BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ
  • ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ
  • ತುಮಕೂರಿನಲ್ಲಿ ಮಣ್ಣಿನ ಗಣೇಶನಿಗೆ ಮಕ್ಕಳ ಕೈಚಳಕ
  • ಮಠ ಮಾನ್ಯಗಳ ನೆರವಿನ ಫಲವಾಗಿ ವೀರಶೈವ, ಲಿಂಗಾಯಿತ ಸಮುದಾಯ ಶೈಕ್ಷಣಿಕವಾಗಿ ಮುಂದುವರೆದಿದೆ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯ
  • ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಉದ್ಯೋಗ ಭದ್ರತೆ : ಪಿಡಿಒ ಮುದ್ದಲಿಂಗಯ್ಯ
  • ಇತಿಹಾಸ ಮರುನಿರ್ಮಾಣದಲ್ಲಿ ಶಿಲ್ಪಿಗಳ ಪಾತ್ರ ಮಹತ್ವದ್ದು
  • ಶಿಕ್ಷಕ ರಾಷ್ಟç ನಿರ್ಮಾಣದ ಶಿಲ್ಪಿ: ಡಾ.ಶಿವಕುಮಾರಯ್ಯ
  • ಸೂರಿಲ್ಲದವರಿಗೆ ೧೫ ಲಕ್ಷಕ್ಕೂ ಹೆಚ್ಚು ನಿವೇಶನ: ಡಾ: ಜಿ.ಪರಮೇಶ್ವರ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಸಂಪುಟದ ಉಪಸಮಿತಿ ತಂಡ
Trending

ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಸಂಪುಟದ ಉಪಸಮಿತಿ ತಂಡ

By News Desk BenkiyabaleUpdated:January 12, 2019 4:30 pm

ತುಮಕೂರು:

      ಕರ್ನಾಟಕ ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳಲ್ಲಿ ಕೈಗೊಂಡಿರುವ ಜನರಿಗೆ ಕುಡಿಯುವ ನೀರು, ಜಾನುವಾರುಗಳ ಮೇವು,ಜನರಿಗೆ ಕೆಲಸ ಸೇರಿದಂತೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಅಧ್ಯಯನ ನಡೆಸಲು ನೇಮಕಗೊಂಡಿರುವ ಕೃಷಿ   ಸಚಿವ ಶಿವಶಂಕರ್‍ರೆಡ್ಡಿ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿ ತುಮಕೂರು ಜಿಲ್ಲೆಗೆ ಭೇಟಿ ನೀಡಿ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ ನಡೆಸಿತು.

      ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕು ಬೈರನಹಳ್ಳಿ ಕ್ರಾಸ್‍ಗೆ ಆಗಮಿಸಿದ ತಂಡವನ್ನು ಕಾರ್ಮಿಕ ಸಚಿವ ವೆಂಕಟರವಣಪ್ಪ,ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್,ಸಂಸದ ಎಸ್.ಪಿ.ಮುದ್ದಹನುಮೇಗೌಡ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶಕುಮಾರ್, ಸಿಇಓ ಅನೀಸ್ ಕೆ.ಜಾಯ್ ಅವರುಗಳು ತಂಡವನ್ನು ಬರ ಮಾಡಿಕೊಂಡರು.

      ಬೈರನಹಳ್ಳಿ ಕ್ರಾಸ್‍ನಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗಖಾತರಿ ಯೋಜನೆಯಲ್ಲಿ ಕೈಗೊಂಡಿರುವ ಗೋಕಟ್ಟೆಯ ಹೂಳೆತ್ತುವ ಕಾಮಗಾರಿ ವೀಕ್ಷಿಸಿದ ಸಚಿವರು, ಯಂತ್ರೋಪಕರಣಗಳನ್ನು ಬಳಸದೆ,ಮಾನವ ಸಂಪನ್ಮೂಲ ಬಳಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

