ಬೈಕ್‍ಗಳ ಮುಖಾಮುಖಿ : ಸವಾರರ ದುರ್ಮರಣ

  ಹುಳಿಯಾರು:

      ಪಟ್ಟಣದ ಹೊರವಲಯದ ಕೆಂಚಮ್ಮ ತೋಪಿನ ಬಳಿ ಎರಡು  ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿ ಮತ್ತಿಬ್ಬರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.

      ತಿಪಟೂರು ಪಟ್ಟಣದ ಮಾವಿನತೋಪಿನ ಮಧು (22) ಹಾಗೂ ಆನಂದ್ (45) ಮೃತರು. ಗಾಯಗೊಂಡವರು ಬರಕನಹಾಳ್ ಬಳಿಯ ರಾಮಪ್ಪನಹಟ್ಟಿಯ ಮಧು ಹಾಗೂ ಆನಂದ್. ಇವರು ಬೈಕ್‍ನಲ್ಲಿ ಕೆಂಕೆರೆ ಬಳಿಯ ಪುರದಮಠದ ದೇಗುಲದಲ್ಲಿ ನಡೆಯಲಿದ್ದ ಮದುವೆಯಲ್ಲಿ ಭಾಗವಹಿಸಲು ತೆರಳುತ್ತಿದ್ದರು ಎನ್ನಲಾಗಿದೆ.

       ಈ ಸಂದರ್ಭದಲ್ಲಿ ಎರಡು ಬೈಕ್‍ಗಳು ಬಲವಾಗಿ ಡಿಕ್ಕಿಯಾಗಿ ಮೃತರ ಪೈಕಿ ಒಬ್ಬರು ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರೆ, ಮತ್ತೊಬ್ಬರು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.  ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 8 times, 1 visits today)

Related posts