ಮಧುಗಿರಿ :

      ಕಲುಷಿತ ನೀರು ಸೇವನೆಯಿಂದಾಗಿ ಅಂಗನವಾಡಿಯ ಶಿಕ್ಷಕಿ ಹಾಗೂ 8 ಜನ ಮಕ್ಕಳು ವಾಂತಿ ಬೇದಿಯಿಂದ ಅಸ್ವಸ್ಥರಾಗಿ ಆಸ್ಪತ್ರೆ ಪಾಲಾಗಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

      ತಾಲ್ಲೂಕಿನ ಪುರವರ ಹೋಬಳಿಯ ಸಂಕಾಪುರ ಗ್ರಾಮದಲ್ಲಿರುವ ಅಂಗನವಾಡಿಯ ಪಕ್ಕದಲ್ಲಿರುವ ಹಾಗೂ ಪುರವರ ಗ್ರಾಮ ಪಂಚಾಯತಿ ವತಿಯಿಂದ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು ಅದೆ ನೀರನ್ನು ಅಡುಗೆ ಬಳಸಿ ತಯಾರಿಸಿದ ಆಹಾರ ಸೇವಿಸಿದ ಮಕ್ಕಳು ಅಸ್ವಸ್ಥರಾಗಿದ್ದಾರೆ. ಅಂಗನವಾಡಿ ಮಕ್ಕಳಾದ ನರಸಿಂಹಮೂರ್ತಿ. ರಕ್ಷಿತ್. ದಿವ್ಯ. ಚೇತನ್. ಪವನ್. ಚೈತ್ರ, ನರಸಿಂಹ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಬ್ಬರನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

      ಅಂಗನವಾಡಿಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಅಡುಗೆ ಸಹಾಯಕರು ನಿವೃತ್ತಿ ಯಾಗಿದ್ದಾರೆ. ಆದರೆ ಇದುವರೆವಿಗೂ ಆ ಹುದ್ದೆಯನ್ನು ಭರ್ತಿ ಸಿಡಿಪಿಓ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಪಂಚಾಯತಿ ವತಿಯಿಂದ ಶುದ್ಧ ನೀರಿನ ಘಟಕದ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

      ಗ್ರಾಮಸ್ಥ ಮಹಾದೇವ್ ಮಾತನಾಡಿ ಅಂಗನವಾಡಿಯ ಪಕ್ಕದಲ್ಲಿಯೇ ಮೋರಿ ಬಳಿಯಿರುವ ಕೊಳಾಯಿ ಯಲ್ಲಿನ ನೀರನ್ನು ಬಳಸಲಾಗಿರುವುದೆ ಘಟನೆಗೆ ಕಾರಣ ಎಂದು ಆರೋಪಿಸಿದ್ದಾರೆ.

(Visited 10 times, 1 visits today)