ಹಂದಿಗಳ ವಾಸಸ್ಥಾನವಾದ ಮಧುಗಿರಿಯ ಅಂಗನವಾಡಿ ಕೇಂದ್ರ

ಮಧುಗಿರಿ:

      ಚಿಕ್ಕ ಮಕ್ಕಳಿರುವ ಅಂಗನವಾಡಿ ಸುತ್ತಮುತ್ತ ಪರಿಸರ ಶುಭ್ರವಾಗಿ ಇರಬೇಕು, ಆದರೆ ಪಟ್ಟಣದ ಎಂಟನೇ ವಾರ್ಡಿನಲ್ಲಿರುವ ಅಂಗನವಾಡಿ ಕೇಂದ್ರದ ಸುತ್ತಲೂ ಪರಿಸರ ಕಲುಷಿತದಿಂದ ಕೂಡಿದೆ.

      ನಿರೀಕ್ಷಣಾ ಮಂದಿರ ಮುಂಭಾಗದ ರಸ್ತೆಯಿಂದ ಜಿಲ್ಲಾ ಪಂಚಾಯತ್ ಇಇ ಕಚೇರಿಯ ಹಿಂಭಾಗವಿರುವ ಬೆಂಕಿಪುರ ಅಂಗನವಾಡಿ ಕೇಂದ್ರದ ಸಮೀಪದಲ್ಲೇ ಹಂದಿಗಳ ವಾಸ ಸ್ಥಳವಾಗಿದ್ದು. ರಸ್ತೆಯೂ ಸರಿ ಇಲ್ಲ, ಹಂದಿಗಳು ವಾಸ ಸ್ಥಳವಾಗಿರುವುದರಿಂದ ಮಕ್ಕಳಿಗೆ ಎಲ್ಲಿ ಮೆದುಳು ಜ್ವರ ಬರುವುದೆಂಬ ಆತಂಕ ಪೋಷಕರಲ್ಲಿ ಉಂಟಾಗಿದೆ.

      ಇತ್ತೀಚೆಗೆ ಜಂತುಹುಳು ನಿವಾರಣಾ ಕಾರ್ಯಕ್ರಮದ ಉದ್ಘಾಟನೆಯನ್ನು ಈ ಅಂಗನವಾಡಿ ಕೇಂದ್ರದಿಂದಲೇ ಆರಂಭಿ ಸಬೇಕೆಂದು ತಹಶಿಲ್ದಾರರು ಸ್ಥಳ ನಿಗದಿಪಡಿಸಿದ್ದರು. ಆದರೆ ಇಲ್ಲಿನ ಅವ್ಯವಸ್ಥೆ ಕಂಡು ಈ ಕಾರ್ಯಕ್ರಮವನ್ನು ನಿರೀಕ್ಷಣಾ ಮಂದಿರಕ್ಕೆ ಸ್ಥಳಾಂತರಿಸಲಾಯಿತು. ಉಪವಿಭಾಗಾಧಿಕಾರಿಗಳು ಏನಾದರೂ ಈ ಸ್ಥಳಕ್ಕೆ ಭೇಟಿ ನೀಡಿದರೆ ವಾಸ್ತವಾಂಶ ಅರಿಯುತ್ತಿದ್ದರೂ ಇದಕ್ಕೆ ಅವಕಾಶವೇ ದೊರೆಯಲಿಲ್ಲ. ಇನ್ನೂ ಸಿಡಿಪಿಒ ಕಚೇರಿ ಸಮೀಪದಲ್ಲಿದ್ದರೂ, ಈ ಅಂಗನವಾಡಿ ಕೇಂದ್ರಕ್ಕೆ ಒಮ್ಮೆಯೂ ಸಿಡಿಪಿಒ ಭೇಟಿ ನೀಡಿದಂತೆ ಕಾಣುತ್ತಿಲ್ಲ. ಕಟ್ಟಡದ ಸ್ಥಿತಿ ಉತ್ತಮವಾಗಿದೆ ಆದರೂ ಪರಿಸರ ಮಾತ್ರ ಕಲುಷಿತಗೊಂಡಿದೆ ಎಂದು ಅಲ್ಲಿನ ನಿವಾಸಿಗಳ ದೂರಾಗಿದೆ.

(Visited 13 times, 1 visits today)

Related posts