BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ವೈಭವದಿಂದ ಹತ್ತನೇ ಉತ್ಸವ ಆಚರಿಸಲು ತೀರ್ಮಾನ
  • ವ್ಯರ್ಥವಾಗಬೇಕಾದ ಕುಂಬಳಕಾಯಿಯನ್ನು ಪ್ರಸಾದವನ್ನಾಗಿಸಿದ ಪ್ರಸಾದ್
  • ಚನ್ನಮ್ಮ ಇಂದಿನ ಭಾರತದ ಮಹಿಳೆಯರಿಗೆ ಮಾದರಿ
  • ಬಟ್ಟೆ ಸುತ್ತಿಕೊಂಡ0ತೆ ಸುಕ್ಕುಗಟ್ಟಿದ ರಸ್ತೆ
  • ಕನ್ನಡ ನಾಡಿನ ಗತವೈಭವ ದರ್ಶನ
  • ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ ಸಂಭ್ರಮ
  • ನಗರದ ಮೆರುಗು ಹೆಚ್ಚಿಸಿದ ತುಮಕೂರು ದಸರಾ ಜಂಬು ಸವಾರಿ
  • ತುಮುಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ: ಆರೋಪ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಬಸವಯುಗ ವೈಭವ ಪುಸ್ತಕ ಒಂದು ಐತಿಹಾಸಿಕ ಕೃತಿ
ಇತರೆ ಸುದ್ಧಿಗಳು

ಬಸವಯುಗ ವೈಭವ ಪುಸ್ತಕ ಒಂದು ಐತಿಹಾಸಿಕ ಕೃತಿ

ಬಸವಯುಗ ವೈಭವ ಗ್ರಂಥ ಬಿಡುಗಡೆ ಮಾಡಿ ಡಾ.ಬಸವರಾಜ ಪಾಟೀಲ್ ಸೇಡಂ ಅಭಿಮತ
By News Desk BenkiyabaleUpdated:September 11, 2026 4:15 pm

