ರೈಲು ಕಂಬಿ ಬೇಲಿ ದಾಟಲು ಹೋಗಿ ಗಂಡಾನೆ ದಾರುಣ ಸಾವು!

ಮೈಸೂರು: 

      ಕಂಬಿ ಬೇಲಿ ದಾಟಲು ಯತ್ನಿಸಿ ಒಂಟಿ ಸಲಗವೊಂದು ಜೀವನ್ಮರಣ ಹೋರಾಟ ನಡೆಸಿ ಮೃತಪಟ್ಟಿದೆ. ನಾಗರಹೊಳೆ ವ್ಯಾಪ್ತಿಯ ವೀರನಹೊಸಳ್ಳಿ ಬಳಿ ದಾರುಣ ಘಟನೆ ನಡೆದಿದೆ.

       ಮೂರು ಕಾಡಾನೆಗಳು ಗ್ರಾಮಕ್ಕೆ ಬಂದಿದ್ದು ಅರಣ್ಯ ಇಲಾಖೆ ಸಿಬಂದಿ ಮತ್ತು ಗ್ರಾಮಸ್ಥರು ಕಾಡಿಗೆ ಓಡಿಸಿದ್ದರು. ಆದರೆ 42 ವರ್ಷ ಪ್ರಾಯದ ಗಂಡಾನೆ ರೈಲು ಕಂಬಿ ತಡೆಗೊಡೆಗೆ ಹಾರಲು ಯತ್ನಿಸಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿದೆ.

      ಆನೆಗಳ‌ ಹಾವಳಿ ನಿಯಂತ್ರಿಸಲು ರೈಲು ಕಂಬಿಗಳಿಗೆ ತಡೆಗೋಡೆ ನಿರ್ಮಿಸಲಾಗಿತ್ತು. ಕಂಬಿ ಬೇಲಿಯನ್ನ ಜಿಗಿದು ಇನ್ನೊಂದು ಕಡೆ ಹೋಗಲು ಯತ್ನಿಸಿದೆ. ಎರಡು ಕಾಲುಗಳನ್ನ ಮುಂದೆ ಚಾಚಿ ಹಾರಿದಾಗ ಅದರ ಹೊಟ್ಟೆ ಬೇಲಿ ಮೇಲೆ ಸಿಕ್ಕಾಕಿಕೊಂಡಿದೆ. ಪರಿಣಾಮ ಆನೆ ಬೇಲಿ ಮೇಲೆ ನೇತಾಡಿದೆ.  ಅನೆಯ ಹೃದಯ ಭಾಗ ಕಂಬಿಗೆ ಸಿಲುಕಿ ಭಾರ ತಾಳಲಾರದೆ ಶ್ವಾಸಕೋಶದ ಮೇಲೆ ಒತ್ತಡ ಬಿದ್ದು ಸಾವನ್ನಪ್ಪಿದೆ ಎಂದು  ಹೇಳಲಾಗಿದೆ.


 

(Visited 25 times, 1 visits today)

Related posts

Leave a Comment