಗಮದ ವ್ಯವಸ್ಥಾಪಕ ಭಕ್ತಕುಚೇಲ ಮತ್ತಿತರರು ಉಪಸ್ಥಿತರಿದ್ದರು.

      ಸುದ್ದಿಗೋಷ್ಠಿಗೂ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಹಿರಿಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ತದನಂತರ ದೇವರಾಜ ಅರಸು ಅಭಿವೃದ್ದಿ ನಿಗಮದ ಕಚೇರಿಗೆ ಭೇಟಿ ನೀಡಿ,ಪರಿಶೀಲನೆ ನಡೆಸಿದರು.ಪ್ರವಾಸಿ ಮಂದಿರದಲ್ಲಿ ಹಿಂದುಳಿದ ವರ್ಗಗಳ ಮುಖಂಡರ ಸಭೆ ನಡೆಸಿದರು.ಸಭೆಯಲ್ಲಿ ಪಾಲಿಕೆ ಸದಸ್ಯರಾದ ಶ್ರೀಮತಿ ಗಿರಿಜಾ ಧನಿಯಕುಮಾರ್, ನರಸಿಂಹರಾಜು,ಮುಖಂಡರಾದ ರುದ್ರೇಶ್,ವೇದಮೂರ್ತಿ, ಜಗಧೀಶ್ ಇದ್ದರು.

(Visited 11 times, 1 visits today)
Previous Articleಚಿಕ್ಕನಾಯಕನಹಳ್ಳಿ : ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಮಾಣ ಪ್ರಕಟ
Next Article ಅಕ್ಷರ ದಾಸೋಹ ಬಿಸಿಯೂಟ ನೌಕರರಿಗೆ ಕನಿಷ್ಠ ಕೂಲಿ ನಿಗಧಿಪಡಿಸಬೇಕು
News Desk Benkiyabale

Related Posts

ಬುದ್ಧ, ಬಸವ, ಅಂಬೇಡ್ಕರ್ ಹಾದಿಯಲ್ಲಿ ಸಂಘಟನೆ ಸಾಗಲಿ

July 08, 2026 6:07 pm news

ಮಹಿಳೆ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ: ಆರೋಪಿ ಬಂಧನ

July 08, 2026 6:05 pm news

ಡೆಂಗ್ಯೂ ರೋಗ ನಿಯಂತ್ರಣಕ್ಕೆ ಸಹಕರಿಸಲು ಡಿಹೆಚ್‌ಓ ಮನವಿ

July 08, 2026 6:04 pm news
ತಾಜಾ ಸುದ್ಧಿಗಳು

ಬುದ್ಧ, ಬಸವ, ಅಂಬೇಡ್ಕರ್ ಹಾದಿಯಲ್ಲಿ ಸಂಘಟನೆ ಸಾಗಲಿ

July 08, 2026 6:07 pm

ಮಹಿಳೆ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ: ಆರೋಪಿ ಬಂಧನ

July 08, 2026 6:05 pm

ಡೆಂಗ್ಯೂ ರೋಗ ನಿಯಂತ್ರಣಕ್ಕೆ ಸಹಕರಿಸಲು ಡಿಹೆಚ್‌ಓ ಮನವಿ

July 08, 2026 6:04 pm

ಸಂಪೂರ್ಣ ದುರಸ್ತಿಗೆ ಇನ್ನೂ ಏಕೀ ಉದಾಸೀನತೆ?

July 08, 2026 5:59 pm

ಸಿಲ್ಕು, ಮಿಲ್ಕು ಮಾತ್ರವೇ ಜಿಲ್ಲೆಯ ರೈತರ ಕೈಹಿಡಿಯುವ ಬೆಳೆ: ಉಪ ಮುಖ್ಯಮಂತ್ರಿ

July 08, 2026 5:58 pm

ಸರ್ವೆ ನೆಪದಲ್ಲಿ ಬಂದು ದಲಿತರ ಜಮೀನಿಗೆ ಅತಿಕ್ರಮ ಪ್ರವೇಶ

July 07, 2026 5:18 pm
Our Youtube Channel
Our Picks

ಬುದ್ಧ, ಬಸವ, ಅಂಬೇಡ್ಕರ್ ಹಾದಿಯಲ್ಲಿ ಸಂಘಟನೆ ಸಾಗಲಿ

July 08, 2026 6:07 pm

ಮಹಿಳೆ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ: ಆರೋಪಿ ಬಂಧನ

July 08, 2026 6:05 pm

ಡೆಂಗ್ಯೂ ರೋಗ ನಿಯಂತ್ರಣಕ್ಕೆ ಸಹಕರಿಸಲು ಡಿಹೆಚ್‌ಓ ಮನವಿ

July 08, 2026 6:04 pm

ಸಂಪೂರ್ಣ ದುರಸ್ತಿಗೆ ಇನ್ನೂ ಏಕೀ ಉದಾಸೀನತೆ?

July 08, 2026 5:59 pm

ಸಿಲ್ಕು, ಮಿಲ್ಕು ಮಾತ್ರವೇ ಜಿಲ್ಲೆಯ ರೈತರ ಕೈಹಿಡಿಯುವ ಬೆಳೆ: ಉಪ ಮುಖ್ಯಮಂತ್ರಿ

July 08, 2026 5:58 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಬುದ್ಧ, ಬಸವ, ಅಂಬೇಡ್ಕರ್ ಹಾದಿಯಲ್ಲಿ ಸಂಘಟನೆ ಸಾಗಲಿ

By News Desk BenkiyabaleJuly 08, 2026 6:07 pm

ಶಿರಾ: ರಾಜ್ಯದ ೩,೮೦೦ಕ್ಕೂ ಅಧಿಕ ಸ್ಲಂಗಳಲ್ಲಿ ಸ್ಲಂ ಜನರ ಸಂಘಟನೆಯು ವಿಸ್ತಾರಗೊಳ್ಳಬೇಕು. ಈ ಸಂಘಟನೆಯು ಬುದ್ಧ, ಬಸವ, ಅಂಬೇಡ್ಕರ್ ಅವರ…

ಮಹಿಳೆ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ: ಆರೋಪಿ ಬಂಧನ

July 08, 2026 6:05 pm

ಡೆಂಗ್ಯೂ ರೋಗ ನಿಯಂತ್ರಣಕ್ಕೆ ಸಹಕರಿಸಲು ಡಿಹೆಚ್‌ಓ ಮನವಿ

July 08, 2026 6:04 pm

ಸಂಪೂರ್ಣ ದುರಸ್ತಿಗೆ ಇನ್ನೂ ಏಕೀ ಉದಾಸೀನತೆ?

July 08, 2026 5:59 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.