ತುಮಕೂರು
ಒಂಭೈನೂರು ವರ್ಷಗಳ ಹಿಂದೆ ಕಲ್ಯಾಣದಲ್ಲಿ ನಡೆದ ಶರಣ ಚಳವಳಿಯನ್ನು ಅವಲೋಕಿಸಿದರೆ, ಇದು ವಾಸ್ತವವೋ, ಕಟ್ಟು ಕಥೆಯೋ ಎಂಬಂತೆ ಭಾಸವಾಗುತ್ತದೆ.ಅಂತಹ ವಚನ ಚಳವಳಿಯನ್ನು ಪುಸ್ತಕ ರೂಪದಲ್ಲಿ ನೀಡಿರುವ ಬಸವಯುಗ ವೈಭವ ಪುಸ್ತಕ ಒಂದು ಐತಿಹಾಸಿಕ ಕೃತಿ ಎಂದು ರಾಷ್ಟ್ರೀಯ ಚಿಂತಕರು,ಮಾಜಿ ಸಂಸತ್ ಸದಸ್ಯರಾದ ಡಾ.ಬಸವರಾಜ ಪಾಟೀಲ್ ಸೇಡಂ ಅಭಿಪ್ರಾಯಪಟ್ಟಿದ್ದಾರೆ.
ನಗರದ ಶ್ರೀಸಿದ್ದಗಂಗಾ ಮಠದಲ್ಲಿ ಲೇಖಕರಾದ ಶಾಮಲಿಂಗ ಜವಳಗಿ ಅವರು ಬರೆದಿರುವ ಬಸವಾದಿ ಶರಣರನ್ನು ಸ್ಮರಿಸುವ 12ನೇ ಶತಮಾನದಿಂದ 21ನೇ ಶತಮಾನದವರೆಗಿನ ಬಸವ ತತ್ವವನ್ನು ಪರಿಚಯಿಸುವ ಬಸವಯುಗ ವೈಭವ ಗ್ರಂಥ ಬಿಡುಗಡೆ ಮಾಡಿ ಮಾತನಾಡುತಿದ್ದ ಅವರು,ಶರಣ ತತ್ವದ 900 ವರ್ಷಗಳ ಇತಿಹಾಸವನ್ನು ದಾಖಲಿಸುವ ಈ ಕೃತಿ ನಾಡಿನ ಉದ್ದಗಲಕ್ಕೂ ಬೆಳಕಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಪ್ರಚಾರದಲ್ಲಿ ಮತ್ತು ಆಂತರಿಕ ಸಂಘರ್ಷದಲ್ಲಿ ಬಸವಣ್ಣ ಮೇಲುಗೈ ಸಾಧಿಸಿದ್ದರೂ,ಆಚಾರ, ವಿಚಾರದಲ್ಲಿ ಹಿಂದೆ ಉಳಿದಿದೆ.ನುಡಿ ಮತ್ತು ನಡೆಯಲ್ಲಿ ಸಾಕಷ್ಟು ವೆತ್ಯಾಸ ಕಂಡು ಬರುತ್ತಿರುವ ಈ ಕಾಲದಲ್ಲಿ 900 ವರ್ಷಗಳ ಹಿಂದೆ ಜಾತಿ, ಮತ,ಹೆಣ್ಣು, ಗಂಡು, ಮೇಲು, ಕೀಳು, ಬಡವ, ಬಲ್ಲಿದ ನೆಂಬ ಭೇಧವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿರುವುದು ಇಂದು ಊಹಿಸಿಕೊಳ್ಳಲು ಕಷ್ಟ. ಇದು ಬಸವಣ್ಣ ಮಾಡಿದ ದೊಡ್ಡ ಸಾಹಸ. ಆರ್ಹವಾಗಿಯೇ ಅವರನ್ನು ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ ಎಂದು ಗುರುತಿಸಲಾಗಿದೆ.ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಗುಣ ನಮ್ಮ ಶರಣರಲ್ಲಿದೆ.ಆ ಕಾರ್ಯವನ್ನು ಮಾಡುವುದೇ ನಮ್ಮನ್ನು ಆಗಲಿದೆ ಶರಣರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ಡಾ.ಬಸವರಾಜು ಪಾಟೀಲ್ ಸೇಡಂ ನುಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು, ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಮಾತನಾಡಿ,ಬಸವಯುತ ವೈಭವ ಒಂದು ವಿಶಿಷ್ಟ ಗ್ರಂಥ. 12ನೇ ಶತಮಾನದಿಂದ 21ನೇ ಶತಮಾನದರೆಗೆ ಬಸವಣ್ಣವರ ಬಗ್ಗೆ ಯಾರ್ಯಾರು ಬಸವ ತತ್ವವನ್ನು ಪ್ರಸ್ತರಿಸಿದ ಅವರನ್ನು ಪರಿಚಯಿಸುವ ಕೆಲಸ ಆಗಿದೆ.