ತುಮಕೂರು


ಕಾರ್ಪೋರೇಟ್ ಬಂಡವಾಳದಾರರ ಪರವಾದ ಉದಾರವಾದಿ ನೀತಿಗಳು ದುಡಿಯುವ ಜನರನ್ನು ಅತ್ಯಂತ ನಿಕೃಷ್ಟ ಸ್ಥಿತಿಗೆ ತಳ್ಳಿವೆ. ಉದ್ಯೋಗದಿಂದ ಹೊರದೂಡಲ್ಪಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ನಿರುದ್ಯೋಗವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿ, ವಿದ್ಯಾವಂತ ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೋದಿ ಸರ್ಕಾರ ಕಾರ್ಪೊರೇಟ್ ಧಣಿಗಳ ತುಷ್ಟೀಕರಣಕ್ಕಾಗಿ 29 ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ, ನಾಲ್ಕು ಸಂಹಿತೆಗಳನ್ನಾಗಿಸಿದೆ. ಈ ಸಂಹಿತೆಗಳು ಕಾರ್ಮಿಕರಿಗೆ ಇದುವರೆಗೂ ಇದ್ದ ಹಕ್ಕುಗಳನ್ನು ನುಂಗಿಹಾಕಿವೆ. ಈ ಸಂಹಿತೆಗಳು ಕಾರ್ಮಿಕರ ಪ್ರತಿಭಟನೆಯ ಹಕ್ಕನ್ನು ಕಸಿದುಕೊಂಡು, ಶೋಷಣೆಯನ್ನು ತೀವ್ರಗೊಳಿಸಿವೆ. ಖಾಯಂ ಕೆಲಸಗಳಿಗೆ ತಿಲಾಂಜಲಿ ಇಡಲಾಗಿದೆ. ಬದಲಿಗೆ ನಿಗದಿತ ಅವಧಿ, ಓಜೆಟಿ, ನೀಮ್, ನೆಟಾಫ್ ಕಾರ್ಮಿಕರ ನೇಮಕಕ್ಕೆ ಕಾನೂನಿನ ರಕ್ಷಣೆ ಒದಗೀಸಲಾಗಿದೆ. ಕನಿಷ್ಟವೂ ಅಲ್ಲದ ಕೂಲಿ ಕೊಟ್ಟು ಗರಿಷ್ಟ ದುಡಿಮೆಗೆ ಹಚ್ಚಿ, ಲೂಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸಂಪತ್ತು ಕೆಲವೇ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕರಣಗೊಳ್ಳುತ್ತಿದೆ. ಪರಿಣಾಮ ಬಡತನ, ಹಸಿವು, ಅನಾರೋಗ್ಯ, ಅಪೌಷ್ಠಿಕತೆ ಹೆಚ್ಚುತ್ತಿದೆ. ಉಳ್ಳವರು ಮತ್ತು ಇಲ್ಲದವರ ನಡುವೆ ಭಾರಿ ಕಂದಕ ಸೃಷ್ಟಿಯಾಗುತ್ತಿದೆ. ಮತ್ತೋಂದು ಕಡೆಯಲ್ಲಿ ಕೇಂದ್ರ – ರಾಜ್ಯ ಸರ್ಕಾರದ ಸ್ಕಿಮ್ ಗಳಲ್ಲಿ 4 -5 ದಶಕಗಳಿಂದ ದುಡಿಯುತ್ತಿರು ನೌಕರರಿಗೆ ಕನಿಷ್ಟ ವೇತನ- ಸಾಮಾಜಿ ಭದ್ರತೆ,ಪಿಂಚಣಿ, ನೀಡದೆ ಅನ್ಯಾಯ ಎಸಗಿದೆ. ಅಸಂಘಟಿತ ಕ್ಷೇತ್ರ ದ ಕೋಟಿಗಟ್ಟಲೆ ಕಾರ್ಮಿಕರಿಗೆ ಏನು ಸೌಲಭ್ಯಗಳಿಲ್ಲದ ಇ- ಶ್ರಮ ಕಾರ್ಡ ನೀಡುತ್ತಿದೆ. ಅಸಂಘಟಿ ವಲದಲ್ಲಿ ಕಾರ್ಮಿಕರಿಗೆ / ಸ್ವಯಂ ಉದೋಗಿಗಳೀಗೆ ಸಮಗ್ರ ಶಾಸನ ಹಾಗು ಸಾಮಾಜಿಕ ಭದ್ರತೆ ಸರ್ಕಾರಗಳ ಅನುಧಾನ ಹೆಚ್ಚಳಕ್ಕೆ ಸಿಐಟಿಯು ಒತ್ತಾಯಿಸುತ್ತದೆ. ಗುತ್ತಿಗೆ ಕಾರ್ಮಿಕರ ಸರ್ಕಾರದ ಅಡಿಯಲ್ಲಿ ಜೀತದಾಳುಗಳಂತೆ ದುಡಿಸಲಾತುತ್ತಿದೆ. ಅಸ್ವತ್ರೆ, ಮುನಿಸಿಪಾಲಿಟಿ.ಗಳಲ್ಲಿ ಅತ್ಯಂತ ಕಠಿಣ ಸಮಯದಲ್ಲಿ ದುಡಿದವರಿಗೆ ಇನ್ನು ಕನಿಷ್ಟ ವೇತನ ಸಿಮಿತ ಗೊಳಿಸಲಾಗಿದೆ. ಈ ಕಾರ್ಮಿಕರಿಗೆ ಸಮಾನ ವೇತನ, ಸೇವೆಗಳ ಖಾಯಂಮಾತಿಗೆ ಸರ್ಕಾರಗಳು ತಯಾರಿಲ್ಲ.
ಕೊರೊನಾ ನಿಭಾಯಿಸುವಲ್ಲಿ ಸರ್ಕಾರ ವಿಫಲಾವಾಗಿದ್ದರ ಪರಿಣಾಮ, ಕೊಟ್ಯಾಂತರ ಜನ ಸರಿಯಾದ ಚಿಕಿತ್ಸೆ ಸಿಗದೇ ಹುಳಗಳಂತೆ ಅಸುನೀಗಿದ ದಾರುಣ ಸನ್ನಿವೇಶವನ್ನು ದೇಶ – ಜಗತ್ತು ಕಂಡಿದೆ. ಹೀಗಿದ್ದೂ ಆರೋಗ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ಕಾರ್ಪೊರೇಟ್‍ಗಳ ಕೈಗೆ ಒಪ್ಪಿಸಲು ಸರ್ಕಾರ ಶತ ಪ್ರಯತ್ನ ನಡೆಸಿದೆ.
ಕೇಂದ್ರ ರಾಜ್ಯ ಸರ್ಕಾರಗಳ ಬೆಲೆಏರಿಕೆ ನೀತಿಗಳು ಜನರನ್ನು ಹಿಂಡಿ ಹಿಪ್ಪೆ ಮಾಡಿವೆ. ದಿನಬಳಕೆಯ ಅಗತ್ಯ ವಸ್ತುಗಳಾದ ಆಹಾರ ಪದಾರ್ಥಗಳು, ತೈಲ ಬೆಲೆಗಳು, ಆರೋಗ್ಯ, ಶಿಕ್ಷಣ, ಸೇವೆ ಎಲ್ಲವೂ ದುಬಾರಿಯಾಗಿ ಜನರನ್ನು ಹೈರಾಣಾಗಿಸಿವೆ. ಸರ್ಕಾರಗಳ ರೈತಾಪಿ ಕೃಷಿ ವಿರೋಧಿ ನೀತಿಗಳಿಂದಾಗಿ ಅನ್ನದಾತನ ಆತ್ಮಹತ್ಯೆಗಳು ತೀವ್ರಗೊಂಡಿವೆ. ಸಾರ್ವಜನಿಕ ವಿತರಣಾ ವ್ಯವಸ್ಥೆ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಕಡಿತ ಮಾಡಲಾಗಿದೆ. ಎಲ್ಲ ಸೇವೆಗಳನ್ನು ಪೇ ಅಂಡ್ ಯೂಸ್ ಮಾಡಲಾಗಿದೆ. ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಅಪಮೌಲ್ಯಗೊಂಡು ಹಣದುಬ್ಬರ ಏರುತ್ತಲೇ, ಬೆಲೆಗಳು ಜನರನ್ನು ಸುಡುತ್ತಿವೆ.
