ರಾಜ್ಯ ಸರ್ಕಾರದಿಂದ ಪಿಯು ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್!

ಬೆಂಗಳೂರು :

      ದೋಸ್ತಿ ಸರ್ಕಾರವು ಪಿಯುಸಿ ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದ್ದು, ಇನ್ಮುಂದೆ ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ಮಾಡಲು ಮುಂದಾಗಿದೆ.

      ಈ ಕುರಿತು ರಾಜ್ಯದ ಎಲ್ಲ ಕಾಲೇಜುಗಳಿಗೆ ಸೂಚನೆ ನೀಡಲಾಗಿದ್ದು, ಸುತ್ತೋಲೆ ಹೊರಡಿಸಲಾಗಿದೆ. ಪಿಯು ವಿದ್ಯಾರ್ಥಿಗಳು ಕಾಲೇಜಿಗೆ ಲ್ಯಾಪ್ ಟಾಪ್ ಕೂಡಾ ಕೊಂಡೊಯ್ಯುವಂತಿಲ್ಲವೆಂದು ತಿಳಿಸಲಾಗಿದೆ.

      ಕಾಲೇಜು ಅವಧಿಯಲ್ಲಿ ಇನ್ಮುಂದೆ ಮೊಬೈಲ್ ಫೋನ್ ಮತ್ತು ಲ್ಯಾಪ್ ಟಾಪ್ ಬಳಸುವ ಹಾಗಿಲ್ಲ ಎಂದು ಪಿಯುಸಿ ಬೋರ್ಡ್ ಮಹತ್ವದ ಆದೇಶವನ್ನು ಹೊರಡಿಸಿದೆ. ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳಲ್ಲಿ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಬ್ಯಾನ್ ಮಾಡಲಾಗಿದೆ.

      ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಪಿಯುಸಿ ಬೋರ್ಡ್ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಬ್ಬರಿಗೂ ಮೊಬೈಲ್ ಹಾಗೂ ಲ್ಯಾಪ್ ಟ್ಯಾಪ್ ಬ್ಯಾನ್ ಮಾಡಿದೆ. ಈಗಾಗಲೇ ಪಿಯುಸಿ ಬೋರ್ಡ್ ಆದೇಶ ಜಾರಿಗೆ ತರುವಂತೆ ಎಲ್ಲ ಉಪನಿರ್ದೇಶಕರಿಗೆ ಸುತ್ತೋಲೆ ಹೊರಡಿಸಿದೆ ಎನ್ನಲಾಗಿದೆ.

      ಮೊಬೈಲ್ ಬಳಕೆ ನಿಷೇಧ ಒಪ್ಪಬಹುದಾದರೂ ಲ್ಯಾಪ್ ಟಾಪ್ ಬಳಕೆ ನಿಷೇಧಿಸಿರುವುದು ಸರಿಯಲ್ಲವೆಂಬ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆ ಮಂಡಳಿ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

      ಪದವಿ ಪೂರ್ವ ಶಿಕ್ಷಣ ಮಂಡಳಿಯ ಈ ಸುತ್ತೋಲೆಗೆ ವಿದ್ಯಾರ್ಥಿ ಹಾಗೂ ಸಾರ್ವಜನಿಕ ವಲಯದಿಂದ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು,

 

(Visited 9 times, 1 visits today)

Related posts

Leave a Comment