ಬಸವಯುಗ ಮಾನವನಿಗೆ ಘನತೆ ತಂದುಕೊಟ್ಟ ಯುಗ,ಮಾನವೀಯ ಅನುಕಂಪದ ಪ್ರತಿಪಾಧಿಸಿದ ಯುಗ. ಕಾಯಕ, ದಾಸೋಹ, ಸ್ತ್ರೀಸಮಾನತೆ, ಜಾತ್ಯಾತೀತ, ಮೂಡನಂಬಿಕೆ ವಿರುದ್ದ ಹೋರಾಟ ಮಾಡಿದ ಬಸವಣ್ಣನನ್ನು ಸೋಗಸಾಗಿ ಶಾಮಲಿಂಗ ಜವಳಗಿ ನಿರೂಪಿಸಿದ್ದಾರೆ ಎಂದರು.
ಲೇಖಕ ಶಾಮಲಿಂಗ ಜವಳಗಿ, ಮಾತನಡಿದರು.
ಪತ್ರಕರ್ತ ಎಸ್.ನಾಗಣ್ಣ ಮಾತನಾಡಿ, ಸಿದ್ದಗಂಗಾ ಮಠಕ್ಕೂ ನನಗೂ ಅವಿನಾಭಾವ ಸಂಬಂಧ. ಇಲ್ಲಿ ಶಿಕ್ಷಕನಾಗಿ ಕೆಲಸ ಮಾಡಿ, ಹಿರಿಯ ಶ್ರೀಗಳ ಪ್ರಿಯ ಶಿಕ್ಷಕನಾಗಿದ್ದೆ.ಶಿಕ್ಷಕ ವೃತ್ತಿ ತೊರೆದು ಹಲವು ವರ್ಷಗಳ ಕಾಲ ನನ್ನ ಬರುವಿಕೆಗೆ ಶ್ರೀಗಳ ಕಾಯ್ದರು.ಈ ಮಠದಲ್ಲಿ ಓದುತ್ತಿರುವ ನೀವೆಲ್ಲರೂ ಪುಣ್ಯವಂತರು ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಶ್ರೀಸಿದ್ದಲಿಂಗಸ್ವಾಮೀಜಿ ಮಾತನಾಡಿ,ಶಾಮಲಿಂಗ ಜವಳಗಿ ಅವರು ಹೊರತಂದಿರುವ ಬಸವಯುಗ ವೈಭವ ಅತ್ಯಂತ ಮಹತ್ವ ಕೃತಿ.ಬಸವಯುಗದ ಬೆಳಕು ಎಲ್ಲಾ ಶತಮಾನಕ್ಕೂ ಬೇಕಿದೆ.ಬಸವಣ್ಣವರ ವಿಚಾರಧಾರೆಗಳು ಎಂದೆಂದಿಗೂ ಅಗತ್ಯವಿದೆ.ಪ್ರತಿಯೊಬ್ಬ ವ್ಯಕ್ತಿಗೂ ಒಳ್ಳೆಯ ಮನುಷ್ಯನಾಗಲು ಬಸವಣ್ಣನವರ ವಿಚಾರಧಾರೆಗಳು ಬೇಕಿದೆ.ಪ್ರಚಾರಕ್ಕಿಂತ ಆಚರಣೆ ಮುಖ್ಯವಾಗಿದೆ.ಬಸವಣ್ಣನವರ ಬಗ್ಗೆ ಆಪಾರ ಕೃತಿಗಳಿವೆ. ಅವುಗಳಿಗೆ ಕಳಸವಿಟ್ಟಂತೆ ಈ ಕೃತಿ ಇದೆ.ಬಸವಣ್ಣನವರ ಬಗ್ಗೆ ಸಂಶೋಧನೆ ನಡೆಸುವವರಿಗೆ ಅಕರ ಗ್ರಂಥವಾಗಿದೆ.ಓದುವ ಸಂಸ್ಕೃತಿ ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ಈ ಕೃತಿ ಕ್ವಾಂಟಟಿ ಮತ್ತು ಕ್ವಾಲಿಟಿ ಎರಡರಲ್ಲಿಯೂ ಭಾರವಾದ ಕೃತಿ.ನಾವೆಲ್ಲರೂ ಕೊಂಡು ಓದುವ ಮೂಲಕ ಪೆÇ್ರೀತ್ಸಾಹಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಯುವ ಚಿಂತಕರಾದ ಮಹೇಶ್ ರೆಡ್ಡಿ ವೆಂಕಟರೆಡ್ಡಿ ಮುದ್ನಾಳ,ವಿನ್ಯಾಸಕರಾದ ರವಿಕಿರಣ್ ನರಗುಂದ,ಮುದ್ರಕರಾದ ಬಿ.ವಿ.ಪಾಟೀಲ್,ಅಕ್ಷರ ಜೋಡಿಸಿದ ಶರಣಕುಮಾರ್ ಮಠಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶ್ರೀಮಠದ ಮಕ್ಕಳಿಂದ ಸಂಜೆಯ ಸಾಮೂಹಿಕ ಪ್ರಾರ್ಥನೆ ಜರುಗಿತ್ತು.

