ಮಾಸ್ಕ್ ಧರಿಸದೆ ಸಂಚರಿಸುವ ಜನರಿಗೆ ಬಿಸಿಮುಟ್ಟಿಸಿದ ಅಧಿಕಾರಿಗಳು

ಹುಳಿಯಾರು:

     ಮಾಸ್ಕ್ ಧರಿಸದೆ ರಸ್ತೆಗಳಲ್ಲಿ ತಿರುಗಾಡುವ ಪಾದಾಚಾರಿಗಳಿಗೆ, ವಾಹನ ಸವಾರರಿಗೆ ದಂಡವಿದಿಸುವ ಕಾರ್ಯಕ್ಕೆ ಹುಳಿಯಾರು ಪೊಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ, ಅಧಿಕಾರಿಗಳು ಜಂಟಿಯಾಗಿ ಮಂಗಳವಾರದಂದು ಕಾರ್ಯಚಾರಣೆ ನಡೆಸಿ ಬಿಸಿಮುಟಿಸಿದ್ದಾರೆ.

      ಕೊರೊನಾ ತಡೆಗಟ್ಟಲು ಜನರು ಮನೆಯಿಂದ ಆಚೆ ಬಂದಾಗ ಮತ್ತು ರಸ್ತೆಯಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವಂತೆ ಸರಕಾರ ನಿಯಮವನ್ನ ಪಾಲಿಸುವಂತೆ ಸಾಕಷ್ಟು ಬಾರಿ ಜಾಗೃತಿ ಮೂಡಿಸಿದರು ಸಹಾ ಕೆಲವು ಜನರು ಯಾವುದಕ್ಕು ಜಗ್ಗದೆ ತಿರುಗಾಡುವುದು ಸಾಮಾನ್ಯವಾಗಿದೆ.

ಇಂತವರಿಗೆ ಬಿಸಿ ಮುಟ್ಟಿಸುವ ನಿಟ್ಟಿನ್ನಲ್ಲಿ ಪೊಲೀಸರು, ಸ್ಥಳಿಯ ಪಪಂ. ಹಾಗೂ ಆರೋಗ್ಯ ಇಲಾಖೆಯವರು ಜಂಟಿಯಾಗಿ ರಸ್ತೆಗೆ ಇಳಿದು ದಂಡವಿದಿಸುವ ಜೊತೆಗೆ ಕೊರೊನಾ ಪರೀಕ್ಷೆ ನಡೆಸುವ ಮೂಲಕ ಪ್ರತಿಯೋಬ್ಬರು ಸಹಾ ಮಾಸ್ಕ್ ಧರಿಸಿಕೊಂಡು, ಸಮಾಜಿಕ ಅಂತರ ಕಾಪಾಡಿಕೊಂಡು ಸರಕಾರದ ನಿಯಮವನ್ನ ಪಾಲಿಸುವ ಮೂಲಕ ಕೊರೊನಾ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನ ಅನುಸರಿಸುವ ಮೂಲಕ ತಮ್ಮ ಆರೋಗ್ಯವನ್ನ ತಾವೇ ಕಾಪಾಡಿಕೊಳ್ಳುವಂತೆ ಮನವಿಮಾಡಿದರು.

(Visited 6 times, 1 visits today)

Related posts

Leave a Comment