ತಿಪಟೂರು :

      ಸಾರ್ವಜನಿಕ ವಲಯದಲ್ಲಿ ಲೈಸನ್ಸ್ ಯಿಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದ ಹಾಗೂ ಸಾಗಣಿಕೆ ಮಾಡುತ್ತಿದ್ದ ವ್ಯಕ್ತಿ ಹಾಗೂ ಅಂಗಡಿಗಳ ಮೇಲೆ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ವಶಪಡಿಸಿಕೊಂಡು ನ್ಯಾಯಲಯಕ್ಕೆ ಒಪ್ಪಿಸಿದ ಅನಧಿಕೃತ ಮದ್ಯವನ್ನು ಬಿದರೆಗುಡಿಯಲ್ಲಿ ಮಂಗಳವಾರ ಸಂಜೆ ಪರಿಸರಕ್ಕೆ ಹಾನಿಯಾಗದಂತೆ ನಾಶ ಮಾಡಲಾಯಿತು.

      ತಿಪಟೂರು ತಾಲ್ಲೂಕಿನ 185 ಪ್ರಕರಣಗಳಲ್ಲಿ 1054.710 ಲೀಟರ್ ಮದ್ಯ , 20.460 ಲೀಟರ್ ಬೀಯರ್ ಹಾಗೂ ತುರವೇಕೆರೆ ತಾಲ್ಲೂಕಿನ 58 ಪ್ರಕರಣಗಳಲ್ಲಿ 74.160 ಲೀಟರ್ ಮದ್ಯ, 12.900ಲೀಟರ್ ಬೀಯರ್ ಮೇಲೆ ದಾಳಿ ನೆಡಸಿ ಸುಮಾರು ಮೂರು ಲಕ್ಷದ ಐವತ್ತು ಸಾವಿರಕ್ಕೂ ಹೆಚ್ಚು ಮೌಲ್ಯದ ಅನಧಿಕೃತ ಮದ್ಯ ಹಾಗೂ ಬೀಯರ್‍ನÀನ್ನು ನಾಶಮಾಡಲಾಗಿದೆ ಎಂದು ತಿಪಟೂರು ಅಬಕಾರಿ ಉಪಧೀಕ್ಷಕರಾದ ಎಂ. ರಂಗಪ್ಪ ತಿಳಿಸಿದರು.

      ಅಬಕಾರಿ ಇನ್ಸ್‍ಪೆಕ್ಟರ್ ಕೃಷ್ಣಸ್ವಾಮಿ, ತುರವೇಕೆರೆ ಅಬಕಾರಿ ಇನ್ಸ್‍ಪೆಕ್ಟರ್ ಆನಂದ್, ಕೆ.ಎಸ್.ಬಿ.ಸಿ.ಎಲ್ ವ್ಯವಸ್ಥಾಪಕ ಸುಧೀಂದ್ರಕುಮಾರ್, ಕಂದಾಯ ಇಲಾಖೆಯ ರವಿಕುಮಾರ್, ಅಬಕಾರಿ ಸಿಬ್ಬಂದಿ ಮತ್ತಿತ್ತರು ಹಾಜರಿದ್ದರು.

(Visited 11 times, 1 visits today)