ಸಿದ್ದಗಂಗಾ ಮಠಕ್ಕೆ ಮೈಸೂರು ರಾಜವಂಶಸ್ಥರ ಭೇಟಿ!!

ತುಮಕೂರು :

     ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಮೈಸೂರು ಸಂಸ್ಥಾನದ ಕೊನೆಯ ರಾಜ ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಾಬ್ದಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮೈಸೂರು ಸಂಸ್ಥಾನದ ರಾಜವಂಶಸ್ಥರು ಜಯಚಾಮರಾಜೇಂದ್ರ ಒಡೆಯರ್ ಅವರ ಅಳಿಯ ರ್. ರಾಜಚಂದ್ರ, ಒಡೆಯರ್ ಮೊಮ್ಮಗ ವರ್ಚಸ್ವಿ ಎಂ.ಆರ್. ಅರಸು ಅವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.

      ನಂತರ ಧ್ಯಾನ ಮಂದಿರಲದಲ್ಲಿ ಸ್ವಲ್ಪ ಸಮಯ ಧ್ಯಾನ ಮಾಡಿದರು. ಶಿವಕುಮಾರ ಸ್ವಾಮೀಜಿ ವಾಸಿಸುತ್ತಿದ್?ದ ಹಳೆಯ ಮಠಕ್ಕೆ ಭೇಟಿ ನೀಡಿ ಪೂಜಾ ಸ್ಥಳ, ಆಸೀನ ಸ್ಥಳಗಳನ್ನು ವೀಕ್ಷಿಸಿದರು. ನಂತರ ಸಿದ್ದಗಂಗಾ ಮಠದ ದಾಸೋಹ ಮಂದಿರ, ಉಗ್ರಾಣ ಸ್ಥಳ, ?ಡಿಗೆ ಮನೆ ಮೊದಲಾದ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

      ಶ್ರೀಮಠದಲ್ಲಿ ಪ್ರಸಾದ ಸ್ವೀಕರಿಸಿದ ಒಡೆಯರ್ ಅವರ ಅಳಿಯ ಆರ್. ರಾಜಚಂದ್ರ, ಮೊಮ್ಮಗ ವರ್ಚಸ್ವಿ ಎಂ.ಆರ್. ಅರಸು ಅವರು ಸಿದ್ದಗಂಗಾ ಬೆಟ್ಟಕ್ಕೆ ಹೋಗಿ ಸಿದ್ದಲಿಂಗೇಶ್ವ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ರಾಜವಂಶಸ್ಥರು ಭೇಡಿ ನೀಡಿದ ಸಂದರ್ಭದಲ್ಲಿ ಸ್ವಾಮೀಜಗಳು ಇಲ್ಲದ ಕಾರಣ ಮಠದ ಆಡಳಿತಾಧಿಕಾರಿ ಶಿವಣ್ಣ ಅವರೊಂದಿಗೆ ಇದ್ದು ಮಠದ ಎಲ್ಲಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

      ಕೆಪಿ. ಲಕ್ಷ್ಮೀಕಾಂತರಾಜೇ ಅರಸು, ರಾಜವಂಶಸ್ಥರೊಂದಿಗೆ ಇದ್ದು ಇತರರು ಸಹಕರಿಸಿದರು. ಹೆಚ್.ಆರ್. ವಿಕೇಶ್, ವೀರಶೈರ ಸಮಾಜದ ಅಖಿಲ್ ಉಪಸ್ಥಿತರಿದ್ದರು.

(Visited 68 times, 1 visits today)

Related posts