ಸಿಡಿಲ ಮುನ್ಸೂಚನೆಗೆ ಧಾಮಿನಿ ಆ್ಯಪ್

ಹುಳಿಯಾರು:

      ಹವಾಮಾನ ವೈಪರೀತ್ಯ ಪರಿಸ್ಥಿತಿಗಳಾದ ಪ್ರವಾಹ ಅನಾವೃಷ್ಟಿ, ಮಿಂಚು, ಭಾರಿ ಮಳೆ, ಶೀತ ಅಲೆಗಳು ಮತ್ತು ಶಾಖದ ಅಲೆಗಳು ಮಿಂಚಿನ ಹೊಡೆತಗಳು ಈ ಎಲ್ಲಾ ವೈಪರೀತ್ಯಗಳಿಂದಾಗಿ ಭಾರತದಲ್ಲಿ 1,562 ಜನರು ಮೃತಪಟ್ಟಿದ್ದಾರೆ. ಅದರಲ್ಲಿ 75 ಜನರು ಮಿಂಚಿನ ಹೊಡೆತಕ್ಕೆ ಮೃತಪಟ್ಟಿದ್ದಾರೆ. (2019 ರ ಕ್ಲೈಮೆಟ್ ಆಫ್ ಇಂಡಿಯಾ ವರದಿಯ ಪ್ರಕಾರ) ಹವಾಮಾನ ಬದಲಾವಣೆಯು ಇಂದಿನ ಅತಿದೊಡ್ಡ ಸಮಸ್ಯೆಯಾಗಿದೆ ಮತ್ತು ಇದು ಮಾನವ ಕುಲದ ಮೂಲಭೂತ ಉಳಿವನ್ನು ಪ್ರಶ್ನಿಸುತ್ತದೆ. ಬರ ಮತ್ತು ಪ್ರವಾಹವು ರೈತರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಮತ್ತು ನಮ್ಮ ಆಹಾರ ಮತ್ತು ನೀರು ಸರಬರಾಜಿನ ಮೇಲೆ ಹವಾಮಾನ ಬದಲಾವಣೆಯನ್ನು ಪರಿಹರಿಸಲು ಮತ್ತು ಅಧ್ಯಯನ ಮಾಡಲು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ವಿಶ್ವದ ಅತ್ಯುತ್ತಮ ತಂತ್ರಜ್ಞಾನಗಳು ಸಹ ಪ್ರಯೋಜನಕಾರಿಯಾಗುವುದಿಲ್ಲ.

      ಈ ನಿಟ್ಟಿನಲ್ಲಿ ಭಾರತ ಸರ್ಕಾರದ ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ ಮತ್ತು ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ “ದಾಮಿನಿ” ಎಂಬ ಮೊಬೈಲ್ ಆಧಾರಿತ ಅಪ್ಲಿಕೇಶನ್ ಬಿಡುಗಡೆಗೊಳಿಸಿದೆ. ಈ ಆ್ಯಪ್‍ನ್ನು ಪ್ರತಿಯೊಬ್ಬ ರೈತರು ಮತ್ತು ಜನ ಸಾಮಾನ್ಯರೂ ತಮ್ಮ ಸ್ಮಾರ್ಟ್ ಪೋನ್‍ನ ಪ್ಲೇಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಅದರಲ್ಲಿ ಬಳಕೆದಾರರ ಹೆಸರು, ದೂರವಾಣಿ ಸಂಖ್ಯೆ, ವಿಳಾಸ, ಪಿನ್ ಕೋಡ್ ಮತ್ತು ಉದ್ಯೋಗ ನೊಂದಾಯಿಸಬೇಕು ನಂತರ ನೊಂದಾಯಿತ ಬಳಕೆದಾರರು ಮಿಂಚಿನ ಮುನ್ಸೂಚನೆಯ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಈ ಆ್ಯಪ್‍ನ ಮೂಲಕ ಒಬ್ಬ ವ್ಯಕ್ತಿಯು 20 ಕಿ.ಮೀ ವ್ಯಾಪ್ತಿಯಲ್ಲಿರುವಾಗ 30-45 ನಿಮಿಷಗಳ ಮೊದಲು ಎಚ್ಚರಿಕೆಯ ಸಂದೇಶವನ್ನು ನೀಡುತ್ತದೆ ಇದರಲ್ಲಿ ಯಾವ ಸ್ಥಳಗಳಲ್ಲಿ ಇರಬಾರದು ಎಂಬ ಮಾಹಿತಿಯ ಜೊತೆಗೆ ಮಿಂಚು ಹೊಡೆದಾಗ ಕೈಗೊಳ್ಳಬಹುದಾದ ಪ್ರಥಮ ಚಿಕಿತ್ಸೆಯ ವಿವರವನ್ನೂ ಒದಗಿಸುತ್ತದೆ. ಈ ಮೂಲಕ ಜನರು ಸುರಕ್ಷಿತವಾಗಿ ಸ್ಥಳಗಳಿಗೆ ಹೋಗಲು ಸಹಾಯವಾಗುತ್ತದೆ.

      ಹೆಚ್ಚಿನ ಮಾಹಿತಿಗೆ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಹಾಗೂ ನೋಡಲ್ ಅಧಿಕಾರಿಗಳು, ಜಿಲ್ಲಾ ಕೃಷಿ ಹವಾಮಾನ ಘಟಕ, ಕೃಷಿ ವಿಜ್ಞಾನ ಕೇಂದ್ರ, ಬಿದರೆಗುಡಿ, ತಿಪಟೂರು ತಾ, ತುವiಕೂರು ಜಿಲ್ಲೆ. ದೂ: 08134-298955, 9945258009, 9739055194, ಮೇಲ್:  kvktumkur@gmail.com ಸಂಪರ್ಕಿಸಬಹುದಾಗಿದೆ.

(Visited 3 times, 1 visits today)

Related posts

Leave a Comment