Displaying madhugiri tq chennasaagara mevu (1).JPG

      ನಂತರ ಮಧುಗಿರಿ ತಾಲೂಕಿನ ಚನ್ನಸಾಗರ ಗ್ರಾಮದ ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಜಾನುವಾರು ಕುಡಿಯುವ ನೀರಿನ ತೊಟ್ಟಿ ವೀಕ್ಷಿಸಿದ ಸಚಿವ ಶಿವಶಂಕರರೆಡ್ಡಿ,ಜಾನುವಾರುಗಳಿಗೆ ತೊಂದರೆಯಾಗದಂತೆ ತೊಟ್ಟಿಯ ಸುತ್ತಲು ಸಿಮೆಂಟ್ ಕಾಂಕ್ರಿಟ್ ನಿರ್ಮಿಸುವಂತೆ ಸೂಚನೆ ನೀಡಿದರು. ಟಿ.ವಿ.ತಿಮ್ಮಯ್ಯ ಅವರ ತೋಟದಲ್ಲಿ ಕೃಷಿ ಇಲಾಖೆ ವತಿಯಿಂದ ನೀಡಲಾಗಿರುವ ಮೇವಿನ ಕಿಟ್‍ನಲ್ಲಿ ಬೆಳೆದಿರುವ ಜೋಳದ ಹಸಿರು ಮೇವು ವೀಕ್ಷಿಸಿದರು.

     ಮಧುಗಿರಿ ತಾಲೂಕಿನ ಕೊಡುಗದಾಲ ಗ್ರಾ.ಪಂ.ವ್ಯಾಪ್ತಿಯ ರಂಗನಹಳ್ಳಿ ಗ್ರಾಮದ ಲಕ್ಷ್ಮಮ್ಮ ಕೋ ನಾಗರಾಜು ಅವರ 3 ಎಕರೆ ಭೂಮಿಯಲ್ಲಿ ರೇಷ್ಮೆ ಇಲಾಖೆಯ ಎಂ.ಎನ್.ಆರ್.ಇ.ಜಿ.ಎ ಯಲ್ಲಿ ಬೆಳೆದಿರುವ ಹಿಪ್ಪುನೇರಳೆ ಬೆಳೆ ವೀಕ್ಷಿಸಿದ ತಂಡ ಫಲಾನುಭವಿ ಲಕ್ಷ್ಮಮ್ಮ ಅವರೊಂದಿಗೆ ಚರ್ಚೆ ನಡೆಸಿದರು. ಮೊದಲಿಗೆ ಮೂರು ಬೆಳೆಯನ್ನು ತೆಗೆದಿದ್ದು, ಈಗ ಹುಳು ಸಾಕಾಣಿಕೆಯ ಶೆಡ್ ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ ಸೊಪ್ಪನ್ನು ಮಾರಾಟ ಮಾಡಲಾಗುತ್ತಿದೆ. ಸರಕಾರದ ಈ ಯೋಜನೆಯಿಂದ ಅನುಕೂಲವಾಗಿದೆ ಎಂದು ಲಕ್ಷ್ಮಮ್ಮ ಅವರ ಪುತ್ರ ಅರುಣಕುಮಾರ್ ಸಚಿವರಿಗೆ ವಿವರಿಸಿದರು. ನಂತರ ವೀರನಹಳ್ಳಿ ತಾಂಡದ ರಾಮಯ್ಯ ಅವರ ಜಮೀನಿನಲ್ಲಿ ಬೆಳೆದಿರುವ ಮೇವಿನ ಜೋಳದ ವೀಕ್ಷಿಸಿದರು.Displaying madhugiri tq veeramanahallii jola veekshane (7).JPG

      ಮಧುಗಿರಿ ಪಟ್ಟಣಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದ ತಂಡವು ನಂತರ ಕೊರಟಗೆರೆ ತಾಲೂಕಿನ ಗಟ್ಲಹಳ್ಲಿಯಲ್ಲಿ ನಿರ್ಮಿಸಿರುವ ಜಾನುವಾರು ಕುಡಿಯುವ ನೀರಿನ ತೊಟ್ಟಿ ವೀಕ್ಷಿಸಿದ ಅವರು ತುಮಕೂರು ತಾಲೂಕಿನ ಬೆಳದಾರ ಸಮೀಪದ ಮುದ್ದುರಾಮಯ್ಯಪಾಳ್ಯದ ಲಕ್ಷ್ಮಿಕಾಂತಯ್ಯ ಬಿನ್ ಹುಲಿರಾಮಯ್ಯ ಅವರ ಜಮೀನಿನಲ್ಲಿ ಬೆಳೆದಿದ್ದ ಹುರುಳಿ ಬೆಳೆ ವೀಕ್ಷಿಸಿ ಹೊಲದಲ್ಲಿದ್ದ ಹುರುಳಿ ಬೆಳೆಯ ಇಳುವರಿ ಪರಿಶೀಲನೆ ಮಾಡಿ ಮಳೆಯಿಲ್ಲದೆ ಬೀಜ ಬಲಿಯದ ಚೀಕಲು ಬಿದ್ದಿರುವುದನ್ನು ಖಾತರಿ ಮಾಡಿಕೊಂಡಿತ್ತು.Displaying madhugiri tq bairenahalli neerina thotti (2).JPG

