ಶಬರಿಮಲೆ:

       ಭಾರೀ ಹೋರಾಟ, ಪರ- ವಿರೋಧಗಳ ಬಳಿಕ ಕೊನೆಗೂ ಶಬರಿಮಲೆಯಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಸುಪ್ರೀಂ ತೀರ್ಪಿನ ಬಳಿಕ ಇದೇ ಮೊದಲ ಬಾರಿ ಇಬ್ಬರು ಮಹಿಳಾ ಭಕ್ತರು ಅಯ್ಯಪ್ಪನ ದೇಗುಲ ಪ್ರವೇಶಿಸಿದ್ದಾರೆ.

       ಶತಮಾನಗಳಿಂದ ನಡೆದು ಬಂದ ಸಂಪ್ರದಾಯಕ್ಕೆ ಕೊನೆಗೂ ಬ್ರೇಕ್ ಬಿದ್ದಿದ್ದು, ಹೊಸ ವರ್ಷದ ಆರಂಭದಲ್ಲಿ 40 ವರ್ಷದ ಇಬ್ಬರು ಮಹಿಳೆಯರು ಪೊಲೀಸ್ ಬಿಗಿ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದ್ದಾರೆ. ಮಕರ ಸಂಕ್ರಾಂತಿ ವೇಳೆಗೆ ದೇಗುಲ ಪ್ರವೇಶಿಸಬೇಕೆಂಬ ನಿಟ್ಟಿನಲ್ಲಿ ಮಹಿಳಾ ಕ್ರಾಂತಿ ಆರಂಭವಾಗಿತ್ತು. ಆದರೀಗ ತೀವ್ರ ವಿರೋಧದ ನಡುವೆಯೂ ಬುಧವಾರ ಮುಂಜಾನೆ 3.45ಕ್ಕೆ ಮಹಿಳೆಯರು ದೇಗುಲ ಪ್ರವೇಶಿಸಿದ್ದಾರೆ. ದೇಗುಲ ಪ್ರವೇಶಿಸಿದ ಮಹಿಳೆಯರನ್ನು ಕನಕದುರ್ಗಾ ಹಾಗೂ ಬಿಂದು ಎಂದು ಗುರುತಿಸಲಾಗಿದ್ದು, ತಾವು ದೇಗುಲ ಪ್ರವೆಶಿಸುತ್ತಿರುವ ವಿಡಿಯೋವನ್ನು ಖುದ್ದು ಮಹಿಳೆಯರೇ ಬಹಿರಂಗಪಡಿಸಿದ್ದಾರೆ ಹಾಗೂ ಸುಪ್ರೀಂ ತೀರ್ಪಿನ ಬಳಿಕವೂ ಅಸಾಧ್ಯವೆನ್ನಲಾಗುತ್ತಿದ್ದ ಕಾರ್ಯವನ್ನು ಮಾಡಿದ್ದಾರೆ.

       ಇನ್ನು ಗುರುವಾದಂದು ಮಹಿಳಾ ಸಮಾನತೆ ಹಾಗೂ ದೇಗುಲ ಪ್ರವೇಶಿಸಲು ಅವಕಾಶ ಕಲ್ಪಿಸುವ ಸಲುವಾಗಿ ಬರೋಬ್ಬರಿ 620 ಕಿ. ಮೀಟರ್ ದೂರದ ಬೃಹತ್ ಮಹಿಳಾ ಸರಪಳಿ ನಿರ್ಮಿಸಲಾಗಿತ್ತು ಎಂಬುವುದು ಗಮನಾರ್ಹ.

(Visited 16 times, 1 visits today)