ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3 ಅಪರಿಚಿತ ಶವ ಪತ್ತೆ

ತುಮಕೂರು:

      ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಅಪರಿಚಿತ ವ್ಯಕ್ತಿಗಳು ಮೃತಪಟ್ಟಿದ್ದು, ಮೃತರ ವಿಳಾಸ ಪತ್ತೆಯಾಗಿರುವುದಿಲ್ಲ ಎಂದು ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ.

      ಪ್ರಕರಣ 1:

      ಲಕ್ಷ್ಮಿಪುರ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸುಮಾರು 45 ವರ್ಷದ ವ್ಯಕ್ತಿಯು ಯಾವುದೋ ಕಾಯಿಲೆಯಿಂದ ಅಸ್ವಸ್ಥನಾಗಿದ್ದು, ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೇ 23ರಂದು ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯು ಸುಮಾರು 166 ಸೆಂ.ಮೀ ಎತ್ತರ, ದುಂಡು ಮುಖ. ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದು, ಮೃತನ ಬಲಕೈನ ಮೊಣಕೈಯಲ್ಲಿ ಹಿಂದಿಯಲ್ಲಿ ವಿನೋದ, ಎಸ್.ಎಮ್ ಹಚ್ಚೆ ಇರುತ್ತದೆ. ಮೃತನ ಮೈ ಮೇಲೆ ಆಕಾಶ್ ನೀಲಿ ಬಣ್ಣದ ಆರ್ಧತೋಳಿನ ಟೀ ಶರ್ಟ್, ಹಳದಿ ಬಣ್ಣದ ಬರ್ಮಡ ಇರುತ್ತದೆ.

      ಪ್ರಕರಣ 2:

      ಹಳೇವೂರು ಗ್ರಾಮದಲ್ಲಿ ಶ್ರೀ ಹುಲಿಯೂರಮ್ಮ ದೇವಸ್ಥಾನದ ಬಳಿ ಬಿಕ್ಷಾಟನೆ ಮಾಡುತ್ತಿದ್ದ ಸುಮಾರು 45 ವರ್ಷದ ವ್ಯಕ್ತಿಯು ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ 2019ರ ಸೆಪ್ಟೆಂಬರ್ 10ರಂದು ಮೃತಪಟ್ಟಿದ್ದು, ಮೃತನ ವಿಳಾಸ ಬಗ್ಗೆ ಪತ್ತೆಯಾಗಿರುವುದಿಲ್ಲ.

      ಮೃತ ವ್ಯಕ್ತಿಯು ಸುಮಾರು 5.2 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದು, ಮೃತನ ಎಡಕೈ ಮತ್ತು ಬಲಕೈನಲ್ಲಿ ರತ್ನ, ಚಾಮುಂಡಿ ಹಚ್ಚೆ ಇರುತ್ತದೆ.

     ಪ್ರಕರಣ 3:

      ಹುಲಿಯೂರು ದುರ್ಗ ಟೌನ್‍ನಲ್ಲಿರುವ ಸರ್ಕಾರಿ ಶಾಲೆಯ ಆವರಣದ ಗೇಟ್ ಬಳಿ ಮಲಗಿದ್ದ ಜಾಗದಲ್ಲಿಯೇ ಫೆಬ್ರವರಿ 28ರಂದು ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿಯು ಮೃತಪಟ್ಟಿದ್ದು, ಮೃತನ ವಾರಸುದಾರರ ಬಗ್ಗೆ ಪತ್ತೆಯಾಗಿರುವುದಿಲ್ಲ. ಮೃತ ವ್ಯಕ್ತಿಯು ಸುಮಾರು 5.3 ಅಡಿ ಎತ್ತರ, ಕೋಲು ಮುಖ, ಸಾಧಾರಣ ಕಪ್ಪು ಮೈಬಣ್ಣ, ಎಡಕೈ ಮೇಲೆ ನಾಗ ಎಂಬ ಅಚ್ಚೆ ಇರುತ್ತದೆ. ಮೃತನ ಮೈ ಮೇಲೆ ಹೂವಿನ ಡಿಸೈನ್ ಶರ್ಟ್, ಸಿಮೆಂಟ್ ಬಣ್ಣದ ಜೀನ್ಸ್ ಪ್ಯಾಂಟ್ ಇರುತ್ತದೆ.

      ಮೃತರ ವಾರಸುದಾರರ ಯಾರಾದರೂ ಇದ್ದಲ್ಲಿ ದೂರವಾಣಿ ಸಂಖ್ಯೆ: 0816-2278000/ 08132-22-294/948082922, 08132-220229/94808802936, 08132-223338/ 9480802964 ಅನ್ನು ಸಂಪರ್ಕಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

(Visited 14 times, 1 visits today)

Related posts