      ಈ ವೇಳೆ ಮಾತನಾಡಿದ ಸಚಿವ ಶಿವಶಂಕರ್ ರೆಡ್ಡಿ,ರಾಜ್ಯದಲ್ಲಿ ಸುಮಾರು 12 ಜಿಲ್ಲೆಗಳಲ್ಲಿ ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆಯ ಕೊರತೆ ಉಂಟಾಗಿ ಶೇ70ರಷ್ಟು ಬೆಳೆ ನಷ್ಟವಾಗಿದೆ. ಅಲ್ಲದೆ ಜನರಿಗೆ ಕೆಲಸವಿಲ್ಲದಂತಾಗಿದೆ.ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಳಲ್ಲಿ ಜನರಿಗೆ ಮನೆ ಬಾಗಿಲಲ್ಲಿಯೇ ಉದ್ಯೋಗ ನೀಡುವ ಕೆಲಸ ಮಾಡಲಾಗುತ್ತಿದೆ. ಅಲ್ಲದೆ ಗೋ ಕಟ್ಟೆಗಳನ್ನು ಕಟ್ಟಿ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ನೀರಾವರಿ ಇರುವ ರೈತರಿಗೆ ವಿತರಿಸಿದ್ದ ಮೇವಿನ ಕಿಟ್‍ಗಳನ್ನು ಉಪಯೋಗಿಸಿ ಜೋಳ ಮತ್ತಿತರರ ಮೇವುಗಳನ್ನು ಬೆಳೆದಿದ್ದು, ಸದ್ಯ ಮೇವಿನ ಕೊರತೆ ಉಂಟಾಗಿಲ್ಲ ಈ ಬಗ್ಗೆ ಜಿಲ್ಲಾಡಳಿತ ಉತ್ತಮ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Displaying Koratagere tq gattihalli katte (2).JPG

       ಕಾರ್ಮಿಕ ಸಚಿವ ವೆಂಕಟರಮಣಪ್ಪ ಮಾತನಾಡಿ, ಕೃಷಿ ಕಾರ್ಮಿಕರು ಕೆಲಸವಿಲ್ಲದ ಗುಳೆ ಹೋಗುವುದನ್ನು ತಡೆಯಲು ಎಂ.ಎನ್.ಆರ್.ಇ.ಜಿ.ಎ ಯಲ್ಲಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.ಯಂತ್ರೊಪಕರಣಗಳಿಗೆ ಅವಕಾಶ ನೀಡದೆ, ಜನರನ್ನು ಬಳಸಿ ಕೆಲಸ ನಿರ್ವಹಿಸಲಾಗಿದೆ. ಮುಂದೆಯೂ ಹೆಚ್ಚಿನ ಜನರಿಗೆ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳ ಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸದರಾದ ಎಸ್.ಪಿಮುದ್ದೇಹನುಮೇಗೌಡ, ಸಣ್ಣ ಕೈಗಾರಿಕೆ ಸಚಿವ ಎಸ್. ಆರ್ ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ||ಕೆ.ರಾಕೇಶ್ ಕುಮಾರ್ ಜಿ.ಪಂ ಸಿ.ಇ.ಒ ಅನೀಸ್ ಕಣ್ಮಿಣಿ ಜಾಯ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಶೋಭಾರಾಣಿ, ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಸೇರಿಂದತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 89 times, 1 visits today)
Previous Articleಮೇವು ಖರೀದಿಗಿಂತ ಸ್ಥಳೀಯವಾಗಿ ಮೇವು ಬೆಳೆಸಲು ಕೃಷಿ ಸಚಿವರ ಸಲಹೆ
Next Article ಬಸ್ ನಿಲ್ದಾಣವನ್ನು ಆಧುನೀಕರಣಗೊಳಿಸಲು ಸಾರಿಗೆ ಸಚಿವ ಚಿಂತನೆ
News Desk Benkiyabale

Related Posts

ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ

September 08, 2026 5:26 pm news

ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ

September 07, 2026 5:14 pm news

ತುಮಕೂರಿನಲ್ಲಿ ಮಣ್ಣಿನ ಗಣೇಶನಿಗೆ ಮಕ್ಕಳ ಕೈಚಳಕ

September 07, 2026 4:56 pm news
ತಾಜಾ ಸುದ್ಧಿಗಳು
news

ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ

September 08, 2026 5:26 pm
news

ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ

September 07, 2026 5:14 pm
news

ತುಮಕೂರಿನಲ್ಲಿ ಮಣ್ಣಿನ ಗಣೇಶನಿಗೆ ಮಕ್ಕಳ ಕೈಚಳಕ

September 07, 2026 4:56 pm
news

ಮಠ ಮಾನ್ಯಗಳ ನೆರವಿನ ಫಲವಾಗಿ ವೀರಶೈವ, ಲಿಂಗಾಯಿತ ಸಮುದಾಯ ಶೈಕ್ಷಣಿಕವಾಗಿ ಮುಂದುವರೆದಿದೆ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯ

September 07, 2026 4:54 pm
news

ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಉದ್ಯೋಗ ಭದ್ರತೆ : ಪಿಡಿಒ ಮುದ್ದಲಿಂಗಯ್ಯ

September 07, 2026 4:52 pm
news

ಇತಿಹಾಸ ಮರುನಿರ್ಮಾಣದಲ್ಲಿ ಶಿಲ್ಪಿಗಳ ಪಾತ್ರ ಮಹತ್ವದ್ದು

September 07, 2026 4:51 pm
Our Youtube Channel
Our Picks

ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ

September 07, 2026 5:14 pm

ತುಮಕೂರಿನಲ್ಲಿ ಮಣ್ಣಿನ ಗಣೇಶನಿಗೆ ಮಕ್ಕಳ ಕೈಚಳಕ

September 07, 2026 4:56 pm

ಮಠ ಮಾನ್ಯಗಳ ನೆರವಿನ ಫಲವಾಗಿ ವೀರಶೈವ, ಲಿಂಗಾಯಿತ ಸಮುದಾಯ ಶೈಕ್ಷಣಿಕವಾಗಿ ಮುಂದುವರೆದಿದೆ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯ

September 07, 2026 4:54 pm

ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಉದ್ಯೋಗ ಭದ್ರತೆ : ಪಿಡಿಒ ಮುದ್ದಲಿಂಗಯ್ಯ

September 07, 2026 4:52 pm

ಇತಿಹಾಸ ಮರುನಿರ್ಮಾಣದಲ್ಲಿ ಶಿಲ್ಪಿಗಳ ಪಾತ್ರ ಮಹತ್ವದ್ದು

September 07, 2026 4:51 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ

By News Desk BenkiyabaleSeptember 08, 2026 5:26 pm

ಪಾವಗಡ ಮುಂಬರುವ ಶ್ರೀ ಗಣೇಶ ಚತುರ್ಥಿ ಸೇರಿದಂತೆ ಯಾವುದೇ ಸಾರ್ವಜನಿಕ ಹಬ್ಬ ಹರಿದಿನಗಳು ಹಾಗೂ ಸಮಾರಂಭಗಳಲ್ಲಿ ಧ್ವನಿವರ್ಧಕ ಡಿಜೆ ಬಳಕೆಯನ್ನು…

ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ

September 07, 2026 5:14 pm

ತುಮಕೂರಿನಲ್ಲಿ ಮಣ್ಣಿನ ಗಣೇಶನಿಗೆ ಮಕ್ಕಳ ಕೈಚಳಕ

September 07, 2026 4:56 pm

ಮಠ ಮಾನ್ಯಗಳ ನೆರವಿನ ಫಲವಾಗಿ ವೀರಶೈವ, ಲಿಂಗಾಯಿತ ಸಮುದಾಯ ಶೈಕ್ಷಣಿಕವಾಗಿ ಮುಂದುವರೆದಿದೆ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯ

September 07, 2026 4:54 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.