ತುಮಕೂರು


ಎಡಿಪಿಐಯನ್ನು ಸಿಲುಕಿಸಲು ಎನ್.ಐ.ಎ ನಡೆಸಿರುವ ಸರ್ಕಾರಿ ಪ್ರಾಯೋಜಿತ ದಾಳಿಯ ವಿರುದ್ಧ ಪ್ರತಿಭಟನೆ.
ನೆಟ್ಟಾರು ಹತ್ಯೆ ಪ್ರಕರಣ ಮತ್ತು ವಿವಿಧ ಸುಳ್ಳು ಪ್ರಕರಣಗಳನ್ನು ನೆಪವಾಗಿಟ್ಟುಕೊಂಡು ಬಿಜೆಪಿ ಸರ್ಕಾರ ಎಸ್ಡಿಪಿಐ ವಿರುದ್ಧ ಷಡ್ಯಂತರ ರೂಪಿಸುತ್ತಿದೆ. ಎಸ್ಡಿಪಿಐ ಸಂಬಂಧಿತ ಕಾರ್ಯಕರ್ತರ ಮತ್ತು ಕಚೇರಿಗಳ ಮೇಲೆ ದಾಳಿ ಮಾಡುತ್ತಿದೆ. ನಿನ್ನೆ ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪಂಗಿಪೇಟೆ ಅವರ ಮನೆಯ ಮೇಲಿನ ದಾಳಿಯೂ ಕೂಡ ಇದರ ಮುಂದುವರಿದ ಭಾಗವೇ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಆರೋಪಿಸಿದೆ. ಇದು ಕೇವಲ ರಾಜಕೀಯ ದ್ವೇಷವಲ್ಲದೆ ಮತ್ತೇನು ಅಲ್ಲ ಇವು ಸರ್ಕಾರಿ ಪ್ರಾಯೋಜಿತ ಸೇಡಿನ ದಾಳಿಗಳಾಗಿದ್ದು ಹೇಗಾದರೂ ಮಾಡಿ ಜನಪರ ಧ್ವನಿಯಾಗಿ ಜನ ವಿರೋಧಿ ಸರ್ಕಾರದ ನೀತಿಗಳನ್ನು ವಿರೋಧಿಸುವ ಎಸ್ಡಿಪಿಐ ಪಕ್ಷವನ್ನು ದುರ್ಬಲಗೊಳಿಸುವ ಅಥವಾ ಸುಳ್ಳು ಪ್ರಕರಣಗಳ ಮೂಲಕ ಸಿಲುಕಿಸುವ ಷಡ್ಯಂತ್ರದ ಭಾಗವಾಗಿದೆ ಎಂದು ಅದು ತನ್ನ ಪತ್ರಿಕಾ ಬಿಡುಗಡೆಯಲ್ಲಿ ಹೇಳಿದೆ.
ಒಂದೆಡೆ ಪ್ರವೀಣ್ ನೆಟ್ಟಾರು ಹತ್ಯ ವಿಚಾರವಾಗಿ ಸರ್ಕಾರ ಸೇಡಿನ ಕುತಂತ್ರದ ಸಂಚು ರೂಪಿಸುತ್ತಿದ್ದರೆ, ಮತ್ತೊಂದೆಡೆ ಮಾಧ್ಯಮಗಳು ಸುಳ್ಳು ಮಾಹಿತಿ ಪ್ರಸಾರ ಮಾಡುತ್ತಿವೆ.
ಎನ್.ಐ.ಎ ನಡೆಸುತ್ತಿರುವ ಈ ಸರ್ಕಾರಿ ಪ್ರಾಯೋಜಿತ ದಾಳಿಗಳ ಬಗ್ಗೆ ಸ್ವತಃ ಎನ್.ಐ.ಎ ಯ ಅಧಿಕೃತ ಹೇಳಿಕೆ ಹೊರಬರುವ ಮುನ್ನವೇ SಆPI ವಿರುದ್ಧ ಕಪೂಲ ಕಲ್ಪಿತ ವರದಿಗಳನ್ನು ಪ್ರಕಟಿಸುವ ತಮ್ಮ ಎಂದಿನ ಚಾಳಿಯನ್ನು ಕೆಲವು ಮಾಧ್ಯಮಗಳು ಮಾಡುತ್ತಿವೆ ಇಂತಹ ಸುಳ್ಳು ವರದಿಗಳನ್ನು ಬಿತ್ತರಿಸುವ ಮೂಲಕ ಮಾಧ್ಯಮ ಎಸ್ಡಿಪಿಐ ವಿರುದ್ಧ ಸರ್ಕಾರ ನಡೆಸುತ್ತಿರುವ ಪಿತೂರಿಯ ಬೆಂಬಲಕ್ಕೆ ನಿಂತಿದೆ ಎಂದು ಪಕ್ಷ ಆರೋಪಿಸಿದೆ.
ಪ್ರವೀಣ್ ನೆಟ್ಟಾರು ಹತ್ಯೆಗೂ ಎಸ್ಡಿಪಿಐ ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದ ಎಸ್ಡಿಪಿಐ, ಈ ಸಂದರ್ಭದಲ್ಲಿ ಎಸ್ಡಿಪಿಐ ಈ ರೀತಿಯ ಯಾವ ಕುತಂತ್ರಗಳಿಗೂ ಬಲಿಯಾಗುವುದಿಲ್ಲ ಮತ್ತು ಹೆದರುವುದೂ ಇಲ್ಲ. ಈ ಸರ್ಕಾರಿ ಪ್ರಾಯೋಜಿತ ದ್ವೇಷದ ದಾಳಿಗಳನ್ನು ನಾವು ಗಟ್ಟಿ ದ್ವನಿಯಲ್ಲಿ ಖಂಡಿಸುತ್ತೇವೆ ಮತ್ತು ಪ್ರತಿಭಟಿಸುತ್ತೇವೆ. ಈ ಹಿನ್ನಲೆಯಲ್ಲಿ ಎಸ್ಡಿಪಿಐ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಅದು ಹೇಳಿದೆ.

(Visited 2 times, 1 visits today)