ಮಧುಗಿರಿ : ಭೀಕರ ಅಪಘಾತ ; ಸ್ಥಳದಲ್ಲೆ ಮೂವರ ದುರ್ಮರಣ!!

ಮಧುಗಿರಿ : 

      ಕೆಟ್ಟು ನಿಂತಿದ್ದ ಲಾರಿಗೆ ಇನ್ನೋವಾ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಬೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

       ತಾಲೂಕಿನ ಮಿಡಿಗೇಶಿ ಹೋಬಳಿ ಚಂದ್ರಬಾವಿ ಬಳಿ ಘಟನೆ ನಡೆದಿದ್ದು, ಸೀಮಾಂದ್ರದ ಎನ್.ಆರ್. ರೊಪ್ಪಂ ಗ್ರಾಮದ ನರಸಿಂಹಮೂರ್ತಿ(32), ಪಾವಗಡ ತಾಲೂಕಿನ ನಲ್ಲಿಗಾನಹಳ್ಳಿಯ ದುರ್ಗಪ್ಪ(21), ನರಸಮ್ಮ(35) ಸ್ಥಳದಲ್ಲೇ ಮೃತಪಟ್ಟವರು.

       ಗೋವಿಂದಪ್ಪ, ಅಲುವೇಲಮ್ಮ, ಮಾರಪ್ಪ ಗಂಬೀರವಾಗಿ ಗಾಯಗೊಂಡಿದ್ದು, ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಗೋಪಾಲ್ ಎಂಬುವವರು ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ.

      ಇವರೆಲ್ಲರೂ ಇನ್ನೋವಾ ವಾಹನದಲ್ಲಿ ಬೆಂಗಳೂರಿಗೆ ಹೋಗಿ ಪಾವಗಡಕ್ಕೆ ವಾಪಾಸ್ಸಾಗುವಾಗ ಘಟನೆ ನಡೆದಿದ್ದು, ಮಿಡಿಗೇಶಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

(Visited 9 times, 1 visits today)

Related posts

Leave a Comment