ಜನವರಿ 18 ರಂದು ಬೆಳಿಗ್ಗೆ 10.00 ಗಂಟೆಗೆ ಧ್ವಜಾರೋಹಣದೊಂದಿಗೆ ಸಮ್ಮೇಳನ ಆರಂಭವಾಗಲಿದ್ದು, ನಂತರ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಿಐಟಿಯು ಸಂಘಟನೆಯ ವಿವಿಧ ವಿಭಾಗದ ಕಾರ್ಮಿಕರನ್ನು ಪ್ರತಿನಿಧಿಸಿ ಸುಮಾರು 1500 ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗಿಯಾಗುತ್ತಾರೆ. ವಿಶೇಷವಾಗಿ ‘ವಲ್ರ್ಡ್ ಫೆಡರೇಷನ್ ಆಫ್ ಟ್ರೇಡ್ ಯೂನಿಯನ್ಸ್’ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪಂಬಿಸ್ ಕಿರ್ತಿಸಿಸ್ (Pಚಿmbis ಏಥಿಡಿiಣsis) ಸಮ್ಮೇಳನಕ್ಕೆ ಶುಭಕೋರಿ ಮಾತನಾಡುವರು. ಜನವರಿ 19 ರಂದು ಕ್ಯೂಬಾ ಕ್ರಾಂತಿಯ ನಾಯಕ ಚೆ ಗೆವಾರ ಅವರ ಮಗಳು ಆಲಿಡಾ ಗೆವಾರ ಭಾಗವಹಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ನಾಯಕರು ಭಾಗವಹಿಸಿ ಶುಭಕೋರಿ ಮಾತನಾಡುವರು. ಇವರಿಗೆ ನಾಗರಿಕ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ.
ಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ಹಾಗೂ ರೈತಾಪಿ ಸಂಘಟನೆಗಳು ನಿರಂತರ ಹೋರಾಟ ನಡೆಸಿವೆ. ಸಂಘಟನೆ ಕರೆಕೊಟ್ಟ ಅಖಿಲ ಭಾರತ ಮುಷ್ಕರಗಳಲ್ಲಿ ಕೊಟ್ಯಾಂತರ ಕಾರ್ಮಿಕರು ಭಾಗವಹಿಸಿ ಪ್ರತಿರೋಧ ಒಡ್ಡಿದ್ದಾರೆ. ಆದರೆ ಸರ್ಕಾರ ಹೋರಾಟನಿರತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬದಲು ಚಳುವಳಿಯನ್ನು ಹತ್ತಿಕ್ಕುಲು ಪ್ರಯತ್ನಿಸಿತು. ಜತೆಗೆ ದುಡಿಯುವ ಜನರ ಐಕ್ಯತೆಯನ್ನು ಮುರಿಯಲು ಧಾರ್ಮಿಕ ವಿಚಾರಗಳನ್ನು ಮುನ್ನೆಲೆಗೆ ತಂದು ಜನರ ಬದುಕಿನ ಪ್ರಶ್ನೆಗಳನ್ನು ಬದಿಗೆ ಸರಿಸುವ ಫ್ಯಾಸಿಸ್ಟ್ ಮಾದರಿಯನ್ನು ಅನುಸರಿಸುತ್ತಾ ಬರಲಾಗಿದೆ. ‘ರಸ್ತೆ, ಚರಂಡಿ ವಿಚಾರ ಬಿಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ’ ಎಂದು ಆಡಳಿತರೂಢ ಪಕ್ಷದ ನಾಯಕರು ಆಡುತ್ತಿರುವ ಮಾತುಗಳು ಇದನ್ನು ಪುಷ್ಟೀಕರಿಸಿದೆ. ಮೇಲ್ಕಂಡ ಎಲ್ಲ ವಿಚಾರಗಳ ಕುರಿತು ಐದೂ ದಿನ ಗಂಭೀರ ಚರ್ಚೆ ನಡೆಯಲಿದೆ. ಫ್ಯಾಸಿಸ್ಟ್ ಮಾದರಿಯ ಜನ ವಿರೋಧಿ ಸರ್ಕಾರದ ನೀತಿಗಳನ್ನು ಹಿಮ್ಮೆಟ್ಟಿಸಲು ಹಾಗೂ ಭವಿಷ್ಯದ ಹೋರಾಟಗಳ ರೂಪುರೇಷೆ ಸಿದ್ಧತೆಗೆ ವಿಶೇಷ ಚರ್ಚೆ ನಡೆಯಲಿದ್ದು, ನಿರ್ಣಯಗಳನ್ನು ಕೈಗೊಳ್ಳಲಿದೆ.
ಆಯೋಗಗಳ ವಿಶೇಷ ಚರ್ಚೆ: ಜನವರಿ 21 ರಂದು ಒಟ್ಟು ಪ್ರತಿನಿಧಿಗಳನ್ನು ನಾಲ್ಕು ವಿಶೇಷ ಆಯೋಗಗಳಾಗಿ ವಿಂಗಡಿಸಿ ಇಡೀ ದಿನ ಚರ್ಚೆ ನಡೆಸಲಿವೆ. 1. ಆಧುನಿಕಾ ತಯಾರಿಕಾ ವಲಯದ ಕಾರ್ಮಿಕರನ್ನು ಸಂಘಟಿಸುವುದರ ಮಹತ್ವ ಮತ್ತು ಸವಾಲು 2. ವಲಸೆ ಕಾರ್ಮಿಕರ ಪರಿಸ್ಥಿತಿ, ಸಂಘಟನೆ ಸವಾಲು, 3. ಬದಲಾಗುತ್ತಿರುವ ಉದ್ಯೋಗದ ಸ್ವರೂಪಗಳು, 4. ಕಾರ್ಮಿಕ ವರ್ಗದ ಐಕ್ಯತೆ ಮತ್ತು ಕೋಮುವಾದದ ಅಪಾಯಗಳು. =
ಈ ಮಹಾ ಸಮ್ಮೇಳನದ ಜಿಲ್ಲೆಯಲ್ಲಿರು ಸಿಐಟಿಯು ನ 20,ಸಾವಿರ ಸದಸ್ಯರು ಸಮ್ಮೇಳನದ ಉದ್ದೇಶವನ್ನು ಮನೆ-ಮನೆಗೆ ತಲುಪಿಸಲು ಶ್ರಮಿಸುತ್ತಿದ್ದಾರೆ. ಸಮ್ಮೇಳನಕ್ಕೆ ತಗುಲುವ ವೆಚ್ಚ ಭರಿಸಲು ಸದಸ್ಯರು ತಮ್ಮ ಒಂದು ದಿನ ವೇತನ / ಕೂಲಿ ನೀಡುವ ಜೋತೆಗೆ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿ ನೀಡುತ್ತಿದ್ದಾರೆ. ಜಿಲ್ಲೆಯ ರೈತ – ಕಾರ್ಮಿಕರು ಸುಮಾರು 5000 ತೆಂಗಿನ ಕಾಯಿ ನೀಡಿದ್ದಾರೆ

(Visited 1 times, 1 visits today)