ಬೆಳಗಾವಿ


ವನ್ಯ ಜೀವಿಗಳಿಗೆ ಸಂಬAಧ ಪಟ್ಟ ವಸ್ತುಗಳು ಮನೆಯಲ್ಲಿದ್ದರೆ ಯಾರೂ ಭಯಪಡವು ಅಗತ್ಯವಿಲ್ಲ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಲ್ಲಿದೆ – ಬಿ.ಸುರೇಶಗೌಡ
ರಾಜ್ಯದಲ್ಲಿ ಅನೇಕರು ಪೂರ್ವಜರ ಕಾಲದಿಂದಲೂ ಕೂಡ ಕೆಲವು ಮನೆಗಳಲ್ಲಿ ಇಂದಿಗೂ ಜಿಂಕೆ ಕೊಂಬು, ಕಾಡುಕೋಣದ ಕೊಂಬು ಮತ್ತಿತರ ವನ್ಯಜೀವಿಗಳ ಪರಿಕರಗಳನ್ನು ಮನೆಗಳ ಗೋಡೆ ಮತ್ತು ಕಂಬಗಳಲ್ಲಿ ಅಳವಡಿಸಿರುವುದು ಕೇಳಿ ಬಂದಿದೆ. ಇದರಿಂದ ಇತ್ತೀಚೆಗೆ ಹುಲಿ ಉಗುರು ಪ್ರಕರಣ ಬೆಳಕಿಗೆ ಬಂದಾಗಿನಿAದ ಈ ವಿಚಾರವಾಗಿ ಜನ ಭಯಭೀತರಾಗಿದ್ದಾರೆ. ಆದ್ದರಿಂದ ಮನೆಗಳಲ್ಲಿರುವ ಜಿಂಕೆ ಕೊಂಬು, ಕಾಡುಕೋಣದ ಕೊಂಬುಗಳನ್ನು ಸಕ್ರಮಗೊಳಿಸುವ ಬಗ್ಗೆ ಸರ್ಕಾರದ ಗಮನದಲ್ಲಿದೆಯೇ? ಎಂಬ ಕುರಿತಂತೆ ನಿಯಮ ೭೩ ರಡಿ ಮಂಗಳವಾರ ಸರ್ಕಾರದ ಗಮನ ಸೆಳೆದರು .
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶಗೌಡರು ಈ ಬಗ್ಗೆ ಗಮನ ಸೆಳೆದರು. ಈ ಹಿಂದೆ ಈ ರೀತಿಯ ಪ್ರಕರಣಗಳಲ್ಲಿ ಪರಿಕರಗಳನ್ನು ಸರ್ಕಾರಕ್ಕೆ ವಾಪಸ್ಸು ನೀಡಲು ಮತ್ತು ಸಕ್ರಮೀಕರಣ ಗೊಳಿಸಿಕೊಳ್ಳಲು ಸಾಕಷ್ಠು ಸಮಯಾವಾಕಾಶ ನೀಡಿತ್ತಾದರೂ ಕೂಡಾ ಕಾನೂನುಗಳ ಅರಿವಿನ ಕೊರತೆಯಿಂದ ವನ್ಯಪ್ರಾಣಿಗಳ ಅಂಗಾAಗ ಮತ್ತು ಟ್ರೋಫಿಗಳನ್ನು ಘೋಷಿಸಿಲ್ಲ ಎಂದು ತೋರುತ್ತದೆ. ವನ್ಯ ಜೀವಿಗಳ ಅಂಗಾAಗಗಳನ್ನು ಹೊಂದಿರುವುದರಿAದ ಆಗುವ ಪ್ರಯೋಜನಗಳ ಕುರಿತಾಗಿರುವ ತಪ್ಪು ನಂಬಿಕೆ ಇತ್ಯಾದಿಗಳಿಂದ ಇನ್ನೂ ಕೆಲವು ಜನರು ತಮ್ಮಲ್ಲಿರುವ ವನ್ಯ ಜೀವಿಗಳ ಅಂಗಾAಗ ಮತ್ತು