ಮಧುಗಿರಿ:

      ಪಟ್ಟಣದಲ್ಲಿರುವ ದ್ವಿತೀಯ ಪಿಯುಸಿ ಎರಡು ಪರೀಕ್ಷಾ ಕೇಂದ್ರಗಳಲ್ಲಿ 1605 ವಿದ್ಯಾರ್ಥಿಗಳು ಆಂಗ್ಲ ವಿಷಯ ಪರೀಕ್ಷೆಗೆ ನೋಂದಾಯಿಸಿದ್ದರು 1500 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.

      ಮಾರ್ಚ್ -23 ರಂದೇ ನಡೆಯಬೇಕಿದ್ದ ಈ ಪರೀಕ್ಷೆ ಕರೋನಾ ವೈರಸ್ ಹರಡುವಿಕೆ ಯಿಂದಾಗಿ ಜೂನ್ -18 ರಂದು ನಡೆದಿದೆ.
ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದ ತಹಸೀಲ್ದಾರ್ ಡಾ.ಜಿ. ವಿಶ್ವನಾಥ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಉಷ್ಣಾಂಶ ಪರೀಕ್ಷೆ ,ಸಾಮಾಜಿಕ ಅಂತರ, ಸ್ಯಾನಿಟೈಸರ್ ಅನ್ನು ಪ್ರವೇಶದ್ವಾರದಲ್ಲಿ ವ್ಯವಸ್ಥೆ ಮಾಡಲಾಯಿತು.

      ಗ್ರಾಮಾಂತರ ಪ್ರದೇಶದ ಗಡಿ ಭಾಗದಿಂದಲೂ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಲುಪಲು ಮತ್ತು ಮರಳಿ ಗ್ರಾಮಕ್ಕೆ ತಲುಪಲು 22- ಕೆ ಎಸ್ ಆರ್ ಟಿಸಿ ಬಸ್ಸುಗಳನ್ನು ವ್ಯವಸ್ಥೆ ಕಲ್ಪಿಸಲಾಯಿತು. ಬಸ್ಸ್ ನಲ್ಲಿ ಬಹುತೇಕ ವಿದ್ಯಾರ್ಥಿನಿಯರೇ ಆಗಮಿಸಿದ್ದಾರೆಂದು ಮಾಹಿತಿ ಬಂದಿದೆ.  

      ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳಲ್ಲಿ ಅವರ  ಪೋಷಕರೊಂದಿಗೆ ಬಂದಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ ಎಂದರು.
ಪಟ್ಟಣದ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಮುಖ್ಯ ಅಧೀಕ್ಷಕ ಹಾಗೂ ಪ್ರಾಂಶುಪಾಲ ಎಂ.ಜಿ .ಅಶ್ವತ್ಥ್ ನಾರಾಯಣ್ ರಾಘವೇಂದ್ರ ಪಿಯುಸಿ ಕಾಲೇಜಿನ ಪರೀಕ್ಷಾ ಕೇಂದ್ರದ ವಿ.ಎಸ್.ರಾಜಣ್ಣ, ಉಪನ್ಯಾಸಕರ ಸಂಘದ ತಾಲೂಕು ಅಧ್ಯಕ್ಷ ರಂಗಪ್ಪ,ಅರೋಗ್ಯ ಇಲಾಖೆಯ ಪಿ.ಎನ್.ಚಂದ್ರಶೇಖರ, ಅಶಾ,ಅಶಾ ಕಾರ್ಯಕರ್ತೆ ಸರೋಜಮ್ಮ ಪರೀಕ್ಷಾ ಕಾರ್ಯದಲ್ಲಿದ್ದರು.

(Visited 4 times, 1 visits today)