ಬೈಕ್‍ ಡಿಕ್ಕಿಯಲ್ಲಿದ್ದ 5.30 ಲಕ್ಷ ಹಣ ಹೊತ್ತೊಯ್ದ ಕದೀಮರು

ತಿಪಟೂರು:

      ನಗರದ ಬ್ಯಾಂಕ್ ನಲ್ಲಿ ಆಗತಾನೆ ಹಣ ಡ್ರಾ ಮಾಡಿಕೊಂಡು ಬಂದ ವ್ಯಕ್ತಿ ಹಣವನ್ನು ತನ್ನ ಬೈಕ್‍ನ ಡಿಕ್ಕಿಯಲ್ಲಿರಿಸಿ, ಮೆಡಿಕಲ್ ಸ್ಟೋರ್ ಗೆ ಹೋಗಿ ಬರುವಷ್ಟರಲ್ಲಿ ಕಳ್ಳರು ಹಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

       ಆಗ್ರೋ ಇಂಡಸ್ಟ್ರಿ ಮಾಲಿಕ ಪಾರ್ಥಸಾರಥಿ ಎಂಬುವರೇ ಹಣ ಕಳೆದುಕೊಂಡವರು. ಇವರು ಆಗತಾನೆ ವಿಜಯ ಬ್ಯಾಂಕ್ ನಲ್ಲಿ 5.30 ಲಕ್ಷ ಹಣ ಡ್ರಾ ಮಾಡಿ, ಬ್ಯಾಂಕ್ ಎದುರು ತಮ್ಮ ಆಕ್ಟಿವಾ ಹೊಂಡ ಬೈಕ್ ನಿಲ್ಲಿಸಿ, ಡಿಕ್ಕಿಯಲ್ಲಿ ಹಣ ಇಟ್ಟಿದ್ದರು. ಮೆಡಿಕಲ್ ಸ್ಟೋರ್ ಗೆ ಹೋಗಿ ಔಷಧಿ ಸಾಮಗ್ರಿ ತೆಗೆದುಕೊಂಡು ಬರುವಷ್ಟರಲ್ಲಿ, ಪಲ್ಸರ್ ಬೈಕ್ ನಲ್ಲಿ ಬಂದ ಮುಸುಕುದಾರಿ ಕಳ್ಳರು, ಆಕ್ಟಿವಾ ಹೊಂಡ ಡಿಕ್ಕಿ ಮುರಿದು ಹಣ ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 7 times, 1 visits today)

Related posts

Leave a Comment