ಟ್ರೋಫಿಗಳನ್ನು ಘೋಷಿಸಿಕೊಳ್ಳದೆ ಇರುವುದು ಗಮನಕ್ಕೆ ಬಂದಿರುತ್ತದೆ. ರಾಜ್ಯದಲ್ಲಿ ಸಮಾಜದ ವಿವಿಧ ಸ್ಥಳಗಳ ಜನರು ಹುಲಿ ಮತ್ತು ಚಿರತೆ ಉಗುರುಗಳು , ಕಾಡುಕೋಣದ ಕೊಂಬು ಆನೆಯ ಬಾಲ, ದಂತ, ಮತ್ತು ಕೂದಲು ಇತ್ಯಾದಿ ಪ್ರಾಣಿಗಳ ವಸ್ತುಗಳನ್ನು ಹೊಂದಿರುವುದನ್ನು ಗಮನಿಸಿದ ಹಲವಾರು ಪ್ರಕರಣಗಳು ಗಮನಕ್ಕೆ ಬಂದಿವೆ ಮತ್ತು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಇದರಿಂದ ಜನ ಭಯಬೀತರಾಗಿದ್ದಾರೆ ಆದ್ದರಿಂದ ಇದರ ಬಗ್ಗೆ ಸರ್ಕಾರ ಕೂಡಲೇ ಒಂದು ಕಾನೂನು ತಂದು ರಾಜ್ಯದ ಜನರ ರಕ್ಷಣೆಗೆ ಧಾವಿಸಬೇಕು ಎಂದು ಸುರೇಶಗೌಡ ಆಗ್ರಹಿಸಿದರು. ಅಲ್ಲದೆ ವನ್ಯಜೀವಿ (ಸಂರಕ್ಷಣಾ) ಅಧಿನಿಯಮ ೧೯೭೨ರ ಸೆಕ್ಷನ್ ೪೪ ರನ್ವಯ ಇಂತಹ ಟ್ರೋಫಿಗಳನ್ನು ಹೊಂದುವುದನ್ನು ನಿಷೇಧಿಸಲಾಗಿದೆ. ಆದರೆ ವನ್ಯಜೀವಿ (ಸಂರಕ್ಷಣಾ) ಅಧಿನಿಯಮ ೧೯೭೨ರ ಸೆಕ್ಷನ್ ೬೪ ರನ್ವಯ ರಾಜ್ಯ ಸರ್ಕಾರಕ್ಕೆ ನೀಡಿರುವ ಅಧಿಕಾರದ ಅನ್ವಯ ಈ ಹಿಂದೆ ಒದಗಿಸಿದ ಅವಕಾಶಗಳಲ್ಲಿ ಅಂಗಾAಗ ಮತ್ತು ಟ್ರೋಫಿಗಳ ಘೋಷಣೆಗಳನ್ನು ಮಾಡಿಕೊಂಡಿರದ ಜನರಿಗೆ ರಾಜ್ಯ ಸರ್ಕಾರದ ಆಸ್ತಿಯಾಗಿರುವ ವನ್ಯಜೀವಿ ಅಂಗಾAಗ / ಟ್ರೋಫಿಗಳನ್ನು ರಾಜ್ಯ ಸರ್ಕಾರಕ್ಕೆ ಆಧ್ಯರ್ಪಿಸಲು ಕಾಲಾವಕಾಶವನ್ನು ಒದಗಿಸಲು ನಿಯಮಗಳನ್ನು ರಚಿಸುವ ಕುರಿತು ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿರುತ್ತದೆ. ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ ಖಂಡ್ರೆ ಅವ ರು ಸದನಕ್ಕೆ ತಿಳಿಸಿದರು.

(Visited 1 times, 1 visits today)