ಮಾಜಿ ಮೇಯರ್ ರವಿ ಕೊಲೆ ಹಿಂದಿತ್ತಾ ಸೈಲೆಂಟ್ ಸುನಿಲನ ಕರಿನೆರಳು..?

 ತುಮಕೂರು:

        ತುಮಕೂರು ನಗರದ ರೌಡಿ ಶೀಟರ್ ಮಾಜಿ ಮಹಾಪೌರ ರವಿಕುಮಾರ್ ಆಲಿಯಾಸ್ ಗಡ್ಡ ರವಿಯ ಹತ್ಯೆಯ ಹಿಂದೆ ಸೈಲೆಂಟ್ ಸುನಿನ ಅಸೋಸಿಯೇಟ್ ಲಕ್ಷ್ಮೀ ಆಲಿಯಾಸ್ ಲಕ್ಷ್ಮೀನಾರಾಯಣನ ಕೈಚಳಕವಿದೆ ಎಂದು ಪೊಲೀಸರು ಸಂಶಯಿಸಲಾಗಿದ್ದು, ಇಂದು ತುಮಕೂರು ಪೊಲೀಸರು ಸೈಲೆಂಟ್ ಸುನೀಲನನ್ನು ರೌಡಿ ರವಿಯ ಹತ್ಯೆಯ ಕಾರಣಕ್ಕೆ ತನಿಖೆಗೊಳಪಡಿಸಲಿದ್ದಾರೆ. ಮಾಜಿ ಮೇಯರ್ ಕೊಲೆಯ ಹಿಂದಿನ ದಿನ ಸೈಲೆಂಟ್ ಸುನಿಲನ ಸಹಚರರ ಜೊತೆ ಮೀಟಿಂಗ್ ¯ಕ್ಷ್ಮೀ ಸೈಲೆಂಟ್ ಸುನಿಲ್ ಅಸೋಸಿಯೇಟ್ ಸುಜಯ್ ಜೊತೆ ಮೀಟಿಂಗ್ ನಡೆಸಿದ್ದ ಲಕ್ಷ್ಮೀನಾರಾಯಣ ಸೈಲೆಂಟ್ ಸುನಿಲ ಕೋಕಾ ಕಾಯ್ದೆಯ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬರುತ್ತಿದ್ದಂತೆ ಇನ್ಸ್‍ಪೆಕ್ಟರ್ ಪ್ರಕಾಶ್ ಗೆ ಲಾಕ್‍ಆಗಿದ್ದು ತನಿಖೆಯಲ್ಲಿ ವಿಷಯ ಬಹಿರಂಗಗೊಂಡಿರುವ ಸಾಧ್ಯತೆಗಳಿವೆ.

silent sunil ಗೆ ಚಿತ್ರದ ಫಲಿತಾಂಶ

 

      ಹತ್ಯೆಗೂ ಒಂದು ದಿನ ಮುನ್ನ ಡಾಬಾದಲ್ಲಿ ಮೀಟಿಂಗ್ ನಡೆಸಿದ್ದು, ಸೈಲೆಂಟ್ ಸಹಚರ ಲಕ್ಷ್ಮೀ ಆಲಿಯಾಸ್ ಲಕ್ಷ್ಮೀನಾರಾಯಣ ಈ ಕೊಲೆಯ ಬಗ್ಗೆ ಸಂಚು ರೂಪಿಸಿರುವ ಬಗ್ಗೆ ವಿಷಯ ಹೊರಬರುತ್ತಿದ್ದು, ಸದರಿ ವಿಚಾರವಾಗಿ ಗುರುವಾರ ಸೈಲೆಂಟ್ ಸುನಿಲನನ್ನು ತುಮಕೂರು ಪೊಲೀಸರು ತನಿಖೆ ನಡೆಸಲಿದ್ದಾರೆಂದು ಬಲ್ಲ ಮೂಲಗಳಿಂದ ಮಾಹಿತಿ ಹೊರಬಿದ್ದಿದೆ. ಹಾಗಾದರೆ, ರೌಡಿ ರವಿ ಹತ್ಯೆಯ ಹಿಂದೆ ಸೈಲೆಂಟ್ ಸುನಿಲನ ಕರಿನೆರಳು ಇದೆಯೇ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ತನಿಖೆಯಿಂದ ಸತ್ಯಾಸತ್ಯತೆಗಳು ಬಹಿರಂಗಗೊಳ್ಳುವ ಸಾಧ್ಯತೆಗಳಿವೆ. ಮಾಜಿ ಮೇಯರ್ ಹತ್ಯೆಯಲ್ಲಿ ಸೈಲೆಂಟ್ ಸುನಿಲನ ಕೈವಾಡವಿರುವುದು ಸತ್ಯವಾದರೆ, ಇದಕ್ಕೆ ಕಾರಣಗಳೇನು..? ಸೈಲೆಂಟ್ ಸುನಿಲನಂತಹ ಬೆಂಗಳೂರಿನ ಪಾತಕ ಲೋಕದ ಕ್ರಿಮಿನಲ್‍ಗಳು ತುಮಕೂರಿನ ರೌಡಿಯನ್ನು ಹತ್ಯೆಮಾಡುತ್ತಾರೆಂದಾದರೆ, ಇದರ ಹಿಂದಿರುವ ನಿಗೂಢ ಸತ್ಯಗಳೇನು..? 

 

(Visited 88 times, 1 visits today)

Related posts

Leave a Comment