ಹುಳಿಯಾರು : ಜಮೀನಿನಲ್ಲಿ ಆಕಸ್ಮಿಕ ಬೆಂಕಿ

ಹುಳಿಯಾರು :

       ಹುಳಿಯಾರು ಸಮೀಪದ ಮತಿಘಟ್ಟದ ಪೆಟ್ರೋಲ್ ಬಂಕ್ ಬಳಿ ನೂರಾರು ಎಕರೆ ಜಮೀನಲ್ಲಿ ಬೆಂಕಿ ತಗುಲಿದ ಘಟನೆ ಮಂಗಳವಾರ ನಡೆದಿದೆ.ಪೆಟ್ರೋಲ್ ಬಂಕ್ ಹತ್ತಿರ ಇದಕಿದ್ದ ಹಾಗೆ ಜಮೀನಿನಲ್ಲಿ ರಾಗಿ ಕಟಾವು ಮಾಡಿ ಬಿಟ್ಟಿದ್ದ ರಾಗಿ ಕೂಳೆಗೆ ಬೆಂಕಿ ತಗುಲಿದೆ. ಮೊದಲೆ ಬಿಸಿಲಿಗೆ ರಾಗಿ ಕೂಳೆ ಒಣಗಿದ್ದ ಕ್ಷಣಾರ್ಧದಲ್ಲಿ ನೂರಾರು ಎಕರೆ ಜಮೀನನ್ನು ಆವರಿಸಿಕೊಂಡಿದೆ.

      ಬೈಕ್‍ಗೆ ಪೆಟ್ರೋಲ್ ಹಾಕಿಸಲು ಬಂದಿದ್ದ ಬೈಕ ಸವಾರರೊಬ್ಬರು ಇದನ್ನು ಗಮನಿಸಿ ಹಂದನಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪರಿಣಾಮ ಪಿಎಸ್‍ಐ ಶಿವಕುಮಾರ್ ಸ್ಥಳಕೆ ಆಗಮಿಸಿ ಅಗ್ನಿಶಾಮಕ ದಳದವರನ್ನು ಕರೆಸಿ ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿ ಮುಂದಿನ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.

(Visited 18 times, 1 visits today)

Related posts

Leave a Comment