ಗುಬ್ಬಿ : 

      ಕೆಲ ದುಷ್ಟಶಕ್ತಿಗಳು ಈ ಸಮಾಜವನ್ನು ಒಡೆಯುವ ಹಂತದಲ್ಲಿದ್ದು ಈಗಲಾದರೂ ಸಮಾಜವನ್ನು ಮುನ್ನಡೆಸುವ ಪ್ರಯತ್ನ ಯುವಜನಾಂಗದ ಮೇಲಿದೆ ಎಂದು ರಾಜ್ಯ ಭಾರತೀಯ ಜನತಾ ಪಕ್ಷದ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಸಮಾಜದ ಯುವಕರಿಗೆ ಎಚ್ಚರಿಕೆ ನೀಡಿದರು.

      ನಿಟ್ಟೂರು ಹೋಬಳಿಯ ಬಾಗೂರು ಗೇಟ್‍ನ ಸಮೀಪವಿರುವ ಬೆಟ್ಟದಹಳ್ಳಿ ಗವೀಮಠದಿಂದ ಆಯೋಜಿಸಲಾದ 846ನೇ ಸಿದ್ದರಾಮೇಶ್ವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಧರ್ಮ ಜಾಗೃತಿಗಾಗಿ ಅನೇಕ ಸಂತರುಗಳು ತಮ್ಮ ಜೀವಿತಾವಧಿಯನ್ನು ಕಳೆದಿದ್ದು ಈ ನೆಲದಲ್ಲಿ ನಡೆದಾಡುವ ದೇವರಾದ ಶ್ರೀ ಶ್ರೀ ಸಿದ್ದಗಂಗಾ ಶ್ರೀಗಳ ಆರ್ಶೀವಾದವಿದ್ದು ಇಲ್ಲಿಯವರೆಗೂ ನಡೆದಂತಹ ಜಯಂತೋತ್ಸವಕ್ಕಿಂತ ಲಕ್ಷಾಂತರ ಭಕ್ತರನ್ನು ಜಯಂತೋತ್ಸವದ ಅಧ್ಯಕ್ಷರಾದ ಚಂದ್ರಶೇಖರ ಮಹಾಸ್ವಾಮಿಗಳ ಅಪಾರ ನಂಬಿಕೆ ಹಾಗೂ ರಾಜ್ಯದ ಮಠಾಧೀಶರುಗಳ ಆರ್ಶೀವಾದದಿಂದ ಇಂತಹ ಅಭೂತಪೂರ್ವ ಜಯಂತೋತ್ಸವವನ್ನು ಆಚರಿಸುತ್ತಿರುವುದು ಈ ಸಮಾಜದ ಒಳಿತಿಗಾಗಿ ಎಂದು ತಿಳಿಸಿದರು.

      ಈ ರಾಜ್ಯದಲ್ಲಿ ಈ ಸಮಾಜದ ಮುಖಂಡರುಗಳು ಯಾರು ನಾಯಕರಾಗಬಾರದೆಂಬ ಕಲ್ಪನೆ ಕೆಲವರಲ್ಲಿದೆ. ರಾಜ್ಯದ ಜನರು ಬರದ ಭೀತಿ, ನೀರಿನ ತೊಂದರೆಯಿಂದ ಬಳಲುತ್ತಿದ್ದರೂ ಯಾವುದೇ ಅಭಿವೃದ್ದಿಕಾರ್ಯಗಳನ್ನು ಮಾಡದೆ ಕೇವಲ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಸರ್ಕಸ್ ನಡೆಸುತ್ತಿದ್ದಾರೆ. ಕೇಂದ್ರದ ನರೇಂದ್ರಮೋದಿಯವರ ಕನಸನ್ನು ನಸಸು ಮಾಡುವ ಜವಾಬ್ದಾರಿ ಇಂದಿನ ಯುವಸಮಾಜದ ಮೇಲಿದೆ. ಬಿ.ಎಸ್.ಯಡಿಯೂರಪ್ಪನವರ ಕನಸು ಸಮಾಜದ ಯಾವುದೇ ವ್ಯಕ್ತಿಯೂ ತಳಮಟ್ಟದಲ್ಲಿರಬಾರದು. ರೈತರು ಸುಖೀ ಜೀವನ ನಡೆಸುವಂತಾಗಬೇಕು. ನಿರುದ್ಯೋಗಿ ಯುವಕರಿಗೆ ಉದ್ಯೋಗವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ನಮ್ಮ ಅಪ್ಪಾಜಿಯವರು ಶ್ರಮಸುತ್ತಿದ್ದಾರೆ ಎಂದರು.

      ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಟ್ಟದಹಳ್ಳಿ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ಗುಬ್ಬಿ ತಾಲ್ಲೂಕಿಗೂ ಶಿವಯೋಗಿ ಸಿದ್ದರಾಮರಿಗೂ ಭೌತಿಕ ಸಂಪರ್ಕವಿದ್ದು ಇವರು ತಮ್ಮ ಕಡೆಯ ದಿನಗಳಲ್ಲಿ ನಮ್ಮ ತಾಲ್ಲೂಕಿನ ಕಾರೇಕುರ್ಚಿಯ ದೊಣೆ ಎಂಬಲ್ಲಿ ಉಗ್ರ ತಪಸ್ಸನ್ನು ಮಾಡಿದ ಇತಿಹಾಸವಿದೆ. ಯಾವುದೇ ಮನುಷ್ಯನು ಜಾತಿಬೇಧ ಮರೆತು ಗುರುಹಿರಿಯರಲ್ಲಿ ಹೆಚ್ಚಿನ ಭಕ್ತಿ ಇಟ್ಟು ದೇವರನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸುವ ಅಗತ್ಯವಿದೆ ಎಂದ ಅವರು ಶರಣ ಸಮಾಜದಲ್ಲಿ ಅತಿ ಹೆಚ್ಚಿನ ಮಹತ್ವ ಪಡೆದ ಸಿದ್ದರಾಮರ ಜಯಂತಿಯನ್ನು ಸುಮಾರು ದೇಶದ ನಾನಾ ಭಾಗದಿಂದ ಬಂದಂತಹ ಲಕ್ಷಾಂತರ ಜನರು ಸಿದ್ದರಾಮರ ಆಶೀರ್ವಾದ ಪಡೆದಿದ್ದು ನಾನಾ ಭಾಗಗಳಿಂದ ಬಂದ ಮಠಾಧೀಶರುಗಳು ಆರ್ಶೀವಾದವನ್ನು ಈ ಸಮಾರಂಭದಲ್ಲಿ ಪಡೆದಿದ್ದು ಇದರಿಂದ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಲು ಎಲ್ಲಾ ರಾಜಕಾರಣಿಗಳು ತಮ್ಮ ರಾಜಕೀಯ ಇಚ್ಛಾಶಕ್ತಿಯನ್ನು ಮರೆತು ಒಂದಾಗಿ ಸಮಾಜದ ಏಳಿಗೆಯನ್ನು ಕಾಪಾಡಬೇಕೆಂದು ತಿಳಿಸಿದರು.

      ಇದೇ ಸಂದರ್ಭದಲ್ಲಿ ನಿಟ್ಟೂರಿನಿಂದ 1008 ಧ್ವಜ ಹಾಗೂ 1008 ಕುಂಭಕಳಸ ಹಾಗೂ ವಿವಿಧ ಜಾನಪದ ಕಲಾಮೇಳದೊಂದಿಗೆ ಹಾಗೂ ಗುಬ್ಬಿ ಚನ್ನಬಸವೇಶ್ವರ ದೇವಾಲಯದಿಂದ 101 ಟ್ರಾಕ್ಟರ್‍ಗಳ ಮೆರವಣಿಗೆ ನಡೆಯಿತು. ವೇದಿಕೆಯ ಆವರಣದಲ್ಲಿ ವಿವಿಧ ಇಲಾಖೆಗಳಿಂದ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. 2 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

(Visited 28 times, 1 visits today)