ಮಧುಗಿರಿ :
      ಮಧುಗಿರಿಯನ್ನು ಕಂದಾಯ ಜಿಲ್ಲೆಯನ್ನಾಗಿ ಸರ್ಕಾರ ಘೋಷಿಸುವಂತೆ  ಕೆಪಿಸಿಸಿ ಸದಸ್ಯ ಹಾಗೂ ಜೆಎಸ್ಎಸ್ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಜಗದೀಶ್ ರೆಡ್ಡಿ ಆಗ್ರಹಿಸಿದರು. 
     
      ಶುಕ್ರವಾರದಂದು ಪಟ್ಟಣದ ನೃಪತುಂಗ ವೃತ್ತದ ಬಳಿಯಿರುವ ಡಾ.  ಬಿ. ಆರ್. ಅಂಬೇಡ್ಕರ್ ಆಟೊ ನಿಲ್ದಾಣದಲ್ಲಿ ಆಟೋ ಚಾಲಕರು ಮತ್ತು ಖಾಸಗಿ ಬಸ್ ನಿಲ್ದಾಣದ ಮದಕರಿನಾಯಕ ವೃತ್ತದ ಬಳಿಯ ಆಟೋ ಚಾಲಕರುಗಳು ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಟೋ ಚಾಲಕರಗಳಿಗೆ ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿದರು.
      ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರವೆಂಬ ಮೂವತ್ತೊಂದನೇ ಜಿಲ್ಲೆಯನ್ನಾಗಿ ಘೋಷಿಸಲು ಮುಂದಾಗಿದ್ದು ತುಮಕೂರು ಜಿಲ್ಲೆಯು ಹತ್ತು ತಾಲ್ಲೂಕುಗಳನ್ನೊಳಗೊಂಡ ಅತಿ ದೊಡ್ಡ ಜಿಲ್ಲೆಯಾಗಿದೆ. ನಂಜುಂಡಪ್ಪ ವರದಿಯಾದರಿತ ಅತಿ ಹಿಂದುಳಿದ ತಾಲ್ಲೂಕುಗಳಾದ ಪಾವಗಡ,ಮಧುಗಿರಿ, ಕೊರಟಗೆರೆ,ಸಿರಾ, ಸ್ವಾತಂತ್ರ್ಯಪೂರ್ವದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಹೊಂದಿರುವುದು ,ಐತಿಹಾಸಿಕ ಹಿನ್ನಲೆಯುಳ್ಳ ಮತ್ತು ಈಗಾಗಲೇ ಶೈಕ್ಷಣಿಕ ಜಿಲ್ಲೆ ಯಾಗಿರುವ ಮಧುಗಿರಿಯನ್ನು ಕೇಂದ್ರಸ್ಥಾನವನ್ನಾಗಿಸಿ ಕಂದಾಯ ಜಿಲ್ಲೆಯನ್ನಾಗಿ  ಘೋಷಿಸಿರುವುದರಿಂದ ಇಲ್ಲಿನ ಜನರ ಬದುಕು ಹಸನಾಗುತ್ತದೆ ಎಂದರು
ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಪ್ರವಾಸೋದ್ಯಮ ಕೇಂದ್ರ, ಕೈಗಾರಿಕಾ ವಲಯಗಳ ಸ್ಥಾಪನೆ ಶಾಶ್ವತ ನೀರಾವರಿ ಯೋಜನೆ ಜಾರಿಯಾದರೆ ಇಲ್ಲಿನ ಜನ ಸ್ವಾವಲಂಬಿಗಳಾಗಿ ಬದುಕು ಸಾಧಿಸಲು ಸಾಧ್ಯವೆಂದರು.
      ಮಧುಗಿರಿ ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಗಮನ ಸೆಳೆಯಲು ಹೋರಾಟಗಳನ್ನು ಹಮ್ಮಿಕೊಂಡರೆ ನಾನು ಸಕ್ರಿಯನಾಗಿ ಪಾಲ್ಗೊಳ್ಳುತ್ತೆನೆ.
      ಯಾವುದೇ ರಾಜಕಾರಣಿಗಳು ಅಧಿಕಾರಿಗಳು ಮಾಡದಂತಹ ಸೇವೆ ಆಟೊರಿಕ್ಷಾ ಚಾಲಕರು ಗಳು ಸಮಾಜದಲ್ಲಿ ಹಗಲಿರುಳು ಮಾಡುತ್ತಾರೆ. ಯಾವುದೇ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಬರುತ್ತಾರೆ. ಕೇವಲ ಆಟೊ ರಿಕ್ಷಾ ಚಾಲಕರಾಗಿ ಇರದೆ ಕಾರಿನ ಚಾಲಕರಾಗಿ ಪಟ್ಟಣದಲ್ಲಿ ಮನೆ ನಿರ್ಮಿಸಿಕೊಂಡು ಮತ್ತೊಬ್ಬರಿಗೆ ಸಹಾಯ ಮಾಡುವ ಹಂತಕ್ಕೆ ಆಟೊ ಚಾಲಕರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು, ಅಂತಹ ಸಂದರ್ಭದಲ್ಲಿ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ನನ್ನ ಸಹಕಾರ ಇರುತ್ತದೆ ಎಂದರು.
       ಪುರಸಭಾ ಸದಸ್ಯ ಚಂದ್ರಶೇಖರಬಾಬು ಮಾತನಾಡಿ ,ಕರೋನಾ ದಂಥಹ ಕಷ್ಟಕಾಲದಲ್ಲಿ ಬಡಜನರಿಗೆ ಸಹಾಯ ಹಸ್ತ ಕಲ್ಪಿಸಿದ ಜಗದೀಶ್ ರೆಡ್ಡಿ ಅವರ ಕಾರ್ಯವನ್ನು ಶ್ಲಾಘಿಸಿದರು.
       ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಂ. ಎಸ್ .ಚಂದ್ರಶೇಖರ್ ,ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪಿ. ನರಸಿಂಹಮೂರ್ತಿ ,ದಲಿತ ಸಂಘರ್ಷ ಸಮಿತಿಯ ದೊಡ್ಡೇರಿ ಕಣಿಮಯ್ಯ ಎಂ ವೈ ಶಿವಕುಮಾರ್ , ಮುಖಂಡ ಕಾಳೇಗೌಡ ಹಾಗೂ ಡಾ. ಬಿ. ಆರ್ .ಅಂಬೇಡ್ಕರ್ ಆಟೊ ಚಾಲಕರ ಸಂಘದ ನಟರಾಜು, ಹರೀಶ್, ಮಂಜುನಾಥ್, ಅರುಣ, ರಾಖಿ, ಕಾರ್ತಿಕ್ ಮತ್ತು ಖಾಸಗಿ ಬಸ್ ನಿಲ್ದಾಣದಲ್ಲಿ  ಉಪನ್ಯಾಸಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಂಗಪ್ಪ, ಎಮ್ಎಲ್ಎ ಶಿವಣ್ಣ, ಕೃಷ್ಣಮೂರ್ತಿ, ಆಟೋ ಚಾಲಕರುಗಳಾದ ಪ್ರಭುದೇವ್, ಶಿವಣ್ಣ, ಮಂಜುನಾಥ್, ಇಲಿಯಾಸ್ ಅಹ್ಮದ್  ಇತರರು ಹಾಜರಿದ್ದರು.
(Visited 10 times, 1 visits today)