ತುಮಕೂರು:

       ರೈತರು ತಾವು ಬೆಳೆದ ಬೆಳೆಯ ವಿವರಗಳನ್ನು “ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್”ಗೆ ಅಪ್‍ಲೋಡ್ ಮಾಡಲು ಸೆಪ್ಟೆಂಬರ್ 23 ಕಡೆಯ ದಿನವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ರಾಜ ಸುಲೋಚನ ತಿಳಿಸಿದ್ದಾರೆ.

      ರೈತರೇ ಸ್ವತಂತ್ರವಾಗಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ಛಾಯಾಚಿತ್ರ ಮತ್ತು ಬೆಳೆ ವಿವರಗಳನ್ನು ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್‍ಗೆ ನಿಗಧಿತ ಅವಧಿಯೊಳಗೆ ಅಪ್‍ಲೋಡ್ ಮಾಡಲು ಅವಕಾವಿದ್ದು, ಜಿಲ್ಲೆಯ ರೈತರು ಸದುಪಯೋಗಪಡಿಸಿಕೊಳ್ಳಬೇಕು. ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್‍ಗೆ ತಮ್ಮ ಬೆಳೆಗಳ ವಿವರಗಳನ್ನು ಅಪ್‍ಲೋಡ್ ಮಾಡಿದಲ್ಲಿ ಬೆಳೆ ವಿಮಾ ಯೋಜನೆ, ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಹಾಗೂ ನಫೆಡ್ ಮೂಲಕ ಕೊಬ್ಬರಿ ಖರೀದಿ ನೋಂದಣಿಗೆ ಬೆಳೆ ಸಮೀಕ್ಷೆ ಆಧಾರದ ಮೇಲೆ ಅವಕಾಶ ದೊರೆಯಲಿದೆ.

      ಅಲ್ಲದೆ ಸೆಪ್ಟೆಂಬರ್ 12 ರಿಂದ ಖಾಸಗಿ ನಿವಾಸಿಗಳನ್ನು ಬಳಸಿಕೊಂಡು ರೈತರೇ ಖುದ್ದು ತಮ್ಮ ಬೆಳೆ ವಿವರಗಳನ್ನು ಅಪ್‍ಲೋಡ್ ಮಾಡುವ ಅವಕಾಶವನ್ನು ಸಹ ಕಲ್ಪಿಸಲಾಗಿದ್ದು, ರೈತ ಬಾಂಧವರು ತಮ್ಮ ಜಮೀನುಗಳ ಬೆಳೆ ವಿವರಗಳನ್ನು ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್‍ನಲ್ಲಿ ನಿಗಧಿತ ಅವಧಿಯೊಳಗೆ ಅಪ್‍ಲೋಡ್ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.

      ಜಿಲ್ಲೆಗೆ 17.16 ಲಕ್ಷ ಭೂಮಿ ತಾಕುಗಳ ಗುರಿಯನ್ನು ನಿಗಧಿಪಡಿಸಲಾಗಿದೆ. ಈವರೆಗೆ 7,62,763 ತಾಕುಗಳ ಗುರಿ ಸಾಧಿಸಲಾಗಿದ್ದು, ಶೇ.44.487 ಪ್ರಗತಿಯಾಗಿರುತ್ತದೆ. ಪಾವಗಡ ತಾಲ್ಲೂಕಿನಲ್ಲಿ ಗರಿಷ್ಠ ಶೇ.57.96 ಮತ್ತು ಮಧುಗಿರಿ ತಾಲ್ಲೂಕಿನಲ್ಲಿ ಕನಿಷ್ಠ ಶೆ.39.87 ಪ್ರಗತಿ ಸಾಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

(Visited 9 times, 1 visits today)