 

(Visited 1 times, 1 visits today)
bescom Chikkanayakanahalli huliyaru suresh babu tumkur
Previous Articleಗ್ರಾಮಗಳ ಅಭಿವೃದ್ಧಿಗಾಗಿ ೧೭ಕೋಟಿ ೮೪ಲಕ್ಷ ವೆಚ್ಚ
Next Article ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ವ್ಯಾಪಕ ವಿರೋಧ
News Desk Benkiyabale

Related Posts

ವೈಭವದಿಂದ ಹತ್ತನೇ ಉತ್ಸವ ಆಚರಿಸಲು ತೀರ್ಮಾನ

October 23, 2026 6:10 pm news

ವ್ಯರ್ಥವಾಗಬೇಕಾದ ಕುಂಬಳಕಾಯಿಯನ್ನು ಪ್ರಸಾದವನ್ನಾಗಿಸಿದ ಪ್ರಸಾದ್

October 23, 2026 6:08 pm news

ಚನ್ನಮ್ಮ ಇಂದಿನ ಭಾರತದ ಮಹಿಳೆಯರಿಗೆ ಮಾದರಿ

October 23, 2026 6:06 pm news
ತಾಜಾ ಸುದ್ಧಿಗಳು
news

ವೈಭವದಿಂದ ಹತ್ತನೇ ಉತ್ಸವ ಆಚರಿಸಲು ತೀರ್ಮಾನ

October 23, 2026 6:10 pm
news

ವ್ಯರ್ಥವಾಗಬೇಕಾದ ಕುಂಬಳಕಾಯಿಯನ್ನು ಪ್ರಸಾದವನ್ನಾಗಿಸಿದ ಪ್ರಸಾದ್

October 23, 2026 6:08 pm
news

ಚನ್ನಮ್ಮ ಇಂದಿನ ಭಾರತದ ಮಹಿಳೆಯರಿಗೆ ಮಾದರಿ

October 23, 2026 6:06 pm
news

ಬಟ್ಟೆ ಸುತ್ತಿಕೊಂಡ0ತೆ ಸುಕ್ಕುಗಟ್ಟಿದ ರಸ್ತೆ

October 22, 2026 5:22 pm
news

ಕನ್ನಡ ನಾಡಿನ ಗತವೈಭವ ದರ್ಶನ

October 22, 2026 5:21 pm
news

ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ ಸಂಭ್ರಮ

October 22, 2026 5:19 pm
Our Youtube Channel
Our Picks

ವೈಭವದಿಂದ ಹತ್ತನೇ ಉತ್ಸವ ಆಚರಿಸಲು ತೀರ್ಮಾನ

October 23, 2026 6:10 pm

ವ್ಯರ್ಥವಾಗಬೇಕಾದ ಕುಂಬಳಕಾಯಿಯನ್ನು ಪ್ರಸಾದವನ್ನಾಗಿಸಿದ ಪ್ರಸಾದ್

October 23, 2026 6:08 pm

ಚನ್ನಮ್ಮ ಇಂದಿನ ಭಾರತದ ಮಹಿಳೆಯರಿಗೆ ಮಾದರಿ

October 23, 2026 6:06 pm

ಬಟ್ಟೆ ಸುತ್ತಿಕೊಂಡ0ತೆ ಸುಕ್ಕುಗಟ್ಟಿದ ರಸ್ತೆ

October 22, 2026 5:22 pm

ಕನ್ನಡ ನಾಡಿನ ಗತವೈಭವ ದರ್ಶನ

October 22, 2026 5:21 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ವೈಭವದಿಂದ ಹತ್ತನೇ ಉತ್ಸವ ಆಚರಿಸಲು ತೀರ್ಮಾನ

By News Desk BenkiyabaleOctober 23, 2026 6:10 pm

ತುಮಕೂರು: ನಗರದ ಬಿಜಿಎಸ್ ವೃತ್ತದ ನಾಗರಕಟ್ಟೆಯ ಈ ವರ್ಷದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಮಹೋತ್ಸವ ವೈಭವದಿಂದ…

ವ್ಯರ್ಥವಾಗಬೇಕಾದ ಕುಂಬಳಕಾಯಿಯನ್ನು ಪ್ರಸಾದವನ್ನಾಗಿಸಿದ ಪ್ರಸಾದ್

October 23, 2026 6:08 pm

ಚನ್ನಮ್ಮ ಇಂದಿನ ಭಾರತದ ಮಹಿಳೆಯರಿಗೆ ಮಾದರಿ

October 23, 2026 6:06 pm

ಬಟ್ಟೆ ಸುತ್ತಿಕೊಂಡ0ತೆ ಸುಕ್ಕುಗಟ್ಟಿದ ರಸ್ತೆ

October 22, 2026 5:22 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.