ತುಮಕೂರು


ವಾಸ್ತುಶಿಲ್ಪಕ್ಕೆ ವಿಶ್ವಕರ್ಮ ಜನಾಂಗದ ಶಿಲ್ಪಿಗಳ ಕೊಡುಗೆ ಅಪಾರವಾಗಿದ್ದು, ಅಮರಶಿಲ್ಪಿ ಜಕಣಾಚಾರಿ ಕಾಲ್ಪನಿಕ ವ್ಯಕ್ತಿಯಾಗದೆ ಜನಸಾಮಾನ್ಯರ ಮನದಾಳದಲ್ಲಿ ಬೇರೂರುವ ಕೊಡುಗೆಯನ್ನು ಶಿಲ್ಪಕ್ಷೇತ್ರದಲ್ಲಿ ನೀಡಿದ್ದಾರೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ಅವರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರಪಾಲಿಕೆ ವಿಶ್ವಕರ್ಮ ಸಮಾಜದ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ಧ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಯಾವುದೇ ಆಧುನಿಕ ಆರ್ಕಿಟೆಕ್ಚರ್ ಮಾದರಿಗಳು, ಕಟ್ಟಡ ನಿರ್ಮಾಣ ಉಪಕರಣ, ಕೌಶಲಗಳು ವಿಶ್ವದ ಜನರಿಗೆ ಲಭ್ಯವಿಲ್ಲದ ಸಂದರ್ಭದಲ್ಲಿ ಅತ್ಯುತ್ತಮ ವಾಸ್ತುವಿನ್ಯಾಸವನ್ನು ಜನಾಂಗದ ಶಿಲ್ಪಿಗಳು ಜಗತ್ತಿಗೆ ಪರಿಚಯಿಸಿರುವುದು ವಿಸ್ಮಯವೇ ಸರಿ. ಶಿಲ್ಪಕಲಾ ಕೌಶಲ್ಯ ಕುರಿತಂತೆ ಕನ್ನಡ ಸಾಹಿತ್ಯ ಪರಿಷತ್‍ನವರೇ ನೇತೃತ್ವ ವಹಿಸಿ ಕನ್ನಡಭವನದಲ್ಲಿ ಸಮುದಾಯ ಶಿಲ್ಪಿಗಳು ಇತರೆ ಕಲಾವಿದರನ್ನು ಕರೆಸಿ ಕಾರ್ಯಗಾರ ಏರ್ಪಡಿಸಿ.ಅದಕ್ಕಾಗುವ ವ್ಯವಸ್ಥೆಯನ್ನು ತಾವೇ ಮಾಡಿಕೊಡುವುದಾಗಿ ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕರಾದ ಡಾ.ಕೆ.ವಿ.ಕೃಷ್ಣಮೂರ್ತಿ ಅವರು ಮುಖ್ಯ ಭಾಷಣ ಮಾಡಿ ಅಮರಶಿಲ್ಪಿ ಜಕಣಾಚಾರಿ ಜನಪದೀಯ ದಂತ ಕಥೆಯಾಗಿ ಮೇರುಶಿಲ್ಪಿಯಾಗಿ ನಾಡಿಗೆ ಭವ್ಯ ಕೊಡುಗೆ ನೀಡಿದ್ದಾರೆ. ಅವರು ಕಾಲ್ಪನಿಕ ವ್ಯಕ್ತಿಯೆಂದು ಕೆಲವರು ವಾದಿಸುತ್ತಾರೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಶಿಲ್ಪಿಗಳ ಕೇವಲ ವಿಗ್ರಹ ತಯಾರಿಕರಲ್ಲ. ಅವರು ನಾಡಿನ ಸಾಂಸ್ಕøತಿಕ ರಾಯಭಾರಿಗಳು. ಅದರಲ್ಲೂ ಅಮರಶಿಲ್ಪಿ ಜಕಣಾಚಾರಿ ತುಮಕೂರಿನ ಕೈದಾಳದವರಾಗಿರುವುದು ಇಡೀ ಕರುನಾಡೇ ಹೆಮ್ಮೆ ಪಡುವ ಸಂಗತಿ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಅಧಿಕಾರಿ ಸುರೇಶ್, ಚಿನ್ನಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಶಶಿಧರ್, ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ವಿ.ಗಂಗರಾಜಚಾರ್, ಉಪಾಧ್ಯಕ್ಷ ಗೋವರ್ಧನಚಾರ್, ಊರ್ಡಿಗೆರೆ, ಚಂದ್ರಚಾರ್, ವಿರೂಪಾಕ್ಷಚಾರ್, ಗೋಪಾಲಕೃಷ್ಣಚಾರ್, ಚೇತನ್, ಭಾಸ್ಕರ್, ಜಯಪ್ರಕಾಶ್, ಟಿ.ಎಚ್.ನವೀನ್, ಪುರೋಹಿತ ಶಿರೋಮಣಿ ಪ್ರಭಾಕರಚಾರ್, ನಾಗರಾಜಚಾರ್, ಶಂಕರಾಚಾರ್ ಸೇರಿದಂತೆ ಸಮಾಜದ ಹಲವು ಪ್ರಮುಖರು ಪಾಲ್ಗೊಂಡರು.

(Visited 4 times, 1 visits today)